Advertisement
1984ರ ಡಿಸೆಂಬರ್‌ನಲ್ಲಿ ವಿಶ್ವ ಹಿಂದೂ ಪರಿಷತ್‌ನ ಎರಡನೇ ಮಹಾ ಸಮ್ಮೇಳನ ಉಜಿರೆಯಲ್ಲಿ ನಡೆದಾಗ ರಾಮಜನ್ಮಭೂಮಿ ಜಾಗೃತಿ ರಥಯಾತ್ರೆಯೂ ಆರಂಭವಾಗಿತ್ತು, ರಾಮಜನ್ಮಭೂಮಿ ಮುಕ್ತಿಗಾಗಿ ಕರೆ ನೀಡಲಾಗಿತ್ತು.1990 ರಲ್ಲಿ ಆದಿಚುಂಚನಗಿರಿ, ಧರ್ಮಸ್ಥಳ, ಕೂಡಲಸಂಗಮ ಸೇರಿ ರಾಜ್ಯದ ಏಳು ಭಾಗಗಳಿಂದ ರಾಮಶಿಲಾ ರಥಯಾತ್ರೆ ಹೆಸರಿನಲ್ಲಿ ಏಳು ರಥಗಳು ಬೀದರ್‌ನಲ್ಲಿ ಸಮಾವೇಶಗೊಂಡು ಬೃಹತ್ ಸಮಾವೇ ಶದ ಮೂಲಕ ಸುಮಾರು 60 ರಿಂದ 70 ಸಾವಿರ ಕರಸೇವಕರು ಅಯೋಧ್ಯೆ ತಲುಪಿದರು.
Related Articles
Advertisement
ರಾಮಜನ್ಮಭೂಮಿ ಆಂದೋಲನವು ಭಾರತದ ರಾಜಕೀಯ ದಿಕ್ಕನ್ನೇ ಬದಲಾಯಿಸಿತು. ಹಿಂದೂಗಳ ಭಾವನೆ ಭಾರತಕ್ಕಷ್ಟೇ ಅಲ್ಲದೆ ವಿಶ್ವಕ್ಕೆ ಗೊತ್ತಾಯಿತು. ಆದರೆ, ಈ ಸತ್ಯ ಅರ್ಥ ಮಾಡಿಕೊಳ್ಳದ ಸೆಕ್ಯುಲರ್ ವಾದಿಗಳ ರಾಜಕೀಯ ಭವಿಷ್ಯ ನೆಲಕಚ್ಚಿತು. ಎಡವಾದಿಗಳಂತೂ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡರು.
1980-85 ರಲ್ಲಿ ಏನೇನೂ ಅಲ್ಲದ ಬಿಜೆಪಿ ಕೋಟಿ ಕೋಟಿ ಹಿಂದೂಗಳ ಭಾವನೆಗಳಿಗೆ ಬೆಲೆ ಕೊಟ್ಟಿದ್ದರಿಂದ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ.
ಕೇಂದ್ರದಲ್ಲಿ ಆಡಳಿತ ಮಾಡಿದ ಸರಕಾರಗಳಿಗೆ ನಾವು ಕಾನೂನಾತ್ಮಕವಾಗಿಯೇ ರಾಮ ಜನ್ಮಭೂಮಿಯನ್ನು ಹಿಂದೂಗಳಿಗೆ ಬಿಟ್ಟುಕೊಡಲು ಬೇಡಿಕೆ ಇಟ್ಟಿದ್ದೆವು. ಅಂತಿಮವಾಗಿ ಅದು ನ್ಯಾಯಾಲಯದ ಅಂಗಳಕ್ಕೆ ಹೋಗಿತ್ತು. ಇದೀಗ 500 ವರ್ಷಗಳ ಸುದೀರ್ಘ ಸಂಘರ್ಷಕ್ಕೆ ಪುರಸ್ಕಾರ, ಗೌರವ ಸಂದಿದೆ. ರಾಮಜನ್ಮಭೂಮಿ ವಿಚಾರದಲ್ಲಿ ತುಷ್ಟೀಕರಣ ನೀತಿ ಅನುಸರಿಸಿದ ಸೋಗಲಾಡಿ ಸೆಕ್ಯುಲರ್‌ವಾದಿಗಳು, ನಕಲಿ ಜಾತ್ಯತೀತವಾದಿ ಗಳಿಗೆ ಪಾಠವಾಗಿದೆ ಎಂದು ಹೇಳಿದ್ದಾರೆ.
ಆಡ್ವಾಣಿ ರಥಯಾತ್ರೆ ರಾಮಮಂದಿರ ನಿರ್ಮಾಣಕ್ಕಾಗಿ ಎಲ್.ಕೆ.ಆಡ್ವಾಣಿಯವರು ನಡೆಸಿದ ರಥಯಾತ್ರೆ ಕರ್ನಾಟಕದಲ್ಲೂ ಐದು ದಿನ ಸಂಚರಿಸಿತ್ತು. ಬೆಂಗಳೂರಿಗೆ ಆಗಮಿಸಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಭೆಯ ನಂತರ ತುಮಕೂರು, ಶಿವಮೊಗ್ಗ, ಹರಿಹರ, ಹೊಸಪೇಟೆ, ಗಂಗಾವತಿ, ರಾಯಚೂರು ಮೂಲಕ ಸಾಗಿ ನಂತರ ಆಂಧ್ರಪ್ರದೇಶಕ್ಕೆ ಹೊರಟಿತ್ತು. ಶಬರಿ ಕೊಟ್ಟ ಬೋರೆ ಹಣ್ಣು
ಭಕ್ತಿ, ಆದರಾತಿಥ್ಯ, ಮುಗ್ಧ ಪ್ರೀತಿಗೆ ಮತ್ತೂಂದು ಹೆಸರು “ಶಬರಿ’. ಬೇಡರ ರಾಜನ ಮಗಳಾಗಿದ್ದ ಶಬರಿ, ವೈರಾಗ್ಯದಿಂದ ಮನೆಯನ್ನು ತೊರೆದು ಮಾತಂಗ ಮುನಿಯ ಶಿಷ್ಯೆ ಯಾಗುತ್ತಾಳೆ. ಶ್ರೀರಾಮನನ್ನು ಜಪಿಸಿದರೆ ಮುಕ್ತಿ ಸಿಗುತ್ತದೆಂದು ತಿಳಿದಾಗ, ಆಕೆ ಆತನಿಗಾಗಿ ಉತ್ಕಟ ಭಕ್ತಿಯಿಂದ ವರ್ಷಾನುಗಟ್ಟಲೆ ಕಾಯುತ್ತಾಳೆ. ಪ್ರತಿ ದಿವಸ ಕಾಡಿಗೆ ಹೋಗಿ, ಬೋರೆ ಹಣ್ಣುಗಳನ್ನು ಕೊಯ್ದು, ಹಣ್ಣು ಸಿಹಿಯೇ? ಹುಳಿಯೇ? ಎಂದು ಕಚ್ಚಿ ನೋಡಿ, ಸಿಹಿ ಹಣ್ಣನ್ನು ರಾಮನಿಗಾಗಿ ತೆಗೆದಿಡುವುದೇ ಅವಳ ನಿತ್ಯ ಕಾಯಕವಾಗುತ್ತದೆ. ಆಕೆಯ ನಿಸ್ವಾರ್ಥ ತಪಸ್ಸಿಗೆ ಮೆಚ್ಚಿ ಬರುವ ರಾಮ, ಅವಳು ಎಂಜಲು ಮಾಡಿಟ್ಟ ಆ ಹಣ್ಣುಗಳನ್ನೇ ಸಂತೋಷದಿಂದ ಸ್ವೀಕರಿಸುತ್ತಾನೆ.