ನಾಗ್ಪುರ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರಕ್ಕೆ 1, 100 ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ.
ಮುಂದಿನ ಮೂರೂವರೆ ವರ್ಷಗಳಲ್ಲಿ ಮಂದಿರ ಪೂರ್ಣಗೊಳ್ಳಲಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿರಾಜ್ ಸೋಮವಾರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂದಿರದ ಮುಖ್ಯ ಭಾಗ ನಿರ್ಮಾಣಕ್ಕೆ ಅಂದಾಜು 300 ರಿಂದ 400 ಕೋಟಿ ರೂ. ವೆಚ್ಚವಾಗಲಿದೆ. ಒಟ್ಟಾರೆ ಯೋಜನೆಗೆ ಸುಮಾರು 1,100 ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಉಲ್ಲೇಖ ಮಾಡಿರುವ ಮೊತ್ತ ಅಂದಾಜಿನದ್ದು. ಅದರಲ್ಲಿ ಏರಿಕೆಯೂ ಆಗಬಹುದು. ಇದುವರೆಗೆ ಟ್ರಸ್ಟ್‌ಗೆ ಆನ್‌ಲೈನ್ ಮೂಲಕ 100 ಕೋಟಿ ರೂ. ದೇಣಿಗೆ ಸಿಕ್ಕಿದೆ ಎಂದರು ಗೋವಿಂದ ದೇವ್
ಇದನ್ನೂ ಓದಿ:ಹೊಸ ವರ್ಷಾಚರಣೆಗೆ ಗೃಹ ಇಲಾಖೆಯಿಂದ ಶೀಘ್ರದಲ್ಲೇ ಬರಲಿದೆ ಮಾರ್ಗಸೂಚಿ : ಸಚಿವ ಕೆ.ಸುಧಾಕರ್