Advertisement

ಮೊದಲ ಡೋಸ್ ಲಸಿಕೆ ಪಡೆದಿದ್ದರೂ ಬದುಕುಳಿಯಲಿಲ್ಲ ನಟಿ ರಿಂಕು ಸಿಂಗ್

05:19 PM Jun 04, 2021 | Team Udayavani |

ಮುಂಬೈ:  ಬಾಲಿವುಡ್ ನ ಡ್ರೀಮ್ ಗರ್ಲ್ ಸಿನಿಮಾದಲ್ಲಿ ಸಹನಟಿಯಾಗಿ ಅಭಿನಯಿಸಿದ್ದ ರಿಂಕು ಸಿಂಗ್ ನಿಕುಂಬ ಅವರು ಕೋವಿಡ್ ಸೋಂಕಿನಿಂದಾಗಿ ಇಂದು ( ಜೂ.04)  ಸಾವನ್ನಪ್ಪಿದ್ದಾರೆ.

Advertisement

ಇವರಿಗೆ ಮೇ. 25 ರಂದು ಕೋವಿಡ್ ಪಾಸಿಟಿವ್ ಸೋಂಕು ದೃಢಪಟ್ಟಿತ್ತು. ಮನೆಯಲ್ಲಿಯೇ ಐಸೋಲೇಷನ್ ನಲ್ಲಿದ್ದರು. ಆದರೆ, ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ ಆಸ್ಪತ್ರಗೆ ದಾಖಲಾಗಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾಳೆ.

ಮೊದಲ ಡೋಸ್ ಲಸಿಕೆ ಪಡೆದಿದ್ದರು :

ಇನ್ನು ರಿಂಕು ಸಿಂಗ್ ಅವರು ಮೇ 07 ರಂದು ಮೊದಲ ಡೋಸ್ ಲಸಿಕೆ ಪಡೆದಿದ್ದರು. ಎರಡನೇ ಡೋಸ್ ಪಡೆಯಲು ಉತ್ಸುಕರಾಗಿದ್ದರು. ಆದರೆ, ಅಷ್ಟರಲ್ಲಿಯೇ ಕೋವಿಡ್ ಪಾಸಿಟಿವ್ ಸೋಂಕು ದೃಢ ಪಟ್ಟಿತ್ತು. ಮಹಾಮಾರಿ ಸೋಂಕಿನಿಂದ ವಿರುದ್ಧ ಸೋತು ಪ್ರಾಣ ಚೆಲ್ಲಿದ್ದಾರೆ ಎಂದು ಮೃತಳ ಸಹೋದರ ಸಂಬಂಧಿ ಮಾಧ್ಯಮಗಳಿಗೆ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ರಿಂಕು ಅವರು ಜಾಹೀರಾತು ಶೂಟಿಂಗ್ ಗಾಗಿ ಗೋವಾಗೆ ತೆರಳಬೇಕಿತ್ತು. ಆದರೆ, ಮನೆಯವರ ಅಸಮ್ಮತಿಯಿಂದಾಗಿ ಪ್ರವಾಸ ಮೊಟಕುಗೊಳಿಸಿ ಮನೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next