Advertisement

Mudigere: ಅಯೋಧ್ಯೆ ಶ್ರೀರಾಮ ದರ್ಶನ-2024: ಬಿಜೆಪಿ ತಂಡ ಅಯೋಧ್ಯೆಗೆ ಭೇಟಿ

12:12 PM Feb 10, 2024 | Team Udayavani |

ಮೂಡಿಗೆರೆ: ಮೂಡಿಗೆರೆಯಿಂದ ಅಯೋಧ್ಯೆಗೆ ತೆರಳಿದ ಬಿಜೆಪಿ ತಂಡವೊಂದು ಫೆ. 10ರ ಶನಿವಾರ ಅಯೋಧ್ಯೆ ಶ್ರೀ ರಾಮನ ದರ್ಶನ ಪಡೆದಿದೆ.

Advertisement

ಬಿಜೆಪಿ ಆಯೋಜಿಸಿದ್ದ ಅಯೋಧ್ಯೆ ಶ್ರೀರಾಮ ದರ್ಶನ- 2024 ಅಂಗವಾಗಿ ಕಳೆದ ಬುಧವಾರ ರಾಜ್ಯ ಬಿಜೆಪಿಯ ಮೊದಲ ತಂಡವಾಗಿ ತುಮಕೂರು, ಚಿಕ್ಕಮಗಳೂರು, ಹಾಸನ, ಮಧುಗಿರಿಯ 1200 ಜನರ ಜನರ ತಂಡ ಹೊರಟಿದ್ದು ತುಮಕೂರಿನಲ್ಲಿ ಚಾಲನೆ ನೀಡಲಾಗಿದೆ.

ಮೂಡಿಗೆರೆ ಸೇರಿದಂತೆ ಚಿಕ್ಕಮಗಳೂರಿನ ತಂಡವನ್ನು ಕಡೂರಿನಲ್ಲಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಮಾಜಿ ಶಾಸಕರುಗಳಾದ ಬೆಳ್ಳಿ ಪ್ರಕಾಶ್, ಡಿ.ಎಸ್. ಸುರೇಶ್, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರಡಪ್ಪ, ಪ್ರಧಾನ ಕಾರ್ಯದರ್ಶಿ ನರೇಂದ್ರಜಿ ಪುಣ್ಯಪಾಲ್ ಹಾಗೂ ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಕಡೂರು ರೈಲ್ವೆ ನಿಲ್ದಾಣದಲ್ಲಿ ಬೀಳ್ಕೊಟ್ಟರು.

ಯಾತ್ರೆಯನ್ನು ಅತ್ಯಂತ ಭದ್ರತೆಯಿಂದ ತಲುಪಿಸುವ ವ್ಯವಸ್ಥೆ ಮಾಡಿದ್ದು ರಾಮಭಕ್ತರು ಸೇರಿದಂತೆ ಹಲೋ ಸಾರ್ವಜನಿಕರು ಹೂಮಾಲೆ, ಹಾರಗಳು ಹಾಗೂ ಕಾಣಿಕೆ ನೀಡುವ ಮೂಲಕ ಎಲ್ಲಾ ರೈಲ್ವೆ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ನೀಡಿದ್ದರು.

ಇಂದು ಅಯೋಧ್ಯೆ ದಶನವನ್ನು ನಡೆಸಲಾಯಿತು. ನಯನ ಕೆಲವರ, ಪರಿಕ್ಷಿ ಪರೀಕ್ಷಿತ್, ಪದ್ಮಣ್ಣ, ಸಂಜಯ್, ಭಾರತಿ, ರವೀಂದ್ರ, ನಂದನ್, ಕುಂದೂರು, ಪ್ರಸನ್ನ, ರವಿ, ಪ್ರದೀಪ್, ಪಟ್ಟಣ ಪಂಚಾಯತ್ ಸದಸ್ಯರಾದ ಸುಧೀರ್‌, ಕಮಲಕ್ಷ ಸೇರಿದಂತೆ ಹಲವರು ದರ್ಶನ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next