Advertisement

Ayodhya: ವ್ಯಾಟಿಕನ್‌, ಮೆಕ್ಕಾ ಮೀರಿಸಲಿದೆ- ವರ್ಷಕ್ಕೆ ಐದು ಕೋಟಿ ಭಕ್ತರು ಭೇಟಿ ನಿರೀಕ್ಷೆ

09:35 PM Jan 24, 2024 | Team Udayavani |

ಅಯೋಧ್ಯೆ: ರಾಮ ಮಂದಿರಕ್ಕೆ ಪ್ರತಿವರ್ಷ ಕನಿಷ್ಠ 5 ಕೋಟಿ ಮಂದಿ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ. ಇದು ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ತಿರುಪತಿ, ಪ್ರಮುಖ ಪ್ರೇಕ್ಷಣೀಯ ಸ್ಥಳವಾದ ತಾಜಮಹಲ್‌ ಸೇರಿದಂತೆ ಹಲವು ಕ್ಷೇತ್ರಗಳ ವಾರ್ಷಿಕ ಪ್ರವಾಸಿಗರ ಸಂಖ್ಯೆಯನ್ನು ಮೀರಿಸಲಿದೆ. ಅಲ್ಲದೆ, ಜಾಗತಿಕ ಮಟ್ಟದಲ್ಲಿಯೂ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಸೌದಿ ಅರೇಬಿಯಾದ ಮೆಕ್ಕಾ ಮತ್ತು ವ್ಯಾಟಿಕನ್‌ಗೆ ಭೇಟಿ ನೀಡುವವರ ಸಂಖ್ಯೆಯನ್ನೂ ಮೀರಿಸಲಿದೆ ಎಂದು ಅಂದಾಜಿಸಲಾಗಿದೆ.

Advertisement

5 ಕೋಟಿ ಮಂದಿ!
ರಾಮ ಮಂದಿರಕ್ಕೆ ಆರಂಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದನ್ನು ಗಮನದಲ್ಲಿಟ್ಟುಕೊಂಡು ದಿನಂಪ್ರತಿ 1 ಲಕ್ಷ ಭಕ್ತಾದಿಗಳು ಆಗಮಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಮೊದಲ ದಿನವೇ 5 ಲಕ್ಷ ಭಕ್ತಾದಿಗಳು ದರ್ಶನ ಪಡೆಯುವ ಮೂಲಕ ನಿರೀಕ್ಷೆ ಮೀರುವುದು ಮಾತ್ರವಲ್ಲದೇ ದೇಶದಲ್ಲಿ ಒಂದೇ ದಿನ ಅತಿ ಹೆಚ್ಚು ಭಕ್ತಾದಿಗಳು ಆಗಮಿಸಿದ ದೇಗುಲವೆಂಬ ದಾಖಲೆಯನ್ನೂ ರಾಮ ಮಂದಿರ ಸೃಷ್ಟಿಸಿದೆ. ನಂತರದ ದಿನಗಳಲ್ಲಿ ದಿನಂಪ್ರತಿ 1 ರಿಂದ 3 ಲಕ್ಷ ಭಕ್ತರು ದರ್ಶನಪಡೆಯಲಿದ್ದಾರೆ, ವಾರಾಂತ್ಯದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಬಹುದೆಂದು ಅಂದಾಜಿಸಲಾಗಿದೆ. ಈ ಮೂಲಕ ವರ್ಷದಲ್ಲಿ ಸರಿ ಸುಮಾರು 5 ಕೋಟಿ ಮಂದಿ ಬಾಲಕರಾಮನ ದರ್ಶನ ಪಡೆಯುತ್ತಾರೆ ಎನ್ನಲಾಗಿದೆ. 2025ರ ಮಧ್ಯಭಾಗದಲ್ಲಿ ರಾಮ ಮಂದಿರದ ಕಾಮಗಾರಿ ಪೂರ್ತಿಗೊಳ್ಳುವ ನಿರೀಕ್ಷೆ ಇದೆ. ಈ ಕಾಮಗಾರಿ ಮುಕ್ತಾಯದ ಬಳಿಕ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ.

ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ವಾರ್ಷಿಕವಾಗಿ 2.5 ಕೋಟಿ, ಕಾಶ್ಮೀರ ವೈಷ್ಣೋದೇವಿಗೆ 80 ಲಕ್ಷ, ವ್ಯಾಟಿಕನ್‌ಗೆ 90 ಲಕ್ಷ, ಆಗ್ರಾದ ತಾಜ್‌ ಮಹಲ್‌ಗೆ 70 ಲಕ್ಷ, ಮೆಕ್ಕಾಕ್ಕೆ 2.5 ಕೋಟಿ ಮಂದಿ ಭೇಟಿ ನೀಡುತ್ತಿದ್ದಾರೆ. ಆ ಸ್ಥಳಗಳನ್ನು ಮೀರಿಸಿ ಅಯೋಧ್ಯೆಗೆ ಪ್ರವಾಸಿಗರು ಮಂದಿರ ಕಾಮಗಾರಿ ಮುಕ್ತಾಯಗೊಂಡ ಬಳಿಕ ಭೇಟಿ ನೀಡುವ ಅಂದಾಜು ಇದೆ.

ಕೆಲ ದಿನಗಳ ಹಿಂದಷ್ಟೇ ಎಸ್‌ಬಿಐ ಸಂಶೋಧನಾ ವಿಭಾಗ ಪ್ರಕಟಿಸಿದ್ದ ವರದಿಯ ಪ್ರಕಾರ 2024-25ನೇ ಸಾಲಿನಲ್ಲಿ ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರವಾಸೋದ್ಯಮ ಇಲಾಖೆಯಿಂದಲೇ ಹೆಚ್ಚುವರಿಯಾಗಿ 25 ಸಾವಿರ ಕೋಟಿ ರೂ. ಸಿಗುವ ಸಾಧ್ಯತೆ ಇದೆ.

ರೈಲು, ವಿಮಾನ:
ಕರ್ನಾಟಕದ ರಾಜಧಾನಿ ಸೇರಿದಂತೆ ದೇಶದ ಪ್ರಮುಖ ಸ್ಥಳಗಳಿಂದ ಅಯೋಧ್ಯೆಗೆ ಈಗ ವಿಮಾನ ಸಂಚಾರ ಆರಂಭಿಸಲಾಗಿದೆ. ಇದರ ಜತೆಗೆ ರೈಲ್ವೇ ಇಲಾಖೆ ಕೂಡ ವಿಶೇಷ ರೈಲುಗಳನ್ನು ಓಡಿಸಲು ಮುಂದಾಗಿದೆ. ಹೀಗಾಗಿ, ಬಾಲಕ ರಾಮನನ್ನು ಕಾಣಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಆಗಮಿಸುವುದು ನಿಶ್ಚತ.

Advertisement

ಯಾವ ಕ್ಷೇತ್ರಕ್ಕೆ ಎಷ್ಟು ಮಂದಿ ಭೇಟಿ (ವಾರ್ಷಿಕ)
ಸ್ಥಳ                     ಸಂದರ್ಶಕರ ಸಂಖ್ಯೆ
ತಿರುಪತಿ                         2.5 ಕೋಟಿ
ಮೆಕ್ಕಾ                            2.5 ಕೋಟಿ
ವ್ಯಾಟಿಕನ್‌                     90 ಲಕ್ಷ
ವೈಷ್ಣೋದೇವಿ               80 ಲಕ್ಷ
ತಾಜ್‌ ಮಹಲ್‌              70 ಲಕ್ಷ

Advertisement

Udayavani is now on Telegram. Click here to join our channel and stay updated with the latest news.

Next