Advertisement
ಮಂಡಲ ಪೂಜೆ ಮತ್ತು ಮಕರಜ್ಯೋತಿ ಸಂದರ್ಭ ಪ್ರತೀ ದಿನ 25 ಸಾವಿರ ಮಂದಿಗೆ ಅವಕಾಶವಿದೆ. ಆದರೆ ಆನ್‌ಲೈನ್ ಬುಕಿಂಗ್ ಮಾಡಿದವರಿಗೆ ಮಾತ್ರ ದರ್ಶನ ಭಾಗ್ಯ ಪ್ರಾಪ್ತಿಯಾಗ ಲಿದೆ. ಹೀಗಾಗಿ ರಾಜ್ಯದ ಲಕ್ಷಾಂತರ ಭಕ್ತರು ಹಿಂದೇಟು ಹಾಕುವಂತಾಗಿದೆ.
ರಾಜ್ಯದಿಂದ ಪ್ರತೀ ವರ್ಷ 10ರಿಂದ 15 ಲಕ್ಷ ಭಕ್ತರು ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಪ್ರವೇಶ ಮಿತಿ ಇದ್ದ ಕಾರಣ ಯಾತ್ರೆ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ.ಈ ಬಾರಿಯೂ ಷರತ್ತು ವಿಧಿಸಿರುವುದರಿಂದ ಹೆಚ್ಚಿನ ಸಂಖ್ಯೆಯ ಭಕ್ತರಿಗೆ ಅವಕಾಶ ಸಿಗದು. ನಿರ್ಬಂಧಗಳ ಬಗ್ಗೆ ರಾಜ್ಯದ ಅಯ್ಯಪ್ಪ ದೇವಾಲಯಗಳಲ್ಲಿ ಭಕ್ತರಿಗೆ ಮಾಹಿತಿ ನೀಡಲಾಗುತ್ತಿದೆ. ಆನ್‌ಲೈನ್ ಬುಕ್ಕಿಂಗ್ ಮಾಡದೆ ಯಾತ್ರೆ ಕೈಗೊಳ್ಳಬೇಡಿ. ಇರುಮುಡಿ ಕಟ್ಟುವ ಮುನ್ನ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸೂಚನೆ ನೀಡಲಾಗುತ್ತಿದೆ. ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡಿರುವವರಿಗೆ ಮಾತ್ರ ಇರುಮುಡಿ ಕಟ್ಟಲು ಕೆಲವು ದೇವಾಲಯಗಳಲ್ಲಿ ಸೂಚನೆ ನೀಡಲಾಗಿದೆ
Related Articles
Advertisement
ಇದನ್ನೂ ಓದಿ:ವೀಕ್‌ಎಂಡ್ ಹುಮಸ್ಸಿನಲ್ಲಿದ್ದ ಜನರಿಗೆ ಕಿರಿಕಿರಿ ಉಂಟು ಮಾಡಿದ ಮಳೆ
ನ. 16ರಿಂದ ಪ್ರಾರಂಭಈ ಬಾರಿ ಮಂಡಲ ಪೂಜೆ ದರ್ಶನ ನ. 16ರಿಂದ ಪ್ರಾರಂಭವಾಗಿ ಡಿ. 27ರ ವರೆಗೆ ಇರಲಿದೆ. ಬಳಿಕ 2 ದಿನ ದೇಗುಲ ಮುಚ್ಚಿ ಮಕರಜ್ಯೋತಿ ಪೂಜೆಗೆ ಡಿ. 30ರಿಂದ ಮತ್ತೆ ತೆರೆಯಲಾಗುತ್ತದೆ. ಜ. 20ರ ವರೆಗೆ ದರ್ಶನಕ್ಕೆ ಅವಕಾಶ ಇದೆ. ಅಯ್ಯಪ್ಪ ದರ್ಶನಕ್ಕಾಗಿ ದೇವಸ್ವಂ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅ. 17ರಿಂದ 21ರ ವರೆಗೆ ಮತ್ತು ನ. 3ರಿಂದ 31ರ ವರೆಗೆ ಆನ್‌ಲೈನ್ ಬುಕಿಂಗ್ ಮಾಡಬಹುದಾಗಿದೆ. ವಂಚನೆಗೆ ಬ್ರೇಕ್
ಕಳೆದ ವರ್ಷ ನಕಲಿ ಪಾಸ್ ನೀಡಿ ವಂಚಿಸಿದ್ದ ಹಿನ್ನೆಲೆಯಲ್ಲಿ ಈ ಬಾರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಲಾಗಿದೆ. ದೇವಸ್ವಂ ಮಂಡಳಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆಧಾರ್ ಕಾರ್ಡ್ ಸಹಿತ ಪ್ರತೀ ಭಕ್ತರ ಸಂಪೂರ್ಣ ಮಾಹಿತಿ ಪಡೆದು ಇ-ಟಿಕೆಟ್ ನೀಡಲಾಗುತ್ತದೆ. ಅದನ್ನು ಡೌನ್‌ಲೋಡ್ ಮಾಡಿ ಪಂಪಾ ಪ್ರವೇಶ ಸಂದರ್ಭದಲ್ಲೇ ತೋರಿಸಬೇಕು. ಅಲ್ಲಿ ಮತ್ತೂಂದು ಅಧಿಕೃತ ಪಾಸ್ ನೀಡಲಾಗುತ್ತದೆ.