Advertisement

ಆಯುಷ್ಮಾನ್‌ ಕಾರ್ಡ್‌; ಬೆಳಗಾವಿ ವಿಭಾಗ ರಾಜ್ಯಕ್ಕೆ ಪ್ರಥಮ

09:24 AM Sep 18, 2019 | Team Udayavani |

ಧಾರವಾಡ: ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ ಕಾರ್ಡ್‌ ವಿತರಣೆಯಲ್ಲಿ ಧಾರವಾಡ ಜಿಲ್ಲೆ ರಾಜ್ಯಕ್ಕೆ ಎಂಟನೇ ಹಾಗೂ ಬೆಳಗಾವಿ ವಿಭಾಗ ಪ್ರಥಮ ಸ್ಥಾನದಲ್ಲಿದೆ ಎಂದು ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕ ಡಾ| ಗಿರಿಧರ ಆರ್‌. ಕುಕನೂರ ಹೇಳಿದರು.

Advertisement

ನಗರದ ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಜರುಗಿಸಿ ಮಾತನಾಡಿ, ಎಬಿಎಆರ್‌ಕೆ ಯೋಜನೆಯಡಿ ಬೆಳಗಾವಿ ವಿಭಾಗದ ಬೆಳಗಾವಿ ಜಿಲ್ಲೆಯಲ್ಲಿ 1,86,436 ಕಾರ್ಡ್‌ ವಿತರಣೆಯಾಗಿದ್ದು, 11,981 ಜನ ಲಾಭ ಪಡೆದಿದ್ದಾರೆ. ಬಾಗಲಕೋಟೆ 95,731 ಕಾರ್ಡ್‌ ವಿತರಣೆ-7,233 ಜನ ಸೌಲಭ್ಯ; ವಿಜಯಪುರ 91,789 ಕಾರ್ಡ್‌ ವಿತರಣೆ-4,739 ಜನ ಸೌಲಭ್ಯ; ಹಾವೇರಿ 2,11,920 ಕಾರ್ಡ್‌ ವಿತರಣೆ-4,198 ಜನ ಸೌಲಭ್ಯ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 1,57,339 ಕಾರ್ಡ್‌ ವಿತರಣೆಯಾಗಿದ್ದು 3,979 ಜನ ಸೌಲಭ್ಯ ಪಡೆದಿದ್ದಾರೆ. ಬೆಳಗಾವಿ ವಿಭಾಗದಲ್ಲಿ ಈ ಯೋಜನೆಯಡಿ 10,43,570 ಎಬಿಎಆರ್‌ಕೆ ಕಾರ್ಡ್‌ ವಿತರಿಸಲಾಗಿದ್ದು, 46,218 ಜನ ಫಲಾನುಭವಿಗಳು ಯೋಜನೆ ಸೌಲಭ್ಯ ಪಡೆದಿದ್ದಾರೆ ಎಂದರು.

ಆಯುಷ್ಮಾನ್‌ ಯೋಜನೆಯನ್ನು ಹೆಚ್ಚು ಜನರಿಗೆ ತಲುಪಿಸಲು ರಾಜ್ಯಾದ್ಯಂತ ಸೆ.15ರಿಂದ 30ರವರೆಗೆ ವಿಶೇಷ ಪಾಕ್ಷಿಕ ಅಭಿಯಾನ ಆಯೋಜಿಸಲಾಗಿದೆ. ಜಿಲ್ಲಾಸ್ಪತ್ರೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ವಿಭಾಗದ ಉಪ ನಿರ್ದೇಶಕ ಡಾ| ಅಪ್ಪಾಸಾಹೇಬ್‌ ನರಹಟ್ಟಿ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ|ಯಶವಂತ ಮದಿನಕರ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಎಸ್‌.ಎಂ. ಹೊನಕೇರಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ| ಶಶಿ ಪಾಟೀಲ, ಡಿಇಐಸಿಯ ತಜ್ಞ ವೈದ್ಯ ಡಾ| ಎನ್‌.ಎಂ. ಅಂಗಡಿ ಇದ್ದರು.

ಆಯುಷ್ಮಾನ್‌ ಯೋಜನೆಯಡಿ ಆರೋಗ್ಯ ಸೇವೆ ಪಡೆಯಲು ಕಡ್ಡಾಯವಾಗಿ ಕಾರ್ಡ್‌ ಅಗತ್ಯವಿಲ್ಲ. ಚಿಕಿತ್ಸೆಗೆ ಬರುವವರು ತಮ್ಮ ಕುಟುಂಬದ ಪಡಿತರ ಕಾರ್ಡ್‌ ಹಾಗೂ ಆಧಾರ ಕಾರ್ಡ್‌ ತಂದರೆ ಸಾಕು ಚಿಕಿತ್ಸೆ ನೀಡಲಾಗುತ್ತದೆ. ಎಬಿಎಆರ್‌ಕೆ ಕಾರ್ಡ್‌ ಪಡೆಯುವುದರಿಂದ ಯೋಜನಾ ಸೌಲಭ್ಯ ಪಡೆಯುವ ಪ್ರಕ್ರಿಯೆಗೆ ಹೆಚ್ಚು ಸಹಾಯವಾಗುತ್ತದೆ. • ಡಾ| ಗಿರಿಧರ ಕುಕನೂರ, ಜಂಟಿ ನಿರ್ದೇಶಕ, ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ವಿಭಾಗ
Advertisement

Udayavani is now on Telegram. Click here to join our channel and stay updated with the latest news.

Next