Advertisement

ಆಯುಷ್ ಸಚಿವಾಲಯ Goaದಲ್ಲಿ ಹೋಮಿಯೋಪತಿ ಸಿದ್ಧ ಚಿಕಿತ್ಸೆ,ಸಂಶೋಧನೆ ಉತ್ತೇಜಿಸುತ್ತಿದೆ:ಸಾವಂತ್‌

06:14 PM Apr 11, 2023 | Team Udayavani |

ಪಣಜಿ: ಆಯುಷ್ ಸಚಿವಾಲಯವು ರಾಜ್ಯದಲ್ಲಿ ಹೋಮಿಯೋಪತಿ, ಯುನಾನಿ ಮತ್ತು ಸಿದ್ಧ ಚಿಕಿತ್ಸಾ ವಿಧಾನಗಳು ಮತ್ತು ಸಂಶೋಧನೆಗಳನ್ನು ಉತ್ತೇಜಿಸುತ್ತದೆ ಎಂದು ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಹೇಳಿದರು.

Advertisement

ಪಣಜಿಯಲ್ಲಿ ಆಯೋಜಿಸಿದ್ದ ವಿಶ್ವ ಹೋಮಿಯೋಪತಿ ದಿನಾಚರಣೆಯ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಗೋವಾ ಹೋಮಿಯೋಪತಿ ಮಂಡಳಿ, ಆರೋಗ್ಯ ನಿರ್ದೇಶನಾಲಯ ಮತ್ತು ಆಯುಷ್ ಸೆಲ್ ಜಂಟಿಯಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಈ ಸಂದರ್ಭದಲ್ಲಿ ಗೋವಾ ಹೋಮಿಯೋಪತಿ ಮಂಡಳಿಯ ವೆಬ್‍ಸೈಟ್‍ಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದರು. ಮುಖ್ಯಮಂತ್ರಿ ಡಾ.ಸಾವಂತ್ ಮಾತನಾಡಿ- ರಾಜ್ಯದಲ್ಲಿ ಕ್ಷೇಮ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದೆ. ಅದಕ್ಕಾಗಿ ಇರುವ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಗೋವಾ ಹೋಮಿಯೋಪತಿ ಮಂಡಳಿಯ ಅಧ್ಯಕ್ಷ ಡಾ.ಬಿಪಿನ್ ಸಾಲ್ಕರ್ ಮಾತನಾಡಿ- ಹೋಮಿಯೋಪತಿಯ ಸಂಸ್ಥಾಪಕ ಡಾ.ಸ್ಯಾಮ್ಯುಯೆಲ್ ಹ್ಯಾನೆಮನ್ ಅವರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ಏಪ್ರಿಲ್ 10 ರಂದು ವಿಶ್ವ ಹೋಮಿಯೋಪತಿ ದಿನವನ್ನು ಆಚರಿಸಲಾಗುತ್ತದೆ.ಹೋಮಿಯೋಪತಿಯ ವೈಶಿಷ್ಟ್ಯವೆಂದರೆ ಅದು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಡಾ.ಮಿನಲ್ ಜೋಶಿ, ಡಾ.ರೂಪಾ ನಾಯ್ಕ್ ಉಪಸ್ಥಿತರಿದ್ದರು. ಡಾ.ರಾಜೇಂದ್ರ ಕಾಣೇಕರ್ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಡಾ.ಮರ್ಲಿನ್ ಟೆಲಿಸ್ ವಂದಿಸಿದರು. ಡಾ.ಪ್ರತಿಷ್ಠಾ ಕುಂಕ್ಲೇಕರ ಕಾರ್ಯಕ್ರಮ ನಿರ್ವಹಿಸಿದರು. ಹೋಮಿಯೋಪತಿ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ಹಿರಿಯ ಹೋಮಿಯೋಪತಿ ಡಾ.ನಾರಾಯಣ ಶಿರೋಡ್ಕರ್ ಮತ್ತು ಡಾ.ಮಾಲಿನಿ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಡಾ.ಸಾಯೇಶ್ ಮಡ್ಕೈಕರ್ ಮತ್ತು ಡಾ.ಅನುಪ ಪ್ರಭು ಅವರಿಗೆ  ಹೋಮಿಯೋಪತಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next