Advertisement

ಅಯ್ಯಪ್ಪ ಭಕ್ತ ಉಪೇಂದ್ರ ಪೂಜಾರಿ ಅವರ 19ನೇ ವರ್ಷದ ಪಾದಯಾತ್ರೆ

05:05 PM Dec 18, 2018 | Team Udayavani |

ಮುಂಬಯಿ: ಅಯ್ಯಪ್ಪ ಸ್ವಾಮಿಯ ಪರಮ ಭಕ್ತ, ಸಾಧನೆಯನ್ನೇ ಬದುಕಾಗಿ ಮಾಡಿಕೊಂಡಿರುವ ಉಪೇಂದ್ರ ಪೂಜಾರಿ ಅವರು ಪ್ರಸ್ತುತ 19 ನೇ ವರ್ಷದ ಪಾದಯಾತ್ರೆ ಮಾಡಿ ಶಬರಿಗಿರಿವಾಸ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಮುಂದಾಗಿದ್ದಾರೆ.

Advertisement

ಪಾದಯಾತ್ರೆಯು ಡಿ. 17 ರಂದು  ಬೆಳಗ್ಗೆ ಮುಂಬಯಿ ದಹಿಸರ್‌ನಲ್ಲಿರುವ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ಮಾಲಾಧಾರಣೆ ಮಾಡಿ, ಮಧ್ಯಾಹ್ನ ದಹಿಸರ್‌ನಲ್ಲಿರುವ ಅಯ್ಯಪ್ಪ ಚಾರಿಟೇಬಲ್‌ ಟ್ರಸ್ಟ್‌ ನ ಗುರುಸ್ವಾಮಿ ಶ್ರೀ  ವಿನಯ್‌ರವರ ನೇತೃತ್ವದಲ್ಲಿ ಅಯ್ಯಪ್ಪ ಪೂಜೆ ಮಾಡಿ ಪಾದಯಾತ್ರೆ ಪ್ರಾರಂಭಿಸಿದ್ದಾರೆ. ಈ ವರ್ಷದ ಪಾದಯಾತ್ರೆಯು ಅಷ್ಟ ವಿನಾಯಕ, ಪಂಡರಾಪುರ, ಮಂತ್ರಾಲಯದ ದರ್ಶನ ಮಾಡಿ, ತಿರುಪತಿ ಬಾಲಾಜಿಯ ದರ್ಶನಗೈಯಲಿದ್ದಾರೆ. 

ತಿರುಪತಿ ಬಾಲಾಜಿಯ ದರ್ಶನದ ಬಳಿಕ, ತಮಿಳುನಾಡಿನ ಪಳನಿ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ನಂತರ ಶಬರಿ ಮಲೆಗೆ ಪಾದಯಾತ್ರೆಗೈಯಲಿದ್ದಾರೆ.

ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಮುಖಾಂತರ ಪಾದಯಾತ್ರೆ ಮಾಡುವ ಉಪೇಂದ್ರ ಪೂಜಾರಿ ಅವರು ಈ ಹಿಂದಿನ 18 ವರ್ಷದ ಪಾದಯಾತ್ರೆಯಲ್ಲಿ ಒಟ್ಟು ಶಬರಿಮಲೆಗೆ 14 ಬಾರಿ, ತಿರುಪತಿ ಬಾಲಾಜಿಗೆ 9 ಬಾರಿ, ಮಂತ್ರಾಲಯ ರಾಘವೇಂದ್ರ ಸ್ವಾಮಿಯ ದರ್ಶನ 8 ಬಾರಿ,  ಪಂಡರಾಪುರ ಪಾಂಡುರಂಗ ಸ್ವಾಮಿಯ ದರ್ಶನ 9 ಬಾರಿ, ಶಿರ್ಡಿ ಸಾಯಿಬಾಬಾ ಮಂದಿರಕ್ಕೆ 3 ಬಾರಿ, ಅಷ್ಟ ವಿನಾಯಕ ಒಂದು ಬಾರಿ, ಆಲಂದಿ ಜ್ಞಾನದೇವರ ದರ್ಶನ 3 ಸಲ, ಶನಿಸಿಂಗ್ನಾಪುರಕ್ಕೆ ಒಂದು ಬಾರಿ,  ಅಕಲ್‌ಸ್ವಾಮಿ ಸಮರ್ಥ ದೇವರ ದರ್ಶನ ಎರಡು ಬಾರಿ, ಗಾಣಗಪುರ ದತ್ತದೇವರ ದರ್ಶನ 2 ಬಾರಿ ಪಾದಯಾತ್ರೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next