Advertisement

ಪೊಲೀಸರಿಗೆ ಆಯುಷ್‌ ಔಷಧ ವಿತರಣೆ

01:19 PM Apr 29, 2020 | Suhan S |

ಧಾರವಾಡ: ಕೋವಿಡ್ 19 ವೈರಸ್‌ ತಡೆಗಟ್ಟಲು ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಎಲ್ಲ ಪೊಲೀಸ್‌ ಸಿಬ್ಬಂದಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ರೋಗ ನಿರೋಧಕ ಹಾಗೂ ವೈರಾಣು ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಆಯುಷ್‌ ಔಷ ಧಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎಸ್‌ಪಿ ವರ್ತಿಕಾ ಕಟಿಯಾರ್‌ ಹೇಳಿದರು.

Advertisement

ಎಸ್‌ಪಿ ಕಚೇರಿ ಸಭಾಭವನದಲ್ಲಿ ಜಿಲ್ಲಾ ಆಯುಷ್‌ ಇಲಾಖೆ ಹಾಗೂ ಜಿಲ್ಲೆಯ ಆಯುಷ್‌ ವೈದ್ಯರು ನೀಡಿರುವ ಆಯುರ್ವೇದಿಕ್‌ ಚವನಪ್ರಾಶ್‌ ಮತ್ತು ಹೋಮಿಯೋಪತಿಯ ಅರ್ಸಾನಿಕ್‌ ಆಲ್ಬಂ ಮಾತ್ರೆಗಳನ್ನು ಪೊಲೀಸ್‌ ಪೇದೆಗಳಿಗೆ ವಿತರಿಸಿ ಅವರು ಮಾತನಾಡಿದರು.

ಪೊಲೀಸ್‌ ಇಲಾಖೆಯ 753ಕ್ಕೂ ಹೆಚ್ಚು ಸಿಬ್ಬಂದಿ ಚೆಕ್‌ಪೋಸ್ಟ್‌ ಸೇರಿದಂತೆ ವಿವಿಧೆಡೆ ಪ್ರತಿನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಆರೋಗ್ಯ ಪರೀಕ್ಷೆಯೊಂದಿಗೆ ಅವರಲ್ಲಿ ರೋಗನಿರೋಧಕ ಮತ್ತು ವೈರಾಣು ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್‌ ಔಷಧಿ ನೀಡಲಾಗುತ್ತಿದೆ. ಇದು ಪರಿಣಾಮಕಾರಿ ಔಷಧವಾಗಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಹೋಮ್‌ ಕ್ವಾರಂಟೈನ್‌ ದಲ್ಲಿರುವ ವ್ಯಕ್ತಿಗಳಿಗೂ ಆಯುಷ್‌ ಔಷಧ ವಿತರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಜಿಲ್ಲಾ ಆಯುಷ್‌ ಅಧಿಕಾರಿ ಡಾ| ಸಂಗಮೇಶ ಕಲಹಾಳ ಮಾತನಾಡಿ, ಧಾರವಾಡದ ಬಿ.ಡಿ. ಜತ್ತಿ ಹಾಗೂ ಸತ್ತೂರಿನ ಸತ್ಯಸಾಯಿ ಹೋಮಿಯೋಪತಿ ಮೆಡಿಕಲ್‌ ಕಾಲೇಜ್‌ನವರು ಆಯುರ್ವೇದಿಕ್‌ ಔಷಧವನ್ನು ಉಚಿತವಾಗಿ ನೀಡುತ್ತಿದ್ದಾರೆ. ಎಲ್ಲ ಸರ್ಕಾರಿ ಕ್ವಾರಂಟೈನ್‌ ಕೇಂದ್ರಗಳಲ್ಲಿ 70ಕ್ಕೂ ಹೆಚ್ಚು ಖಾಸಗಿ ಆಯುಷ್‌ ವೈದ್ಯರು ಸ್ವಯಂಪ್ರೇರಣೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹುಬ್ಬಳ್ಳಿ ಆಯುರ್ವೇದಿಕ್ ಮಹಾವಿದ್ಯಾಲಯ, ಸಂಜೀವಿನಿ ಮೆಡಿಕಲ್‌ ಕಾಲೇಜು ಹಾಗೂ ಧಾರವಾಡದ ಬಿ.ಡಿ. ಜತ್ತಿ ಹೋಮಿಯೋಪತಿ ಮೆಡಿಕಲ್‌ ಕಾಲೇಜುಗಳು ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ತೆರೆಯಲು ಸಿದ್ಧತೆ ಮಾಡಿಕೊಂಡಿವೆ. ಮುಂದಿನ ದಿನಗಳಲ್ಲಿ 1033 ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲ ಹಂತದ ಆರೋಗ್ಯ ಸಿಬ್ಬಂದಿಗೆ, ಎಲ್ಲ ಅಧಿಕಾರಿಗಳಿಗೆ ಆಯುರ್ವೇದ ಔಷಧಿಯನ್ನು ಆಯುಷ್‌ ಇಲಾಖೆಯಿಂದ ನೀಡಲಾಗುವುದು ಎಂದರು.

ಡಿವೈಎಸ್‌ಪಿ ರವಿ ನಾಯ್ಕ, ಸಿಸಿಐಎಂ ಸದಸ್ಯ ಡಾ| ಶ್ರೀನಿವಾಸ ಬನ್ನಿಗೋಳ, ಎಎಫ್‌ಐ ರಾಜ್ಯ ಪ್ರದಾನ ಕಾರ್ಯದರ್ಶಿ ಡಾ| ಸೋಮಶೇಖರ ಹುದ್ದಾರ, ಡಾ|ಅಮಿತ ಎಂ.ಎಸ್‌., ಡಾ| ವೈ. ರವೀಂದ್ರ, ಡಾ| ತ್ಯಾಗರಾಜ, ಡಾ| ಕಿರಣಕುಮಾರ ಗಡ್ಡಿ, ಪ್ರಶಾಂತ ಕುಬಸದ, ಡಾ| ಕೌಸರ ಆಮಾದಾರ, ಡಾ| ಎ.ಎಸ್‌. ಪ್ರಶಾಂತ, ಡಾ|ಎಚ್‌.ಟಿ. ಹೊಂಬಳ, ಡಾ| ಕಿರಣ ಸಾಣಿಕೊಪ್ಪ, ಆಯುಷ್‌ ನೋಡಲ್‌ ಅಧಿ ಕಾರಿ ಡಾ| ಬಿ.ಪಿ. ಪೂಜಾರಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next