ಬಾಗಲಕೋಟೆ: ನಿಸರ್ಗ ಕೊಟ್ಟ ಆರೋಗ್ಯವನ್ನು ಪ್ರತಿಯೊಬ್ಬರೂ ಯೋಗ, ವ್ಯಾಯಾಮ, ಧ್ಯಾನಗಳಿಂದ ಕಾಪಾಡಿಕೊಳ್ಳಬೇಕು. ರೋಗ ಬಂದ ನಂತರವೂ ಸಹ ಆಯುರ್ವೇದ ವಿಧಾನದ ಪ್ರಕಾರ ದೇಹದ ಪ್ರತಿಯೊಂದು ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಆಯುರ್ವೇದ ಶಾಸ್ತ್ರ ಸಹಾಯ ಮಾಡುತ್ತದೆ ಎಂದು ಬಿವಿವಿ ಸಂಘದ ಬಸವೇಶ್ವರ ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ|ವಿ.ಎಸ್. ಹಿರೇಮಠ ಹೇಳಿದರು.
ನಗರದ ಮಾರವಾಡಿ ಗಲ್ಲಿಯ ಮಾಹೇಶ್ವರಿ ಮಂಗಲ ಭವನದಲ್ಲಿ ಮಹೇಶ್ವರಿ ಸಮಾಜದ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಮಾಹೇಶ್ವರಿ ಸಭಾ, ಬಿವಿವಿ ಸಂಘದ ಆಯುರ್ವೇದಿಕ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಶಿಬಿರದಲ್ಲಿ ಡಾ| ವಿ.ಎಸ್. ಹಿರೇಮಠ, ಡಾ| ಪಿ.ವಿ. ನರಬೋಳಿ, ಡಾ|ಎ.ಬಿ. ಕುಲಕರ್ಣಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ಜನರ ಆರೋಗ್ಯ ತಪಾಸಣೆ ಮಾಡಿದರು. ಮಹೇಶ್ ನವಮಿಯ್ ಸಂಜೆ ಮಹೇಶ್ ದೇವರ ಫೋಟೋನೊಂದಿಗೆ ಭವ್ಯ ಮತ್ತು ವಿಶಾಲ್ವಾದ್ ಮೆರವುಂಗಿ (ಶೋಭಾ ಯಾತ್ರೆ) ಮಾಡಲಾಯಿತು.
ಮಹೇಶ್ವರಿ ಪಂಚಾಯತ್ ಟ್ರಸ್ಟ್ ಕಮೀಟಿ ಅಧ್ಯಕ್ಷ ರಾಮ ಮುಂದಡಾ, ಉಪಾಧ್ಯಕ್ಷ ಜಗದೀಶ ಮಾಲಪಾಣಿ, ಅಖೀಲ ಭಾರತೀಯ ಮಹಾ ಸಭಾದ್ ಕಾರ್ಯಕಾರಿಣಿ ಸಮಿತಿ ಸದಸ್ಯ ಶ್ರೀವಲ್ಲಭ ಮುಂದಡಾ, ಬಾಗಲಕೋಟೆಯ ಮಹೇಶ್ವರಿ ಸಭಾ ಅಧ್ಯಕ್ಷ ಶ್ರೀಧರ್ ಮಾಲಪಾಣಿ, ಕಾರ್ಯದರ್ಶಿ ಸಚಿನ್ ರಾಠಿ, ಮಹೇಶ್ವರಿ ಸೇವಾ ಸಮಿತಿ ಅಧ್ಯಕ್ಷ ಮಧುಸೂದನ ಸೋಮಾನಿ, ಕಾರ್ಯದರ್ಶಿ ಪವನ ಕಾಸಟ, ಮಹಿಳಾ ಸಂಘಟನೆ ಅಧ್ಯಕ್ಷೆ ಶಾರದಾ ಭಟ್ಟಡ, ಕಾರ್ಯದರ್ಶಿ ಉಜ್ವಲಾ ಕಾಸಟ, ರಾಜ್ಯ ಮಹಿಳಾ ಮಂಡಳ ಕೋಶಾಧ್ಯಕ್ಷೆ ಸರೋಜ ಕಾಸಟ, ಸಖೀ ಮಂಡಲದ ಅಧ್ಯಕ್ಷೆ ಗೋದಾವರಿ ಕಾಸಟ, ಶ್ರೀಕಾಂತಾ ಭಟ್ಟಡ ಉಪಸ್ಥಿತರಿದ್ದರು.