Advertisement

ಅಯೋಧ್ಯೆ ವಿವಾದ : ಅಂದು ಅಲಹಾಬಾದ್‌ ಹೈಕೋರ್ಟ್‌ ಕೊಟ್ಟ ತೀರ್ಪು

02:43 PM Nov 09, 2019 | Hari Prasad |

ಸುದೀರ್ಘ ಕಾಲ ವಿವಾದಕ್ಕೆ ಕಾರಣವಾಗಿದ್ದ ಅಯೋಧ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್‌ ಹೈಕೋರ್ಟ್‌ ಒಂಭತ್ತು ವರ್ಷಗಳ ಹಿಂದೆ ತನ್ನ ತೀರ್ಪನ್ನು ನೀಡಿತ್ತು. 2:1ರ ಅನುಪಾತದಲ್ಲಿ ವಿವಾದಿತ ಭೂಮಿಯನ್ನು ಹಂಚಿಕೆ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದ ನಾಲ್ಕು ದಾವೆದಾರರ ವಾದ ವಿವಾದಗಳನ್ನು ಆಲಿಸಿದ್ದ ಹೈಕೋರ್ಟ್‌ ಈ ಐತಿಹಾಸಿಕ ತೀರ್ಪುನ್ನು ನೀಡಿತ್ತು.

Advertisement

ಅಲಹಾಬಾದ್‌ ಹೈಕೋರ್ಟ್‌ ನ್ಯಾಯಮೂರ್ತಿಗಳಾಗಿದ್ದ ಎಸ್‌. ಯು. ಖನ್ನಾ, ನ್ಯಾಯಮೂರ್ತಿ ಸುಧೀರ್‌ ಅಗರ್‌ವಾಲ್‌ ಮತ್ತು ನ್ಯಾಯಮೂರ್ತಿ ಡಿ. ವಿ. ಶರ್ಮಾ ಅವರಿದ್ದ ತ್ರಿಸದಸ್ಯ ಪೀಠವು 2:1ರ ಅನುಪಾತದಲ್ಲಿ 2.77 ಎಕರೆ ಜಾಗವನ್ನು ನಿರ್ಮೋಹಿ ಅಖಾಡ, ರಾಮ ಲಲ್ಲಾ  ಮತ್ತು ಸುನ್ನಿ  ಕೇಂದ್ರೀಯ ವಕ್ಫ್ ಬೋರ್ಡ್‌ಗಳಿಗೆ ಹಂಚಿಕೆ ಮಾಡಿತ್ತು.

ಬಳಿಕ ಈ ತೀರ್ಪನ್ನು ಅರ್ಜಿದಾರರು ಸುಪ್ರೀಂಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. 2011ರಲ್ಲಿ ಸುಪ್ರೀಂ ಕೋರ್ಟ್‌ ಅಲಹಾಬಾದ್‌ ಹೈಕೋರ್ಟ್‌ನ ಈ ಆದೇಶಕ್ಕೆ ತಡೆಯಾಜ್ಞೆಯನ್ನು ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next