Advertisement
ಈ ಹಿಂದೆ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ.ಗಳ ವಿಮೆ ನೀಡಲಾಗುತ್ತಿತ್ತು. ಇದೀಗ ಪ್ರತ್ಯೇಕವಾಗಿ ಕುಟುಂಬದಲ್ಲಿರುವ ಹಿರಿಯ ನಾಗರಿಕರಿಗೆಂದೇ 5 ಲಕ್ಷ ರೂ.ಗಳ ಹೆಚ್ಚುವರಿ ವಿಮೆ ನೀಡಲಾಗುತ್ತಿದೆ. ಇದರ ಅನ್ವಯ ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿರುವ ಕುಟುಂಬಗಳಲ್ಲಿ 70 ವರ್ಷ ಮೇಲ್ಪಟ್ಟ ನಾಗರಿಕರು ಇದ್ದರೆ ಅವರ ವಿಮಾ ಖಾತೆಗೆ ವರ್ಷಕ್ಕೆ 5 ಲಕ್ಷ ರೂ.ಗಳ ಹೆಚ್ಚುವರಿ ಟಾಪ್ ಅಪ್ ಜಮೆಯಾಗಲಿದೆ. ಈ 5 ಲಕ್ಷ ರೂ. ಬರೀ 70 ವರ್ಷ ಮೇಲ್ಪಟ್ಟ ಆ ಹಿರಿಯ ನಾಗರಿಕರಿಗೆ ಮಾತ್ರ ಸಂಬಂಧಿಸಿದಾªಗಿದ್ದು, ಕುಟುಂಬದ ಬೇರೆ ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಾಗುವುದಿಲ್ಲ.
Related Articles
Advertisement
ಕರ್ನಾಟಕದ 2 ಇಎಸ್‌ಐ ಆಸ್ಪತ್ರೆಗೆ ಶಂಕುಸ್ಥಾಪನೆ
ದೇಶಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ 21 ಕ್ರಿಟಕಲ್ ಕೇರ್ ಬ್ಲಾಕ್ ಸ್ಥಾಪನೆಗೆ ಪ್ರಧಾನಿ ಶಿಲಾನ್ಯಾಸ ನೆರವೇರಿಸಿದ್ದು, ಈ ಪೈಕಿ ಕರ್ನಾಟಕದ ಆಸ್ಪತ್ರೆಗಳೂ ಸೇರಿವೆ. ಇದಲ್ಲದೆ, ರಾಜ್ಯದ ಬೊಮ್ಮಸಂದ್ರ ಮತ್ತು ನರಸಾಪುರದಲ್ಲಿ ಇಎಸ್‌ಐ ಆಸ್ಪತ್ರೆಗಳ ಸ್ಥಾಪನೆಗೂ ಪ್ರಧಾನಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಜತೆಗೆ ಮೇಕ್ ಇನ್ ಇಂಡಿಯಾ ಉಪಕ್ರಮದ ಅನ್ವಯ ವೈದ್ಯಕೀಯ ಉಪಕರಣ ಮತ್ತು ಔಷಧಗಳ ಉತ್ಪಾದನೆಗೆ ಉತ್ತೇಜನ ನೀಡಲು ಬೆಂಗಳೂರಿನಲ್ಲಿ ಘಟಕ ಸ್ಥಾಪನೆಗೊಳಿಸುವ ಯೋಜನೆಯನ್ನೂ ಪ್ರಧಾನಿ ಉದ್ಘಾಟಿಸಿದ್ದಾರೆ.
ಬೆಂಗ್ಳೂರಲ್ಲಿ ಎಕ್ಸಲೆನ್ಸ್ ಸೆಂಟರ್ ಉದ್ಘಾಟನೆ
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ನಲ್ಲಿ ಆಯುಷ್ ಸಚಿವಾಲಯ ಪ್ರಾಯೋಜಿತವಾದ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಆಯುರ್ವೇದ ಫಾರ್ ಡಯಾಬಿಟಿಸ್ ಆ್ಯಂಟ್ ಮೆಟಾಬಾಲಿಕ್ ಡಿಸಾರ್ಡರ್ (ಸಿಒಇ)ಎಂಬ ಕೇಂದ್ರವನ್ನೂ ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.
51000 ಮಂದಿಗೆ ನೇಮಕಾತಿ ಪತ್ರ ಕೊಟ್ಟ ಮೋದಿ
51000 ಕ್ಕೂ ಅಧಿಕ ಮಂದಿಗೆ ಸರ್ಕಾರಿ ಉದ್ಯೋಗಗಳ ನೇಮಕಾತಿ ಪತ್ರವನ್ನು ಪ್ರಧಾನಿ ಮೋದಿ ಮಂಗಳವಾರ ನಡೆದ ರೋಜ್‌ಗಾರ್ ಮೇಳದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ವಿತರಿಸಿದ್ದಾರೆ. ಈ ವೇಳೆ ಮಾತನಾಡಿ, ನಮ್ಮ ದೇಶದಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಿಲ್ಲ ಎಂದು ನಂಬುವ ಮನಸ್ಥಿತಿಗಳು ಅಸ್ತಿತ್ವದಲ್ಲಿವೆ. ಆದರೆ, ನಮ್ಮ ಸರ್ಕಾರ ಅವುಗಳನ್ನು ಹಿಮ್ಮೆಟ್ಟಿ ಯುವಜನರಿಗೆ ಪ್ರೋತ್ಸಾಹ ನೀಡಿದೆ. ಗರಿಷ್ಠ ಸಂಖ್ಯೆಯ ಯುವಜನರಿಗೆ ಉದ್ಯೋಗ ಒದಗಿಸುವುದು ನಮ್ಮ ಬದ್ಧತೆಯಾಗಿದ್ದು, ಇದಕ್ಕೆ ಪೂರಕವಾದ ವ್ಯವಸ್ಥೆ ರಚಿಸಲಾಗುತ್ತಿದೆ ಎಂದಿದ್ದಾರೆ.