Advertisement

Ayodhya: ರಾಜ್ಯದಲ್ಲಿ ನಿಲ್ಲದ ರಾಮಮಂದಿರ ರಾಜಕೀಯ

12:10 AM Jan 14, 2024 | Team Udayavani |

ಕುಮಟಾ: ಹಿಂದೂ ಸಮಾಜಕ್ಕೆ ಸಾವಿರಾರು ವರ್ಷಗಳ ಋಣ ಇದೆ. ಹಿಂದೂಗಳಿಗೆ ಋಣ ಇಟ್ಟುಕೊಂಡು ಗೊತ್ತಿಲ್ಲ. ಅದನ್ನು ತೀರಿಸದಿದ್ದರೆ ಹಿಂದೂ ರಕ್ತವೇ ಅಲ್ಲ ಎಂದು ಉತ್ತರ ಕನ್ನಡ ಜಿಲ್ಲೆ ಸಂಸದ ಅನಂತ್‌ ಕುಮಾರ್‌ ಹೆಗಡೆ ಗುಡುಗಿದ್ದಾರೆ.

Advertisement

ಕುಮಟಾದಲ್ಲಿ ಶನಿವಾರ ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದ ಅವ ರು, ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ನಿರ್ನಾಮ ಮಾಡಿ ರಾಮ ಮಂದಿರ ನಿರ್ಮಾಣ ಮಾಡಿದ್ದು ಆರಂಭ. ದೇಶದ ಹಲವೆಡೆ ಹಿಂದೂ ಧರ್ಮಕ್ಕೆ ಅನ್ಯಾಯ ಆದ ಸಂಗತಿಗಳಿವೆ. ಹಿಂದೂ ಧರ್ಮ ತಿಂದಷ್ಟು ಪೆಟ್ಟನ್ನು ಮತ್ಯಾವ ಧರ್ಮವೂ ತಿಂದಿಲ್ಲ. ಸಾವಿರಾರು ವರ್ಷಗಳಿಂದ ಹಿಂದೂ ಗಳನ್ನು ಬೆದ ರಿಸುವ, ತುಳಿಯುವ, ಒಡೆಯುವ ಕಾರ್ಯ ನಡೆಯುತ್ತಲೇ ಬಂದಿದೆ. ಜಾತಿ, ಭಾಷೆ, ಪ್ರಾದೇಶಿಕತೆ ಹೆಸರಲ್ಲಿ ಹಿಂದೂ ಗಳನ್ನು ಒಡೆಯಲಾಗುತ್ತಿದೆ. ಮೂರ್ಖ ರಾಮ ಯ್ಯ  ನಂಥವರು ಇಂದಿಗೂ ಅದನ್ನೇ ಮಾಡುತ್ತಿ ದ್ದಾರೆ. ಆದರೆ ಇದರ ನಿರ್ನಾಮ ಮಾಡಲು ಆಗಿಲ್ಲ. ಆಗುವುದೂ ಇಲ್ಲ. ಈಗ ಎಲ್ಲರೂ ಎದ್ದೇಳಬೇಕಿದೆ. ವಿರೋಧಿಗಳಿಗೆ ಸರಿಯಾಗಿ ತಿರುಗೇಟು ನೀಡುವ ಕಾಲ ಬಂದಿದೆ ಎಂದರು.
ಭಟ್ಕಳದ ಚಿನ್ನದ ಪಳ್ಳಿಯೂ ಅಯೋಧ್ಯೆಯ ಸಾಲಿಗೆ ಸೇರಲಿದೆ. ಹಿಂದೂಗಳು ಅದನ್ನೂ ಪಡೆದೇ ತೀರುತ್ತೇವೆ. ಶಿರಸಿಯ ಸಿಪಿ ಬಜಾರ್‌ನ ಮಸೀದಿ ಮೊದಲು ವಿಜಯ ವಿಠಲ ದೇವಸ್ಥಾನ ಹಾಗೂ ಶ್ರೀರಂಗ ಪಟ್ಟಣದ ದೊಡ್ಡ ಮಸೀದಿ ಕೂಡ ಮಾರುತಿ ದೇವಸ್ಥಾನವಾಗಿತ್ತು. ಇಂತಹ ಅಪಮಾನ ಗೊಂಡಿರುವ ಅನೇಕ ಸಂಕೇತಗಳನ್ನು ಕಿತ್ತುಹಾಕೋ ತನಕ ಈ ಹಿಂದೂ ಸಮಾಜ ಮತ್ತೆ ಕೈಕಟ್ಟಿ ಕೂರುವುದಿಲ್ಲ ಎಂದರು.

ಮಂದಿರಕ್ಕೆ ವಿರೋಧವಿಲ್ಲ: ಸಿಎಂ
ರಾಯಚೂರ: ಅಯೋಧ್ಯೆಗೆ ಹೋಗುವು ದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ತಿಂಥಿಣಿಯ ಕಾಗಿನೆಲೆ ಕನಕ ಗುರು ಪೀಠ ದಲ್ಲಿ ಸುದ್ದಿಗಾರರ ಜತೆ ಮಾತನಾ ಡಿದ ಅವರು, ಅಯೋಧ್ಯೆಗೆ ನಮ್ಮ ವಿರೋಧವಿಲ್ಲ. ಆದರೆ ಬಿಜೆಪಿಯವರು ರಾಮಮಂ ದಿರ ವಿಚಾರದಲ್ಲಿ ರಾಜಕೀಯ ಮಾಡುತ್ತಿ ರುವುದಕ್ಕೆ ನಮ್ಮ ವಿರೋಧ ಇದೆ. ಅಯೋಧ್ಯೆಯಲ್ಲಿ ಶ್ರೀರಾಮ ಚಂದ್ರ ಮೂರ್ತಿ ಸ್ಥಾಪನೆ ಗಾಗಲಿ, ಮಂದಿರ ಉದ್ಘಾಟನೆಗಾಗಲಿ ನಮ್ಮ ವಿರೋಧ ಇಲ್ಲ ಎಂದರು.
ಶಾಸಕ ಯತೀಂದ್ರರನ್ನು ಕೊಡಗು- ಮೈಸೂರು ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕಿಳಿಸು ವುದಾಗಿ ನಾನಾಗಲಿ, ಬೇರೆ ಯಾರಾ ದರೂ ಹೇಳಿದ್ದೇವಾ? ಸಂಸದ ಪ್ರತಾಪ ಸಿಂಹಗೆ ಸೋಲಿನ ಭೀತಿ ಶುರುವಾಗಿದೆ. ಹೀಗಾಗಿ ಅವರಿಗೆ ಚಡಪಡಿಕೆ ಆರಂಭವಾಗಿದೆ. ಏನೇನೋ ಮಾತನಾ ಡುತ್ತಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಹೋಗದಿದ್ದರೆ ಉದ್ಘಾಟನೆ ನಿಲ್ಲದು
ಕುಮಟಾ: ರಾಮಮಂದಿರ ಉದ್ಘಾಟನೆಯಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ, ಹಾಗಾಗಿ ಅದಕ್ಕೆ ತೆರಳುತ್ತಿಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಅನಂತ್‌ ಕುಮಾರ್‌ ಹೆಗಡೆ ಏಕವಚನದಲ್ಲಿ ವಾಗ್ಧಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಬರಲಿ ಬಿಡಲಿ, ರಾಮಜನ್ಮ ಭೂಮಿ ಕಾರ್ಯವೇನೂ ನಿಲ್ಲುವುದಿಲ್ಲ ಎಂದು ಆಕ್ರೋಶಭರಿತರಾಗಿ ಮಾತನಾಡಿ ದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಾತನಾ ಡಿದ ಅವರು, ಸಿದ್ದರಾಮಯ್ಯ ಅವರನ್ನು ಮೂರ್ಖರಾಮಯ್ಯ ಎಂದು ಜರೆದರು. ಜಾತಿ ಹೆಸರಿನಲ್ಲಿ ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್‌ ನಮ್ಮ ವಿರೋಧಿಯಲ್ಲ. ಕಾಂಗ್ರೆಸ್‌ಗೆ ಬಿಜೆಪಿಯನ್ನು, ಹಿಂದೂಗಳನ್ನು ವಿರೋಧಿಸುವ ಶಕ್ತಿಯೇ ಇಲ್ಲ. ಆದರೆ ಹಿಂದೂಗಳನ್ನು ಒಡೆಯಲು ನಮ್ಮ ತಲೆಯಲ್ಲಿ ಹುಚ್ಚು ಹುಳ ಬಿಡುವವರು, ಸನಾತನ ಸಂಸ್ಕೃತಿ ವಿರುದ್ಧ ಮಾತನಾಡುವವರು ನಮ್ಮ ವಿರೋಧಿಗಳು ಎಂದು ಏಕವಚನದಲ್ಲೇ ವಾಗ್ಧಾಳಿ ನಡೆಸಿದರು.

ರಾಮನ ಹೆಸರಲ್ಲಿ ರಾಜಕೀಯ ಬಿಜೆಪಿಗೆ ಅಗತ್ಯವಿಲ್ಲ: ಬಿವೈವಿ
ಶಿವಮೊಗ್ಗ: ರಾಮನ ಹೆಸರಲ್ಲಿ ರಾಜಕೀಯ ಮಾಡುವಂತಹ ಅಗತ್ಯ ಬಿಜೆಪಿಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗ ಬೇಕು ಎಂದು ಬಿಜೆಪಿ ಹೋರಾಟ ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವ ದಲ್ಲಿ ರಾಮಮಂದಿರ ನಿರ್ಮಾಣ ಆಗಿರು ವುದು ಖುಷಿ ತಂದಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯರಿಗೆ ರಾಮನ ಬಗ್ಗೆ ನಂಬಿಕೆ ಬಂದಿರುವುದು ಖುಷಿಯ ವಿಚಾರ. ಅವರು ರಾಮಮಂದಿರಕ್ಕೆ 22ಕ್ಕೆ ಆದರೂ ಹೋಗಲಿ, ಆಮೇಲೆ ಬೇಕಾದರೆ ಹೋಗಲಿ. ರಾಮನ ಬಗ್ಗೆ ನಂಬಿಕೆ ಇಡಲು ಕಾಂಗ್ರೆಸ್‌ ಮುಂದಾಗಿರುವುದು ಸಂತೋಷದ ವಿಚಾರ ಎಂದರು.

Advertisement

ಅನಂತ್‌ ಸಂಸ್ಕೃತಿಗೆ ಭಾಷೆ ಪ್ರತಿಬಿಂಬ: ಮುಖ್ಯಮಂತ್ರಿ
ಬಾಗಲಕೋಟೆ: ಸಂಸದ ಅನಂತಕುಮಾರ್‌ ಹೆಗಡೆ ಭಾಷೆಯೇ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಸಂಸ್ಕೃತಿ ಇಲ್ಲದವರ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರಾಜಕೀಯ ಉದ್ದೇಶದಿಂದ ರಾಜ್ಯದ ಸಿಎಂ ಬಗ್ಗೆ ಅಶ್ಲೀಲ ಪದಗಳನ್ನು ಬಳಸಿದ್ದಾರೆ. ಕೇಂದ್ರದ ಮಂತ್ರಿಯಾಗಿದ್ದಾಗ ಸಂವಿಧಾನವನ್ನೇ ಬದಲಾಯಿಸುತ್ತೇನೆ ಎಂದಿದ್ದರು. ಅಂಥ ಅನಂತ ಕುಮಾರ್‌ ಹೆಗಡೆಯವರಿಂದ ಉತ್ತಮ ಸಂಸ್ಕೃತಿಯನ್ನು ಅಪೇಕ್ಷಿಸಲು ಸಾಧ್ಯವಿಲ್ಲ. ಅವರ ಭಾಷೆ ಸುಸಂಸ್ಕೃತವಾಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next