Advertisement

ವಿದೇಶದ‌ಲ್ಲೂ ಆಯುರ್ವೇದಕ್ಕೆ ಒಲವು

09:58 AM Jun 09, 2019 | Team Udayavani |

ತೇರದಾಳ: ಆಯುರ್ವೇದ ಪ್ರಾಚೀನ ವೈದ್ಯ ಪದ್ಧತಿಯಾದರೂ ಸಹ ಅಧುನಿಕಗೊಳ್ಳುತ್ತಿದೆ. ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಸಹ ಆಯುರ್ವೇದಿಕ್‌ ವೈದ್ಯಕೀಯ ಪದ್ಧತಿ ಗಟ್ಟಿಗೊಳ್ಳುತ್ತಿದೆ. ಆಧುನಿಕವಾಗಿ ಇಂದು ಸರ್ವಶ್ರೇಷ್ಠವಾಗಿ ಬೆಳೆದಿದ್ದು, ವೈದ್ಯರು ಆಧುನಿಕ ವೈದ್ಯ ಪದ್ಧತಿ ಅಳವಡಿಸಿಕೊಳ್ಳುವುದು ಅವಶ್ಯವಾಗಿದೆ ಎಂದು ಬೆಳಗಾವಿ ಕೆಎಲ್ಇ ಸಂಸ್ಥೆ ಬಿಎಂಕೆ ಆಯುರ್ವೇದ ಮಹಾವಿದ್ಯಾಲಯ ಪ್ರಾಚಾರ್ಯ ಡಾ| ಬಿ.ಎಸ್‌. ಪ್ರಸಾದ ಹೇಳಿದರು.

Advertisement

ಪಟ್ಟಣದ ಸಿದ್ರಾಮಪ್ಪ ದಾನಿಗೊಂಡ ಮೆಮೋರಿಯಲ್ ಟ್ರಸ್ಟ್‌ನ ಆಯುರ್ವೇದಿಕ್‌ ಮೆಡಿಕಲ್ ಕಾಲೇಜ್‌ ಸಭಾಭವನದಲ್ಲಿ ನಡೆದ ಆಯುರ್ವೇದಿಕ್‌ ಮೆಡಿಕಲ್ ಕಾಲೇಜು, ದಾನಿಗೊಂಡ ಸ್ನಾತಕೋತ್ತರ ಕೇಂದ್ರ, ಪದ್ಮಾ ಆಯುರ್ವೇದಿಕ್‌ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಆಶ್ರಯದಲ್ಲಿ ಜರುಗಿದ ಘಟಿಕೋತ್ಸವದಲ್ಲಿ ವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು. ವೈದ್ಯರಿಗೆ ಉತ್ತಮ ಮಾತಿನ ಕೌಶಲ್ಯವಿರಬೇಕು. ವೈದ್ಯರು ಸೇವೆ ಸಲ್ಲಿಸುವ ಪ್ರದೇಶದ ಭಾಷೆಯಲ್ಲಿ ರೋಗದ ಸ್ಥಿತಿ ತಿಳಿಸಬೇಕಾಗಿದ್ದು, ಇದರಿಂದ ಕೆಲವು ತೊಂದರೆ ನಿವಾರಿಸಬಹುದಾಗಿದೆ. ಪದವಿ ಪಡೆದು ವೃತ್ತಿ ಆರಂಭಿಸಲಿರುವ ಎಲ್ಲ ವೈದ್ಯರು ದೇಶದ ಆರೋಗ್ಯವನ್ನು ಕಾಪಾಡಿ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಟ್ರಸ್ಟ್‌ನ ದಾನಿಗೊಂಡ ಸಮೂಹ ಸಂಸ್ಥೆಗಳ ಚೇರಮನ್‌ ಡಾ| ಎಂ.ಎಸ್‌. ದಾನಿಗೊಂಡ ಮಾತನಾಡಿ, ಒತ್ತಡಗಳನ್ನು ಮರೆತು ರೋಗಿಗಳೊಂದಿಗೆ ಹಸನ್ಮುಖೀಗಳಾಗಿ ವರ್ತಿಸುವ ಮೂಲಕ ಉತ್ತಮ ವೈದ್ಯರಾಗಿ ಬೆಳೆಯಬೇಕು ಎಂದರು.

ಡಾ| ಬಿ.ಟಿ.ಮುನ್ನೋಳ್ಳಿ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಪದವಿ ಪ್ರದಾನ ಮಾಡಲಾಯಿತು. ಪ್ರಾಚಾರ್ಯ ಡಾ| ಪಿ.ಬಿ. ಅಪರಾಜ, ಸಿಬ್ಬಂದಿ, ಪಾಲಕರು, ಕಿರಿಯ ವೈದ್ಯ ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next