Advertisement

ಎಲ್ಲ ಭಾರತೀಯರಿಗಾಗಿ ಅಯೋಧ್ಯಾ ನಗರಿ : ಅಯೋಧ್ಯೆ ಕಾಮಗಾರಿ ಅವಲೋಕನ

01:57 AM Jun 27, 2021 | Team Udayavani |

ಹೊಸದಿಲ್ಲಿ : ರಾಮಮಂದಿರದ ನಿರ್ಮಾಣದ ಜತೆಯಲ್ಲಿ ಅಯೋಧ್ಯೆಯನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸಿ ಹಿಂದೂ ಸಂಪ್ರದಾಯದ ಉತ್ಕೃಷ್ಟ ಸ್ವರೂಪವಾಗಿ ಮತ್ತು ನಮ್ಮ ಅಭಿವೃದ್ಧಿ ಯೋಜನೆಗಳ ಸರ್ವಶ್ರೇಷ್ಠ ಉದಾ ಹರಣೆಯಾಗಿ ರೂಪಿಸಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

Advertisement

ಅಯೋಧ್ಯೆಯ ಶ್ರೀ ರಾಮ ಮಂದಿರ ತೀರ್ಥಕ್ಷೇತ್ರ ಪರಿಕಲ್ಪನೆಯಡಿ ಕೈಗೊಳ್ಳಲಾಗಿರುವ 20 ಸಾವಿರ ಕೋ.ರೂ.ಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯನ್ನು ಮೋದಿ ಶನಿವಾರ ನಡೆಸಿದರು. ಉ. ಪ್ರ. ಸಿಎಂ ಯೋಗಿ ಆದಿತ್ಯನಾಥ್‌ ಉದ್ದೇಶಿತ ಮೂಲ ಸೌಕರ್ಯಗಳ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು.

ಭಾರತೀಯರಿಂದ, ಭಾರತೀಯರಿಗಾಗಿ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಸ್ತೆಗಳು, ಹೊಸ ರೈಲ್ವೇ ನಿಲ್ದಾಣ ಮತ್ತು ಹೊಸ ವಿಮಾನ ನಿಲ್ದಾಣ ಹಾಗೂ ಇನ್ನಿತರ ಮೂಲಸೌಕರ್ಯಗಳ ಬಗ್ಗೆ ವಿವರಣೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಅಯೋಧ್ಯೆ ಪ್ರತಿಯೊಬ್ಬ ಭಾರತೀಯನಿಂದ ಭಾರತೀಯರಿಗಾಗಿ ರೂಪುಗೊಳ್ಳುವಂತೆ ಮಾಡಬೇಕು. ಆ ಕ್ಷೇತ್ರವನ್ನು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಅಡಕವಾಗಿರುವ ಈ ನೆಲದ ಸಂಸ್ಕೃತಿ, ಸಂಪ್ರದಾಯಗಳ ಪ್ರತೀಕವಾಗಿ ರೂಪಿಸಬೇಕು. ಭವಿಷ್ಯದ ಮೂಲ ಸೌಕರ್ಯಗಳ ಮೂಲಕ ಪ್ರವಾಸಿಗರಿಗೆ, ಭಕ್ತರಿಗೆ ಆಪ್ಯಾಯಮಾನವಾಗಿಸಬೇಕು. ಜೀವನದಲ್ಲಿ ಒಮ್ಮೆಯಾದರೂ ಅಯೋಧ್ಯೆಗೆ ಹೋಗಿ ಬರಬೇಕು ಎನ್ನಿಸುವಷ್ಟರ ಮಟ್ಟಿಗೆ ಅಭಿವೃದ್ಧಿಗೊಳಿಸಬೇಕು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next