ಕೊಣಾಜೆ: ಯಾವುದೇ ಕ್ಷೇತ್ರಕ್ಕೆ ಕಳೆ ಬರಬೇಕಾದರೆ ಅಲ್ಲಿ ನಿರಂತರ ಭಜನ ಕಾರ್ಯಕ್ರಮ ನಡೆಸುವುದು ಉತ್ತಮ ಎಂದು ಅಯ್ಯಪ್ಪ ಸ್ವಾಮಿ ಮಂದಿರ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಸುರೇಶ್ ಚೌಟ ಹೇಳಿದರು.
ಅಸೈಗೋಳಿ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ 18 ದಿನ ನಡೆಯಲಿರುವ ಭಜನ ಸಂಕೀರ್ತನೆಗೆ ಚಾಲನೆ ನೀಡಿ ಮಾತನಾಡಿದರು.
ಅಸೈಗೋಳಿ ಪ್ರದೇಶದಲ್ಲಿ ಅತ್ಯಗತ್ಯ ಎನಿಸಿರುವ ಮಂದಿರಕ್ಕೆ ಭಕ್ತರು ಸಹಕಾರ ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು ಮನವಿ ಮಾಡಿದರು.
ಆರ್ಥಿಕ ಸಮಿತಿ ಸಂಚಾಲಕ ಮಂಜುನಾಥ ಆಳ್ವ,ಭಜನ ಸಂಚಾಲಕ ಗಣೇಶ್ ಅಸೈಗೋಳಿ ಸೈಟ್,ಸ್ವಾಗತ ಸಮಿತಿ ಸಂಚಾಲಕ ನಾರಾಯಣ ರೈ ಕಕ್ಕೆಮಜಲು, ಪ್ರಧಾನ ಕಾರ್ಯದರ್ಶಿ ಚೇತನ್ ಅಸೈಗೋಳಿ, ಮಹಿಳಾ ಸಂಚಾಲಕಿ ದೇವಕಿ ಮೊದಲಾದವರು ಉಪಸ್ಥಿತರಿದ್ದರು.
ಆನಂದ ಕೆ.ಅಸೈಗೋಳಿ ಸ್ವಾಗತಿಸಿ,ಶ್ರೀನಿವಾಸ ಶೆಟ್ಟಿ ಪುಲ್ಲು ಪ್ರಾಸ್ತಾವಿಸಿ,ತ್ಯಾಗಂ ಹರೇಕಳ ವಂದಿಸಿ,ಶಿವಪ್ರಸಾದ್ ಕಕ್ಕೆಮಜಲು ನಿರೂಪಿಸಿದರು.