Advertisement

ಆಧಾರ್‌ನಿಂದ ಆಯುಷ್ಮಾನ್‌

12:30 AM Jan 07, 2019 | |

ಅಮೃತಸರ: ಆಧಾರ್‌ ಅನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದರಿಂದಾಗಿ ಆಯುಷ್ಮಾನ್‌ ಭಾರತ್‌ನಂಥ ಮೂರು ಯೋಜನೆಗಳನ್ನು ಜಾರಿಗೊಳಿಸಲು ಅಗತ್ಯ ಹಣ ಉಳಿತಾಯವಾಗಿದೆ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

Advertisement

ಆಧಾರ್‌ ಮೂಲಕ ಸಬ್ಸಿಡಿ ನೀಡುವುದರಿಂದಾಗಿ ಕಳೆದ ಕೆಲವು ವರ್ಷಗಳಿಂದ 2018 ಮಾರ್ಚ್‌ ವರೆಗೆ 90 ಸಾವಿರ ಕೋಟಿ ರೂ. ಉಳಿತಾಯವಾಗಿದೆ. ಹಲವು ನಕಲಿ, ಅಸ್ತಿತ್ವದಲ್ಲೇ ಇಲ್ಲದ ಹಾಗೂ ಖೋಟಾ ಫ‌ಲಾನುಭವಿಗಳನ್ನು ನಿವಾರಿಸಲು ಆಧಾರ್‌ನಿಂದ ಸಾಧ್ಯವಾಗಿದೆ. ಅಷ್ಟೇ ಅಲ್ಲ, ಆಧಾರ್‌ ಅನ್ನು ಅನುಷ್ಠಾನಗೊಳಿಸುವುದರಿಂದ ಭಾರತವು 77 ಸಾವಿರ ಕೋಟಿ ರೂ.ಗಳನ್ನು ಪ್ರತಿ ವರ್ಷ ಉಳಿಸಬಹುದು ಎಂದು ವಿಶ್ವ ಬ್ಯಾಂಕ್‌ ವರದಿ ಮಾಡಿದೆ ಎಂದು ಜೇಟಿÉ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಆಧಾರ್‌ ಯೋಜನೆ ಯಶಸ್ವಿಯಾಗಿ ಜಾರಿಗೊಂಡಿದೆ. ಯುಪಿಎ ಸರ್ಕಾರ ಇದನ್ನು ಅರೆಮನಸಿನಿಂದ ಜಾರಿಗೊಳಿಸಿತ್ತು ಎಂದು  ಜೇಟ್ಲಿ ಟೀಕಿಸಿದ್ದಾರೆ.

ಡ್ರೈವಿಂಗ್‌ ಲೈಸನ್ಸ್‌ಗೆ ಆಧಾರ್‌?: ಎಲ್‌ಪಿಜಿ ನೇರ ನಗದು ಹಾಗೂ ಇತರ ಸ್ಕೀಮ್‌ಗಳಿಗೆ ಕಡ್ಡಾಯವಾಗಿ ಆಧಾರ್‌ ಜೋಡಣೆ ಮಾಡಿರುವ ಕೇಂದ್ರ ಸರ್ಕಾರ ಇದೀಗ, ಡ್ರೈವಿಂಗ್‌ ಲೈಸೆನ್ಸ್‌ಗೂ ಆಧಾರ್‌ ಲಿಂಕ್‌ ಮಾಡುವುದನ್ನು ಕಡ್ಡಾಯಗೊಳಿಸಲಿದೆ. ಶೀಘ್ರದಲ್ಲೇ ಈ ಬಗ್ಗೆ ಕಾನೂನು ತರಲಿದ್ದೇವೆ ಎಂದು ಪಂಜಾಬ್‌ನ ಫ‌ಗ್ವಾರಾದಲ್ಲಿ ಕಾನೂನು ಸಚಿವ ರವಿಶಂಕರ ಪ್ರಸಾದ್‌ ಹೇಳಿದ್ದಾರೆ.

ಅಪಘಾತ ಮಾಡಿರುವ ವ್ಯಕ್ತಿ ಸ್ಥಳದಿಂದ ಕಾಲ್ಕಿತ್ತು ಹೊಸದೊಂದು ಡಿಎಲ್‌ ಮಾಡಿಸಿಕೊಳ್ಳುತ್ತಾನೆ. ಇದರಿಂದ ಆತನನ್ನು ಪತ್ತೆ ಮಾಡಲಾಗುವುದಿಲ್ಲ. ಆದರೆ, ಆಧಾರ್‌ ಲಿಂಕ್‌ ಮಾಡಿದರೆ, ನಿಮ್ಮ ಹೆಸರು ಬದಲಿಸಿದರೂ ಬಯೋಮೆಟ್ರಿಕ್‌ನಲ್ಲಿ ಸಿಕ್ಕಿ ಬೀಳುತ್ತಾನೆ. ನಕಲಿ ಡಿಎಲ್‌ ಮಾಡಿಸಿಕೊಳ್ಳಲು ಹೋದಾಗ ಆತನಿಗೆ ಈಗಾಗಲೇ ಡಿಎಲ್‌ ಇರುವುದು ತಿಳಿಯುತ್ತದೆ ಎಂದು ಪ್ರಸಾದ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next