Advertisement
ಆದರೆ ಶನಿವಾರವೇ ಯಾಕೆ ಎಂಬ ಪ್ರಶ್ನೆ ಇದೀಗ ಟ್ರೆಂಡ್ ಸೃಷ್ಟಿಸುತ್ತಿದ್ದು, ಇದರ ಹಿಂದಿರುವ ಕಾರಣ ಏನು ಎಂಬುದರ ಮಾಹಿತಿ ಇಲ್ಲಿದೆ.
Related Articles
ಸಾಮಾನ್ಯವಾಗಿ ನ್ಯಾಯಾಲಯವು ತೀರ್ಪನ್ನು ಪ್ರಕಟಿಸಿದರೆ, ಮರುದಿನ ಫಿರ್ಯಾದಿ ಅಥವಾ ಪ್ರತಿವಾದಿಗಳಲ್ಲಿ ಒಬ್ಬರು ನಿರ್ಧಾರವನ್ನು ಮತ್ತೂಮ್ಮೆ ಪರಿಶೀಲಿಸುವಂತೆ ನ್ಯಾಯಾಲಯವನ್ನು ಕೋರುತ್ತಾರೆ. ಈ ಪ್ರಕ್ರಿಯೆಯು ಒಂದು ಅಥವಾ ಎರಡು ದಿನ ತೆಗೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಮರುವಿಚಾರಣೆಗೆ ಅನೂಕೂಲವಾಗಲಿ ಎಂದು ನಿರೀಕ್ಷೆ ಮಾಡಿದ ಅವಧಿಗಿಂತ ಮೊದಲ್ಲೇ ತೀರ್ಪುನ್ನು ನೀಡಲಾಗಿದೆ.
Advertisement
ಗೊಗೊಯ್ ನಿವೃತ್ತಿಯೂ ಒಂದು ಕಾರಣನ್ಯಾಯಮೂರ್ತಿ ಗೊಗೊಯ್ ಅವರು ನವೆಂಬರ್ 17ರಂದು ನಿವೃತ್ತರಾಗಲಿದ್ದು, ನ್ಯಾಯಾಲಯವು ಯಾವುದೇ ದಿನ ವಿಚಾರಣೆ ನಡೆಸಿ, ಪ್ರಕರಣವನ್ನು ಅದಕ್ಕೆ ಸಂಬಂಧಿಸಿದ ತೀರ್ಪು ಸಹ ನೀಡಬಹುದಿತ್ತು. ಆದರೆ, ಪ್ರಮುಖವಾದ ಪ್ರಕರಣದ ತೀರ್ಪನ್ನು ರಜಾ ದಿನಗಳಲ್ಲಿ ಘೋಷಿಸಲು ಆಗುವುದಿಲ್ಲ. ನ್ಯಾಯಾಧೀಶರು ನಿವೃತ್ತರಾಗುವ ಒಂದು ದಿನ ಮೊದಲು ತೀರ್ಪುಗಳನ್ನು ನೀಡುವಂತಿಲ್ಲ. ಹೀಗಾಗಿ, ನವೆಂಬರ್ 16 ಕೂಡ ಶನಿವಾರ ಬಂದಿದ್ದು. ಇದಲ್ಲದೇ ನ್ಯಾಯಮೂರ್ತಿ ಗೊಗೊಯ್ ಅವರ ಕೊನೆಯ ಕೆಲಸದ ದಿನ ನವೆಂಬರ್ 15 ಆಗಿದೆ. ಈ ಹಿನ್ನಲೆ ಅಯೋಧ್ಯೆ ಪ್ರಕರಣದ ತೀರ್ಪನ್ನು ನವೆಂಬರ್ 14 ಅಥವಾ ನವೆಂಬರ್ 15 ಕ್ಕಿಂತ ಮುನ್ನವೇ ಘೋಷಿಸಿದ್ದು, ನ್ಯಾಯಮೂರ್ತಿ ಗೊಗೊಯಿ ನಿವೃತ್ತಿ ಮೊದಲು ಪ್ರಕರಣ ಇತ್ಯರ್ಥವಾಗಿದೆ.