Advertisement
* “ಅಯೋಗ್ಯ’ನದು ಹೊಸ ದಾಖಲೆಯಂತೆ ಹೌದಾ?ಹೌದು, ಅದಕ್ಕೆ ಹಲವು ಕಾರಣಗಳು. “ಏನಮ್ಮಿ, ಏನಮ್ಮಿ’ ಹಾಡು ಡಬ್‌ಸ್ಮ್ಯಾಷ್‌ನಲ್ಲಿ ದಾಖಲೆ ಬರೆದಿದೆ. ಇದುವರೆಗೆ ಹದಿನಾರುವರೆ ಸಾವಿರ ಡಬ್‌ಸ್ಮ್ಯಾಷ್ ಆಗಿದ್ದು ವಿಶೇಷ. ಆನಂದ್ ಆಡಿಯೋ ಸಂಸ್ಥೆ ಪ್ರಕಾರ, ಕನ್ನಡದಲ್ಲಿ ಈ ಹಾಡಿಗೆ ಆದಂತಹ ಡಬ್‌ಸ್ಮ್ಯಾಷ್ ಬೇರೆ ಯಾವ ಹಾಡಿಗೂ ಆಗಿಲ್ಲ. ಅದೂ ಕಡಿಮೆ ಅವಧಿಯಲ್ಲಿ. “ಹಿಂದೆ ಹಿಂದೆ ಹೋಗು’ ಹಾಡು ಸಹ ಒಂದೇ ದಿನದಲ್ಲಿ ಒನ್ ಮಿಲಿಯನ್ ಆಗಿದೆ.
Related Articles
ನನ್ನ ಕೆರಿಯರ್‌ನಲ್ಲಿ “ಅಯೋಗ್ಯ’ ದೊಡ್ಡ ಮೈಲಿಗಲ್ಲು. ನನಗಷ್ಟೇ ಅಲ್ಲ, ಅದು ನನ್ನ ತಂಡ ಮತ್ತು ವಿತರಕರಿಗೂ ಕೂಡ. ಮೊದಲಿಗೆ ಇದು ಅಪ್ಪಟ ದೇಸಿ ಚಿತ್ರ. ಎಲ್ಲೂ ಕಾಣದ, ಕೇಳದ ಕಥೆ ಇಲ್ಲಿದೆ. ಎಲ್ಲೂ ಕದಿಯದ, ಸ್ಫೂರ್ತಿ ಪಡೆಯದ ಚಿತ್ರಣ ಇಲ್ಲಿದೆ. ಚಿತ್ರ ನೋಡಿದಾಗ, ಪ್ರತಿಯೊಬ್ಬರೂ ತನ್ನ ಲೈಫ್ಸ್ಟೋರಿನೇ ಅಂದುಕೊಳ್ಳುವಂತಿದೆ. ಈ ಚಿತ್ರವನ್ನು ನಾನು ಸುಮಾರು ಹದಿನೈದು ಸಲ ನೋಡಿದ್ದೇನೆ. ಎಲ್ಲೂ ಬೋರ್ ಎನಿಸಿಲ್ಲ. ಕಂಟೆಂಟ್ ಫ್ರೆಶ್ ಆಗಿರುವುದೇ ಜೀವಾಳ. ಹಾಡುಗಳು ಈ ಪರಿ ಹಿಟ್ ಆಗಿರುವುದರಿಂದ ಚಿತ್ರವೂ ಹೊಸ ದಾಖಲೆ ಬರೆಯುತ್ತೆ ಎಂಬ ವಿಶ್ವಾಸ ನನ್ನದು.
* “ಅಯೋಗ್ಯ’ನ ಮೇಲೆ ನಿರೀಕ್ಷೆ ಎಷ್ಟಿದೆ?
ಹಿನ್ನೆಲೆ ಸಂಗೀತ ಮಾಡಿರುವ ಅರ್ಜುನ್ ಜನ್ಯ ಹೇಳಿದ್ದಿಷ್ಟು. “ಸತೀಶ್, ನೀವು ಅರಾಮವಾಗಿರಿ. ಟೆನÒನ್ ಮಾಡ್ಕೊàಬೇಡಿ, ಹಾಯಾಗಿ ನಿದ್ದೆ ಮಾಡಿ’ ಅಂತ. ಹಾಡುಗಳಿಗೆ ಜನರು ಕೊಟ್ಟ ತೀರ್ಪು ನೋಡಿ ನಿರೀಕ್ಷೆ ಹೆಚ್ಚಿದೆ. ನಾನು ಯಾವ ಚಿತ್ರದ ಮೇಲೂ ಇಷ್ಟೊಂದು ನಿರೀಕ್ಷೆ ಇಟ್ಟುಕೊಂಡಿಲ್ಲ. ಇದು ಹೊಸ ಪವಾಡ ಸೃಷ್ಟಿಸುತ್ತೆ ಎಂಬ ನಂಬಿಕೆಯಂತೂ ಇದೆ.
Advertisement
ರಚಿತಾರಾಮ್ ಒಳ್ಳೇ ನಟಿ. ಅವರು ಇದೇ ಮೊದಲ ಸಲ ಸಂಪೂರ್ಣ ಮಂಡ್ಯ ಭಾಷೆ ಮಾತಾಡಿದ್ದಾರೆ. ಅದರಲ್ಲೂ, ಬೆಂಗಳೂರು ಹುಡುಗಿಯರಿಗೆ ಮಂಡ್ಯ ಭಾಷೆ ಹಿಡಿಯೋದು ಕಷ್ಟ. ಅವರು ಹಠ ಮಾಡಿ, ನಾನೇ ಮಂಡ್ಯ ಭಾಷೆಯಲ್ಲೇ ಡಬ್ ಮಾಡ್ತೀನಿ ಅಂತ ಹಠ ಮಾಡಿ ಡಬ್ಬಿಂಗ್ ಮಾಡಿದ್ದಾರೆ. ಒಬ್ಬ ಹಳ್ಳಿ ಹುಡುಗಿಯಾಗಿ, ಥೇಟ್ ಪಕ್ಕದ್ಮನೆ ಹುಡುಗಿಯಂತೆ ಕಾಣುತ್ತಾರೆ. ಇಬ್ಬರ ಕೆಮಿಸ್ಟ್ರಿ ಚೆನ್ನಾಗಿತ್ತು. ಎಷ್ಟೋ ಸಲ ಡೈಲಾಗ್ ಕುರಿತು ಚರ್ಚಿಸಿ, ನಟಿಸಿದ್ದೇವೆ. * ಪೋಸ್ಟರ್‌ನಲ್ಲಿ ಕಲರ್‌ಫುಲ್ ಗೆಟಪ್ ಇದೆ, ಚಿತ್ರವೂ ಹಾಗೇನಾ?
ಇಡೀ ಚಿತ್ರವೇ ಕಲರ್‌ಫುಲ್ ಆಗಿರಲಿದೆ. ಹೀರೋ, ಸದಾ ಕಲರ್‌ಫುಲ್ ಮನುಷ್ಯ. ಪಾಸಿಟಿವ್ ಎನರ್ಜಿ ಇರುವಂಥವನು. ನಗುವಲ್ಲೇ ಎಲ್ಲವನ್ನು ಗೆಲಲ್ಲು ಪ್ರಯತ್ನ ಪಡುವಂಥವನು. ಹಾಗಾಗಿ ಚಿತ್ರದುದ್ದಕ್ಕೂ ಕಲರ್‌ಫುಲ್ ಆಗಿಯೇ, ಚಿತ್ರವನ್ನೂ ರಂಗಾಗಿಸುತ್ತ ಹೋಗುತ್ತಾನೆ. ಹಾಗಾಗಿ, ಚಿತ್ರ ಅಪ್ಪಟ ರಂಗಿನ ಮನರಂಜನಾತ್ಮಕ ಚಿತ್ರ. * ಅಯೋಗ್ಯನ ಉದ್ದೇಶ ಏನು?
ಎಲ್ಲರೂ ತಿಳಿದುಕೊಂಡಂತೆ, ಈ ಅಯೋಗ್ಯ ಕೆಟ್ಟವನಲ್ಲ. ಈ ಮೂಲಕ ಸಮಾಜಕ್ಕೆ ದೊಡ್ಡ ಸಂದೇಶ ಹೇಳಲು ಹೊರಟಿದ್ದಾನೆ. ನಮ್ಮ ಜವಾಬ್ದಾರಿ ಎಷ್ಟಿದೆ ಎಂಬುದನ್ನು ತಿಳಿ ಹೇಳುವ ಪ್ರಯತ್ನ ಅವನದು. ಹಳ್ಳಿಯ ಪ್ರತಿಯೊಬ್ಬ ವ್ಯಕ್ತಿ, ಇಷ್ಟೆಲ್ಲಾ ಸಮಸ್ಯೆ ಇದೆಯಾ? ಆ ಸಮಸ್ಯೆಗೆ ಹೀಗೆಲ್ಲಾ ಪರಿಹಾರವಿದೆಯಾ ಎಂಬುದನ್ನು ತಿಳಿದುಕೊಳ್ಳುವಷ್ಟು ಮಟ್ಟಿಗೆ ಅಯೋಗ್ಯನ ಪಾತ್ರವಿದೆ.