Advertisement
ಪಥ್ಯದ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಅಷ್ಟು ಮಾಡಿದರೆ ನಿಮ್ಮ ಕಾಯಿಲೆ ನೂರಕ್ಕೆ ನೂರರಷ್ಟು ಗುಣಮುಖವಾಗುತ್ತೆ. ಆದರೆ ಇದು ಕೆಲವೇ ದಿನಗಳಲ್ಲಿ ಆಗಿ ಬಿಡುವುದಿಲ್ಲ. ಸ್ವಲ್ಪ ಸಮಯ ತೆಗೆದುಕೊಳ್ಳುತ್ತೆ ಎಂದು ಹೇಳುತ್ತಾ ನಾರು ಬೇರು ಸೇರಿಸಿದ ಗುಳಿಗೆಯನ್ನೋ, ಕಷಾಯವನ್ನೋ ನೀಡುತ್ತಿದ್ದ ನಾಟಿ ವೈದ್ಯರ ಕಾಲವೊಂದಿತ್ತು. ಅವರನ್ನು ಮೂಲೆಗುಂಪಾಗಿಸಿ ಅಲೋಪತಿ, ಹೋಮಿಯೋಪತಿ ಇತ್ಯಾದಿಗಳು ಬಂದವು. ಅದೇ ಕಾರಣದಿಂದ ಸ್ವಲ್ಪ ದಿನ ಆಯುರ್ವೇದ ವೈದ್ಯ ಪದ್ಧತಿಗೆ ಡಿಮ್ಯಾಂಡ್ ಇರಲಿಲ್ಲ ನಿಜ. ಆದರೀಗ ಭಾರತೀಯ ಆಯುರ್ವೇದಕ್ಕೆ ಜಾಗತಿಕ ಮನ್ನಣೆ ದೊರೆತಿದೆ. ಗಿಡಮೂಲಿಕೆಗಳಿಂದ ತಯಾರಾದ ಔಷಧಗಳಿಂದ ರೋಗಗಳು ಬೇಗ ಗುಣವಾಗುತ್ತೆ. ಅದರಲ್ಲಿ ಭಾರತೀಯ ಆಯುರ್ವೇದ ಪದ್ಧತಿಯೂ ಉತ್ತಮವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದೆ. ಜೊತೆಗೆ ಅದರ ಪ್ರಚಾರಕ್ಕೂ ನಿಂತಿದೆ. ಹೀಗಾಗಿ ಆಯುರ್ವೇದ ವೈದ್ಯರಿಗೆ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿದೆ.
ಆಯುರ್ವೇದಿಕ್ ಡಾಕ್ಟರ್ ಆಗಲು ಪಿಯುಸಿಯಲ್ಲಿ ಪಿಸಿಬಿ ಜೊತೆಗೆ ಲಾಂಗ್ವೇಜ್‌ನಲ್ಲಿ ಸಂಸ್ಕೃತ ತೆಗೆದುಕೊಳ್ಳುವುದು ಒಳಿತು. ಬಳಿಕ ಬ್ಯಾಚುಲರ್ ಆಫ್ ಆಯುರ್ವೇದಿಕ್ ಮೆಡಿಸಿನ್ ಆಂಡ್ ಸರ್ಜರಿ (ಬಿಎಎಂಎಸ್)ಯಲ್ಲಿ ಎಂಟ್ರೆನ್ಸ್ ಮತ್ತು ಗ್ರಾಜುಯೇಷನ್ ಪೂರೈಸಬೇಕು. ಆನಂತರ ಸ್ನಾತಕೋತ್ತರ ಪದವಿಯನ್ನು ಆಯುರ್ವೇದಿಕ್ ಮೆಡಿಸಿನ್‌ನಲ್ಲಿ ಮಾಡಿ ಆರ್ಯುವೇದ ಡಾಕ್ಟರ್ ಆಗಬಹುದು. ಅಲ್ಲದೆ ಮತ್ತೂಂದು ಮಾರ್ಗದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಕಡ್ಡಾಯವಾಗಿ ಸಂಸ್ಕೃತ ವ್ಯಾಸಂಗ ಮಾಡಿ, ಪ್ರೀ ಆಯುರ್ವೇದದಲ್ಲಿ 2 ವರ್ಷ ಅಧ್ಯಯನ ನಡೆಸಿ, ಬಳಿಕ ಬಿಎಎಂಎಸ್‌ನಲ್ಲಿ ಪದವಿ, ಸ್ನಾತಕೋತ್ತರ ಪದವಿ ಪೂರೈಸಿ ಆಯುರ್ವೇದಿಕ್ ಡಾಕ್ಟರ್ ಆಗಬಹುದು. ಕೌಶಲಗಳಿರಲಿ…
– ಭಾರತೀಯ ಔಷಧ ಪದ್ಧತಿಗಳ ಬಗ್ಗೆ ಜ್ಞಾನ ಮತ್ತು ತಿಳಿವಳಿಕೆ
– ಗಿಡಮೂಲಕೆಗಳ ಪರಿಚಯ ಮತ್ತು ಅದರ ಸ್ವಭಾವ, ಪರಿಮಾಣ, ಪರಿಣಾಮ ಕುರಿತ ತಿಳಿವಳಿಕೆ
– ಔಷಧ ತಯಾರಿಕಾ ಪದ್ಧತಿ, ಪಂಚಕರ್ಮ, ಯೋಗ ಇತ್ಯಾದಿಗಳ ಜ್ಞಾನ
– ರೋಗಿಯ ವಯಸ್ಸು, ದೈಹಿಕ ಸಾಮರ್ಥ್ಯಕ್ಕನುಗುಣವಾಗಿ ಪಥ್ಯ, ಆಹಾರ ಬದಲಾವಣೆ ಗಮನಿಸಿ ಔಷಧ ನೀಡುವ ಚಾಣಾಕ್ಷತನ
– ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬುವ ವಾಕ್ಚಾತುರ್ಯ
Related Articles
– ಆಯುರ್ವೇದ ಮೆಡಿಕಲ್ ಕಾಲೇಜ್
– ಆಯುರ್ವೇದ ಆಸ್ಪತ್ರೆಗಳು
– ಔಷಧೀಯ ಇಲಾಖೆಗಳು
– ಆಯುರ್ವೇದೀಯ ಔಷಧಾಲಯಗಳು
– ಆಯುರ್ವೇದೀಯ ಸಂಶೋಧನಾ ಕೇಂದ್ರ
– ಡಾಬರ್, ಹಿಮಾಲಯ, ಬೈದ್ಯನಾಥ್, ಪತಂಜಲಿ ಇತ್ಯಾದಿ ಖಾಸಗಿ ವಲಯ
Advertisement
ಎಲ್ಲಿ ಓದಬೇಕು?– ರಾಜೀವ್ ಗಾಂಧಿ ಯೂನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್, ಬೆಂಗಳೂರು
– ಕೆಟಿಜಿ ಆಯುರ್ವೇದ ಮೆಡಿಕಲ್ ಕಾಲೇಜು, ಬೆಂಗಳೂರು
– ಜೆಎಸ್‌ಎಸ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಬೆಂಗಳೂರು
– ಶ್ರೀಶ್ರೀ ಕಾಲೇಜ್ ಆಫ್ ಆಯುರ್ವೇದಿಕ್ ಸೈನ್ಸ್ ಆಂಡ್ ರಿಸರ್ಚ್, ಬೆಂಗಳೂರು
– ಸರ್ಕಾರಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಕದಾಮ್ ಕುಂಜನ್, ಪಾಟ್ನಾ
– ಗುಜರಾತ್ ಆಯುರ್ವೇದಿಕ್ ಯೂನಿವರ್ಸಿಟಿ, ಜಾಮ್‌ನಗರ್, ಗುಜರಾತ್ ಎನ್. ಅನಂತನಾಗ್