Advertisement

‘ಜಿಲ್ಲೆಯಲ್ಲಿ ಆಯುಷ್‌ ಚಿಕಿತ್ಸೆ ಪರಿಣಾಮಕಾರಿ’

02:45 PM Dec 28, 2017 | |

ಪಡುಪಣಂಬೂರು: ಜಿಲ್ಲೆಯಲ್ಲಿ ಆಯುಷ್‌ ಚಿಕಿತ್ಸೆ ಪರಿಣಾಮಕಾರಿಯಾಗಿದೆ. ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯಲ್ಲಿ 50 ಬೆಡ್‌ನ‌ ಇಂಟಿಗ್ರೇಟೆಡ್‌ ಆಸ್ಪತ್ರೆ ಚಾಲನೆಯಲ್ಲಿದೆ. ಪ್ರಾಕೃತಿಕ ಚಿಕಿತ್ಸಾ ಪದ್ಧತಿಯಿಂದ ಯಾವುದೇ ದುಷ್ಪರಿಣಾಮ ಇಲ್ಲ ಎಂದು ಕೆರೆಕಾಡು ಸರಕಾರಿ ಯುನಾನಿ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ| ಮಹಮ್ಮದ್‌ ನೂರುಲ್ಲಾ ಹೇಳಿದರು. 

Advertisement

ಪಡುಪಣಂಬೂರು ಗ್ರಾಮ ಪಂಚಾಯತ್‌ನ ಬೆಳ್ಳಾಯರು ಕೆರೆಕಾಡಿನ ಸ್ವಾಮಿ ಕೊರಗಜ್ಜನ ಸಭಾವೇದಿಕೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಡಿ.25ರಂದು ನಡೆದ ಉಚಿತ ಆಯುಷ್‌ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು. ಪಡುಪಣಂಬೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಮೋಹನ್‌ ದಾಸ್‌ ಅಧ್ಯಕ್ಷತೆಯನ್ನು ವಹಿಸಿದ್ದರು. ದ.ಕ. ಜಿಲ್ಲಾ ಪಂಚಾಯತ್‌, ಆಯುಷ್‌ ಇಲಾಖೆ, ಪಡುಪಣಂಬೂರು ಗ್ರಾಮ ಪಂಚಾಯತ್‌ ಹಾಗೂ ಕೆ.ಟಿ.ಎಂ. ಫ್ರೆಂಡ್ಸ್‌ನ ಸಂಯುಕ್ತ ಆಶ್ರಯದಲ್ಲಿ ಶಿಬಿರ ನಡೆಸಲಾಯಿತು.

ಪಂಚಾಯತ್‌ನ ಮಾಜಿ ಅಧ್ಯಕ್ಷೆ ಕೊಲ್ಲು ಅವರ ಆರೋಗ್ಯ ತಪಾಸಣೆ ನಡೆಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು. ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಕೊಲ್ನಾಡು ಉತ್ರುಂಜೆ ಭುಜಂಗ ಎಂ. ಶೆಟ್ಟಿ , ಪಡುಪಣಂಬೂರು ಗ್ರಾ.ಪಂ.ನ ಉಪಾಧ್ಯಕ್ಷೆ ಸುರೇಖಾ ಕರುಣಾಕರ್‌, ಸದಸ್ಯೆ ಶ್ವೇತಾ, ಕಾರ್ಯದರ್ಶಿ ಲೋಕನಾಥ ಭಂಡಾರಿ, ಸಿಬಂದಿ ದಿನಕರ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಸವಿತಾ ಶರತ್‌ ಬೆಳ್ಳಾಯರು, ಕೆ.ಟಿ.ಎಂ. ಫ್ರೆಂಡ್ಸ್‌ನ ಅಧ್ಯಕ್ಷ ರಮೇಶ್‌, ಶಿಬಿರದ ವೈದ್ಯಾಧಿಕಾರಿಗಳಾದ ಡಾ| ಮಹಮ್ಮದ್‌ ಅಶ್ಫಾಕ್‌, ಡಾ| ಬಸವರಾಜ್‌, ಡಾ.ದೀಪ್ತಿ, ಡಾ| ರಾಫತ್‌ ಉಪಸ್ಥಿತರಿದ್ದರು. ಬಳ್ಕುಂಜೆ ಆಯುರ್ವೇದ ಚಿಕಿತ್ಸಾಲಯದ ಡಾ.| ಶೋಭಾರಾಣಿ ಸ್ವಾಗತಿಸಿ, ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next