Advertisement

ಕೋವಿಡ್ ಗೆ ಆಯುರ್ವೇದವೇ ಮದ್ದು : ಡಾ|ಶಿವಮೂರ್ತಿ ಮುರುಘಾ ಶರಣ

01:57 PM Aug 13, 2020 | sudhir |

ಹೊಳಲ್ಕೆರೆ: ಕೋವಿಡ್‌-19 ವೈರಸ್‌ನಂತಹ ಹಲವಾರು ಸೋಂಕುಗಳನ್ನು ಭಾರತೀಯ ಪರಂಪರಾಗತ ಪದ್ಧತಿಯಾದ ಆಯುರ್ವೇದ ಚಿಕಿತ್ಸೆಯಿಂದ ಶಮನ ಮಾಡಲು ಅವಕಾಶವಿದೆ ಎಂದು ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ತಾಲೂಕಿನ ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಆಯುರ್ವೇದ ಕಾಲೇಜಿನ ವತಿಯಿಂದ ವೈರಸ್‌ ಡಿಸೀಜಸ್‌ ಮತ್ತು ಆಯುರ್ವೇದ ಮೇಲ್ವಿಚಾರಣೆ ಕುರಿತು ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಶರಣರು ಮಾತನಾಡಿದರು.
ಆಯುರ್ವೇದ ಚಿಕಿತ್ಸೆ ಮೂಲಕ ಎಂತಹ ಕಾಯಿಲೆಗಳನ್ನು ಬೇಕಾದರೂ ನಿಯಂತ್ರಿಸಬಹುದು ಎಂಬುದನ್ನು ತಿರುಕ ನಾಮಾಂಕಿತ ಶ್ರೀ ರಾಘವೇಂದ್ರ ಸ್ವಾಮೀಜಿಯವರು ಈಗಾಗಲೇ ನಿರೂಪಿಸಿದ್ದಾರೆ. ಹಾಗಾಗಿ ಮಲ್ಲಾಡಿಹಳ್ಳಿಯಲ್ಲಿ ಆಯುರ್ವೇದ ಕಾಲೇಜು ಸ್ಥಾಪಿಸುವ ಮೂಲಕ ಜಗತ್ತಿಗೆ ಆಯುರ್ವೇದದ ಮಹತ್ವವನ್ನು ತೋರಿಸಿಕೊಟ್ಟಿದ್ದಾರೆ ಎಂದು ಬಣ್ಣಿಸಿದರು.

ಉಡುಪಿಯ ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜಿನ ನಿವೃತ್ತ ಅಧಿಧೀಕ್ಷಕ ಡಾ| ಮುರಳೀಧರ ಶರ್ಮ ಮಾತನಾಡಿ, ವೈರಲ್‌ ಡಿಸೀಜಸ್‌ಗಳನ್ನು ಎದುರಿಸಬೇಕಾದರೆ ನಾವು ಸೇವಿಸುವ ಆಹಾರ ಪದ್ಧತಿಯನ್ನು ನಾವು ಅರಿತಾಗ ಮಾತ್ರ ಸಾಧ್ಯ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕೆಂದರು.

ರಾಜ್ಯ ಮತ್ತು ದೇಶದ ಸುಮಾರು 2500ಕ್ಕೂ ಹೆಚ್ಚಿನ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳು ಆನ್‌ಲೈನ್‌ ಸಮಾವೇಶದಲ್ಲಿ
ಪಾಲ್ಗೊಂಡಿದ್ದರು. ಉತ್ತರಪ್ರದೇಶದ ವಾರಣಾಸಿ ಆಯುರ್ವೇದ ಕಾಲೇಜಿನ ಮುಖ್ಯಸ್ಥ ಡಾ| ಪಿ.ಎಸ್‌.ಬ್ಯಾಡಗಿ, ಅನಾಥಸೇವಾಶ್ರಮದ ಮೇಲ್ವಿಚಾರಕ ಡಾ| ಎಚ್‌.ಎಸ್‌. ಸಿದ್ರಾಮಸ್ವಾಮಿ, ಅ ಧೀಕ್ಷಕ ಡಾ| ಪವನ್‌ಕುಮಾರ್‌ ಕಂಬಾಳಿ ಮಠ್,
ಉಪಪ್ರಾಚಾರ್ಯ ಡಾ| ಕೆ.ವಿ.ರಾಜಶೇಖರ್‌, ಉಪನ್ಯಾಸಕರುಗಳಾದ ಡಾ| ನಿರಂಜನ ಪ್ರಭು, ಡಾ| ಉಷಾದೇವಕಿ, ಡಾ| ಜೋಸೆಫ್‌, ಡಾ| ರಾಧಿಕಾ, ಪ್ರಾಚಾರ್ಯ ಡಾ| ಎಸ್‌. ನಾಗರಾಜ್‌, ಡಾ| ರಾಮಚಂದ್ರ ಆಯುರ್ವೇದ ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next