Advertisement

ಹೀಗಿದೆ ಉಡುಪಿಗೂ ಅಯೋಧ್ಯೆಗೂ ಬಿಡದ ನಂಟು

09:02 PM Nov 09, 2019 | Sriram |

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಕಾರ್ಯಭಾರ ನಡೆಯುವುದೆಲ್ಲ ಮುಖ್ಯಪ್ರಾಣ ನಿಂದ ಎಂಬ ನಂಬಿಕೆ ಇದೆ. ಈ ವಿಗ್ರಹ ಬಂದಿರುವುದು ಅಯೋಧ್ಯೆಯಿಂದ ಎನ್ನುವುದು ಮತ್ತು ಉಡುಪಿ ಮೂಲದ ಸ್ವಾಮೀಜಿಯೊಬ್ಬರು ಈಗ ಅಯೋಧ್ಯೆಯಲ್ಲಿ ನಾವು ದರ್ಶನ ಪಡೆಯುವ ರಾಮನ ವಿಗ್ರಹವನ್ನು ಪ್ರತಿಷ್ಠಾಪಿ ಸಿದ್ದು ಎನ್ನುವುದು ಕುತೂಹಲ ಮೂಡಿಸುತ್ತದೆ.

Advertisement

ಮಧ್ವಾಚಾರ್ಯರು ಸುಮಾರು 7 ಶತಮಾನ ಗಳ ಹಿಂದೆ ಶ್ರೀಕೃಷ್ಣನ ವಿಗ್ರಹವನ್ನು ಪ್ರತಿಷ್ಠಾಪಿಸಿದ ಸುಮಾರು 200 ವರ್ಷಗಳ ಬಳಿಕ ಶ್ರೀವಾದಿರಾಜ ಸ್ವಾಮಿಗಳು ಮುಖ್ಯಪ್ರಾಣ ಮತ್ತು ಗರುಡನನ್ನು ಅಯೋಧ್ಯೆಯಿಂದ ತಂದು ಪ್ರತಿಷ್ಠಾಪಿಸಿದರು.

1522ರಲ್ಲಿ ಎರಡು ವರ್ಷಗಳ ಪರ್ಯಾಯ ವನ್ನು ಪಲಿಮಾರು ಮಠದಿಂದ ಆರಂಭಿಸಿದ ಬಳಿಕ 1532ರಲ್ಲಿ ವಾದಿರಾಜ ಸ್ವಾಮಿಗಳು ಸ್ವತಃ ಪರ್ಯಾಯ ಪೀಠವನ್ನು ಅಲಂಕರಿಸಿದರು. ಆಗ ಅವರಿಗೆ 52 ವರ್ಷ. 1538-39ರ ವೇಳೆ ವಿಜಯನಗರ ಸಾಮ್ರಾಜ್ಯದ ಕಡೆ ಸಂಚಾರಾರ್ಥ ತೆರಳಿದ ವಾದಿರಾಜರು 1541-42ರಲ್ಲಿ ಉತ್ತರ ಭಾರತ ಯಾತ್ರೆ ಕೈಗೊಂಡರು. ಆಗ ಅಯೋಧ್ಯೆಗೆ ತೆರಳಿ ಅಲ್ಲಿ ಉತVನನ ಮಾಡಿಸಿ ಹನುಮ- ಗರುಡನ ವಿಗ್ರಹವನ್ನು ತಂದು ಸುಮಾರು 1545ರ ವೇಳೆ ಪ್ರತಿಷ್ಠೆ ಮಾಡಿದರು. ಅವರ ಎರಡನೆಯ ಪರ್ಯಾಯ 1548-49ರಲ್ಲಿ ನಡೆಯಿತು. ಹೀಗೆ ಮೊದಲ ಪರ್ಯಾಯದ ಬಳಿಕ ಎರಡನೆಯ ಪರ್ಯಾಯದೊಳಗೆ ಈ ಕೆಲಸ ಮಾಡಿದರು.

ಇದು ವಾದಿರಾಜಗುರುಚರಿತಾಮೃತದಲ್ಲಿ ಹೀಗೆ ಉಲ್ಲೇಖವಿದೆ: ಪುನಃ ಸಂಚರಣಾಸಕೊ¤à ಗತೋ ಯೋಧ್ಯಾಂ ಪುರೀಂ ಮುನಿಃ| ತತ್ರತ್ಯ ಹನುಮತ್ತಾಕ್ಷì ಪ್ರತಿಮೇ ರೂಪ್ಯಪೀಠಕಮ್‌|…

“ತ್ರೇತಾಯುಗದಲ್ಲಿ ದಶರಥನ ಅರಮನೆಯಲ್ಲಿ ರಾಮಚಂದ್ರನಿಗೆ ಪಟ್ಟಾಭಿಷೇಕವಾಗುವಾಗ ಸಿಂಹಾಸನದ ಮೆಟ್ಟಿಲಿನ ಬಲಭಾಗದಲ್ಲಿ ಹನುಮಂತ ಮತ್ತು ಎಡಭಾಗದಲ್ಲಿ ಗರುಡನ ಪ್ರತಿಮೆಗಳಿದ್ದವು. ಇದನ್ನು ದಿವ್ಯದೃಷ್ಟಿಯಿಂದ ತಿಳಿದ ವಾದಿರಾಜರು ಉತVನನ ನಡೆಸಿ ಉಡುಪಿಗೆ ತಂದು ಪ್ರತಿಷ್ಠಾಪಿಸಿದರು ಎಂದು ಸೋದೆ ಮಠದ ಮಠಾಧಿಪತಿಗಳಾಗಿದ್ದ ಶ್ರೀವಿಶೊÌàತ್ತಮತೀರ್ಥರು ತಮಗೆ ಪರಂಪರೆಯಿಂದ ತಿಳಿದುಬಂದ ವಿಷಯವನ್ನು ಹೇಳುತ್ತಿದ್ದರು’ ಎಂಬುದನ್ನು ಸಂಶೋಧಕ ಡಾ| ಜಿ.ಕೆ. ನಿಪ್ಪಾಣಿಯವರು ಬೆಟ್ಟು ಮಾಡುತ್ತಾರೆ.

Advertisement

ವಿಹಿಂಪ ಚಳವಳಿ
1980ರ ಬಳಿಕ ವಿಶ್ವ ಹಿಂದೂ ಪರಿಷತ್‌ ನೇತೃತ್ವದಲ್ಲಿ ಅಯೋಧ್ಯಾ ರಾಮಜನ್ಮಭೂಮಿ ಚಳವಳಿ ಆರಂಭವಾಯಿತು. 1985ರ ಅ. 31, ನ. 1ರಂದು ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರ ಮೂರನೆಯ ಪರ್ಯಾಯ ಅವಧಿ ಯಲ್ಲಿ ನಡೆದ ಎರಡನೆಯ ಧರ್ಮ ಸಂಸದ್‌ ಅಧಿವೇಶನದಲ್ಲಿ ಅಯೋಧ್ಯೆ ರಾಮಮಂದಿರದ “ತಾಲಾ ಖೋಲೋ’ ಆಂದೋಲನಕ್ಕೆ ಕರೆ ನೀಡ ಲಾಯಿತು. “ವಹೀ ಮಂದಿರ್‌ ಬನಾಯೇಂಗೆ’ ಎಂಬ ಘೋಷವಾಕ್ಯ ಆಗ ಮೊಳಗಿತ್ತು. ಇವೆರಡೂ ಘೋಷಣೆಗಳು ರಾಷ್ಟ್ರ ಮಟ್ಟದ ಸುದ್ದಿಯಾದವು. ಆಗ ರಾಜಾಂಗಣದಲ್ಲಿ ನಡೆದ ಸಭೆಯಲ್ಲಿ ಸಾವಿರಕ್ಕೂ ಅಧಿಕ ಸಂತರು ಪಾಲ್ಗೊಂಡಿದ್ದರು. ಅನಂತರ ಪ್ರಧಾನಿಯಾಗಿದ್ದ ರಾಜೀವ್‌ ಗಾಂಧಿಯವರು ಮಂದಿರದ ಬೀಗ ತೆಗೆದು ಪೂಜೆಗೆ ಅವಕಾಶ ಮಾಡಿಕೊಟ್ಟರು.

1990ರ ದಶಕದಲ್ಲಿ ಇಟ್ಟಿಗೆಗಳ ಸಂಗ್ರಹ, ರಾಮರಥಯಾತ್ರೆ ಇತ್ಯಾದಿಗಳು ಜನಜನಿತ. 1992ರ ಡಿ. 6ರಂದು ಅಯೋಧ್ಯೆಯಲ್ಲಿ ಕರ ಸೇವೆಗೆ ಕರೆ ನೀಡಲಾಗಿತ್ತು. ಆಗ ಪೇಜಾವರ ಶ್ರೀಗಳು, ಪಲಿಮಾರು ಮಠದ ಶ್ರೀ ವಿದ್ಯಾಮಾನ್ಯತೀರ್ಥರು, ಶಿಷ್ಯರಾದ ಪ್ರಸಕ್ತ ಪರ್ಯಾಯ ಪೀಠಾಧಿಪತಿ ಶ್ರೀ ವಿದ್ಯಾಧೀಶ ತೀರ್ಥರು, ಶ್ರೀ ಭಂಡಾರಕೇರಿ ಮಠದ ಶ್ರೀ ವಿದ್ಯೆàಶತೀರ್ಥರು, ಶ್ರೀ ಅದಮಾರು ಮಠದ ಶ್ರೀ ವಿಬುಧೇಶತೀರ್ಥರು, ಪ್ರಸಕ್ತ ಪೀಠಾಧಿಪತಿ ಶ್ರೀ ವಿಶ್ವಪ್ರಿಯತೀರ್ಥರು ಪಾಲ್ಗೊಂಡಿದ್ದರು.

ಪೇಜಾವರ ಶ್ರೀಗಳಿಂದ ಪ್ರತಿಷ್ಠಾಪನೆ
ಡಿ. 6ರಂದು ಕರಸೇವಕರು ನಾಯಕರ ಮಾತು ಮೀರಿ ನಿಯಂತ್ರಣ ತಪ್ಪುತ್ತಿದ್ದಾಗ ಪೇಜಾವರ ಶ್ರೀಗಳು ತಡೆಯಲು ಯತ್ನಿಸಿದರು. ಆದರೆ ಫ‌ಲಕಾರಿಯಾಗಲಿಲ್ಲ. ಆ ದಿನ ಮಸೀದಿ ಕಟ್ಟಡ ಕುಸಿದ ಬಳಿಕ ಅದರೊಳಗಿದ್ದ ರಾಮಲಲ್ಲಾ ವಿಗ್ರಹವನ್ನು ಕಾರ್ಯಕರ್ತರು ಎಲ್ಲೋ ಕೊಂಡೊಯ್ದರು. ಪ್ರಾಯಃ ಇದಾಗುವಾಗ ಬೆಳಗ್ಗಿನ ಜಾವ ಆಗಿರಬಹುದು. ಸಾವಿರಾರು ಜನರ ಜಮಾವಣೆ, ಎಲ್ಲೆಡೆ ಗಂಭೀರ ವಾತಾವರಣ ವಿರುವಾಗ ಡಿ. 7ರ ಬೆಳಗ್ಗೆ ಪೇಜಾವರ ಶ್ರೀಗಳೂ ತರಾತುರಿಯಲ್ಲಿ ಹೋಗುವಾಗ ದಾರಿ ಮಧ್ಯೆ ಕಾರ್ಯಕರ್ತರು ಆ ವಿಗ್ರಹವನ್ನು ಮೂಲ ಸ್ಥಳದಲ್ಲಿ ಇರಿಸುವಂತೆ ಹೇಳಿದರು. ಘಳಿಗೆ, ಮುಹೂರ್ತ ಯಾವುದನ್ನೂ ಕಾಣದೆ ರಾಮ ಮಂತ್ರವನ್ನು ಉಚ್ಚರಿಸಿ ಪ್ರತಿಷ್ಠಾಪನೆ ಮಾಡಿದರು. ಇದುವರೆಗೆ ಅಲ್ಲಿ ಕೋಟ್ಯಂತರ ಜನರು ದರ್ಶನ ಪಡೆದ ರಾಮಲಲ್ಲಾನ ಮೂರ್ತಿ ಪೇಜಾವರ ಶ್ರೀಗಳಿಂದ ದಿಢೀರ್‌ ಪ್ರತಿಷ್ಠಾಪಿತವಾದದ್ದು.

ಪೇಜಾವರ ಮಠದ ಪಟ್ಟದ ದೇವರಲ್ಲಿ ಒಂದು ವಿಟuಲ, ಇನ್ನೊಂದು ಕಣ್ವತೀರ್ಥ ಮಠದಿಂದ ಬಂದ ರಾಮ. ಪಲಿಮಾರು ಮಠದ ಪಟ್ಟದ ದೇವರು ರಾಮ. ಈಗ ಪಲಿಮಾರು ಮಠದ ಪರ್ಯಾಯ ಶ್ರೀ ಕೃಷ್ಣಮಠದಲ್ಲಿ ನಡೆಯುವಾಗ ಸರ್ವೋಚ್ಚ ನ್ಯಾಯಾಲಯ ಮಂದಿರ ನಿರ್ಮಾಣಕ್ಕೆ ಪೂರಕವಾಗಿ ತೀರ್ಪು ಕೊಟ್ಟಿದೆ.

ಮತ್ತೂಂದು ಧರ್ಮಸಂಸದ್‌
ಕಾಲ ಉರುಳಿ 2016-17ರ 5ನೇ ಪರ್ಯಾಯ ಪೇಜಾವರ ಶ್ರೀಗಳಿಗೆ ಒದಗಿ ಬಂದಾಗ 2017ರ ನ. 24, 25, 26ರಂದು 15ನೆಯ ಧರ್ಮಸಂಸದ್‌ ಆಯೋಜನೆಗೊಂಡಿತ್ತು. ಸುಮಾರು 2 ಸಹಸ್ರ ಸಂತರು ಪಾಲ್ಗೊಂಡರು. ಈ ಧರ್ಮಸಂಸದ್‌ ಅಧಿವೇಶನದಲ್ಲಿ ರಾಮಮಂದಿರ ನಿರ್ಮಾಣದ ಖಚಿತ ನಿರ್ಣಯ ತಳೆಯಲಾಯಿತು. ಆಗ ಪೇಜಾವರ ಶ್ರೀಗಳು, “ಮಂದಿರ ನಿರ್ಮಾಣಕ್ಕೆ ಪೂರಕ ವಾತಾವರಣ ಕಂಡುಬರುತ್ತಿದೆ.

2019ರೊಳಗೆ ಇದು ಸಾಕಾರಗೊಳ್ಳಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
2019ರ ನ. 9ರಂದು ಸು.ಕೋ. ತೀರ್ಪು ಹೊರಬಿದ್ದಾಗ “ನಾನು ರಾಮಮಂದಿರದ ಪೂರಕ ವಾತಾವರಣವನ್ನು ನೋಡುತ್ತೇನೋ ಇಲ್ಲವೋ ಎಂಬ ಕೊರಗು ಇತ್ತು. ಈಗ ಸಂತೃಪ್ತಿಯಾಯಿತು’ ಎಂದು ತಿಳಿಸಿದರು.

ಇದೇ ದಿನ ಉಡುಪಿಯಲ್ಲಿ ಉತ್ಥಾನದ್ವಾದಶಿ, ಲಕ್ಷದೀಪೋತ್ಸವದ ಸಡಗರ. ಉತ್ಥಾನದ್ವಾದಶಿ ದೇವರು ಏಳುವ ದಿನ ಎಂಬ ನಂಬಿಕೆ ಇದೆ. ಪೇಜಾವರ ಶ್ರೀಗಳು ಎರಡೂ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ರವಿವಾರ ದಿಲ್ಲಿಯಲ್ಲಿ ಉನ್ನತ ಸ್ತರದ ಸಭೆಯಲ್ಲಿ ಭಾಗವಹಿಸುವರು.

1545: ಉಡುಪಿಯಲ್ಲಿ ವಾದಿರಾಜರಿಂದ ಅಯೋಧ್ಯೆಯಿಂದ ತಂದ ಆಂಜನೇಯ, ಗರುಡ ವಿಗ್ರಹ ಪ್ರತಿಷ್ಠಾಪನೆ
1985: ಅ. 31, ನ.1ರಂದು ಎರಡನೆಯ ಧರ್ಮಸಂಸದ್‌ ಅಧಿವೇಶನ ಉಡುಪಿಯಲ್ಲಿ ನಡೆದಾಗ “ತಾಲಾ ಖೋಲೋ’, “ಮಂದಿರ್‌ ವಹೀ ಬನಾಯೇಂಗೆ’ ಹೊಮ್ಮಿದ ಘೋಷವಾಕ್ಯ
1992: ಡಿ. 6ರಂದು ಅಯೋಧ್ಯೆಯ ಮಸೀದಿ ಕಟ್ಟಡ ಕುಸಿಯಿತು, ಡಿ. 7ರ ಬೆಳಗ್ಗೆ ಪೇಜಾವರ ಶ್ರೀಗಳಿಂದ ರಾಮಲಲ್ಲಾ ವಿಗ್ರಹ ದಿಢೀರ್‌ ಪ್ರತಿಷ್ಠಾಪನೆ
2017: ನ. 24ರಿಂದ 26ರವರೆಗೆ ನಡೆದ ಉಡುಪಿಯ 15ನೆಯ ಧರ್ಮಸಂಸದ್‌ ಅಧಿವೇಶನದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಒತ್ತಾಯ, ಪೇಜಾವರ ಶ್ರೀಗಳಿಂದ 2019ರ ಒಳಗೆ ಮಂದಿರ ನಿರ್ಮಾಣದ ವಿಶ್ವಾಸದ ನುಡಿ.

Advertisement

Udayavani is now on Telegram. Click here to join our channel and stay updated with the latest news.

Next