Advertisement

#AYODHYAVERDICT ಭಾರತ ಸೇರಿದಂತೆ ವಿಶ್ವಾದ್ಯಂತ ಟ್ವೀಟರ್ ನಲ್ಲಿ ಟಾಪ್ ಟ್ರೆಂಡಿಂಗ್

09:47 AM Nov 10, 2019 | Team Udayavani |

ನವದೆಹಲಿ:ದಶಕಗಳಷ್ಟು ಹಳೆಯದಾದ ರಾಜಕೀಯವಾಗಿ ಸೂಕ್ಷ್ಮವಾಗಿರುವ ಅಯೋಧ್ಯೆ ಭೂ ವಿವಾದ ಕುರಿತ ಅಂತಿಮ ತೀರ್ಪನ್ನು ಶನಿವಾರ ಸುಪ್ರೀಂಕೋರ್ಟ್ ಪ್ರಕಟಿಸಿದ ನಂತರ, ಇಂದು ಬೆಳಗ್ಗೆಯಿಂದಲೇ ಜಾಗತಿಕವಾಗಿ #Ayodhya Verdict ಮತ್ತು #RamMandir ಟ್ವೀಟರ್ ನಲ್ಲಿ ಟ್ರೆಂಡಿಂಗ್ ಆಗಿದೆ.

Advertisement

ಭಾರತ ಸೇರಿದಂತೆ ವಿಶ್ವಾದ್ಯಂತ ಅಯೋಧ್ಯೆ ತೀರ್ಪು ಟ್ರೆಂಡಿಂಗ್ ಆಗಿದ್ದು, ಮಧ್ಯಾಹ್ನ 2.03ರ ಹೊತ್ತಿಗೆ ತೀರ್ಪಿಗೆ ಸಂಬಂಧಿಸಿದಂತೆ ಜಗತ್ತಿನ ಹತ್ತು ವಿಷಯಗಳಲ್ಲಿ ಅಯೋಧ್ಯೆ ಐದು ವಿಷಯಗಳು ಟಾಪ್ ಟ್ರೆಂಡಿಂಗ್ ನಲ್ಲಿದ್ದಿರುವುದಾಗಿ ವರದಿ ತಿಳಿಸಿದೆ.

#AyodhyaVerdict ಹ್ಯಾಶ್ ಟ್ಯಾಗ್ ಭಾರತ ಮತ್ತು ಜಾಗತಿಕವಾಗಿ 5,50,000ಕ್ಕಿಂತಲೂ ಹೆಚ್ಚು ಟ್ವೀಟ್ ಆಗಿದೆ.

ಭಾರತದಲ್ಲಿ #BabriMasjid, #AyodhyaJudgement ಮತ್ತು #RamJanmabhoomi ಕೂಡಾ ಟಾಪ್ ಟ್ರೆಂಡಿಂಗ್ ನಲ್ಲಿದೆ. #RamMandir ಟ್ವೀಟರ್ ನಲ್ಲಿ ಅತೀ ಹೆಚ್ಚು (1,60,000) ಟ್ರೆಂಡಿಂಗ್ ಆಗಿದೆ. ಇನ್ನು ಸುಪ್ರೀಂಕೋರ್ಟ್ ಕೂಡಾ ಟ್ರೆಂಡಿಂಗ್ (200,000)ನಲ್ಲಿದೆ ಎಂದು ವರದಿ ತಿಳಿಸಿದೆ.

ಅಯೋಧ್ಯೆ ತೀರ್ಪು ಪ್ರಕಟವಾದ ನಂತರ ಟ್ವೀಟರ್ ನಲ್ಲಿ ಸಿಜೆಐ #RanjanGogoi ಹೆಸರು ಕೂಡಾ ಟ್ರೆಂಡಿಂಗ್ ನಲ್ಲಿದೆ. ಸುಪ್ರೀಂಕೋರ್ಟ್ ಸಿಜೆಐ ಗೋಗೊಯಿ ನವೆಂಬರ್ 17ರಂದು ನಿವೃತ್ತಿಯಾಗಲಿದ್ದಾರೆ.

Advertisement

#HinduMuslimBhaiBhai (ಹಿಂದೂ ಮುಸ್ಲಿಂ ಭಾಯಿ ಭಾಯಿ) ಕೂಡಾ ಟ್ವೀಟರ್ ನಲ್ಲಿ ಟ್ರೆಂಡ್ ಆಗಿದ್ದು, 33,000ಕ್ಕೂ ಅಧಿಕ ಟ್ವೀಟ್ ಮಾಡಲಾಗಿದೆ.

ಜಾಗತಿಕ ಐದು ಟ್ರೆಂಡಿಂಗ್ ನಲ್ಲಿ ನಾಲ್ಕು ಅಯೋಧ್ಯೆ ತೀರ್ಪಿಗೆ ಸಂಬಂಧ ವಿಷಯವಾಗಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next