Advertisement

ಅಯೋಧ್ಯೆ: ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ರಿಜ್ವಿ

09:29 AM Nov 19, 2018 | Team Udayavani |

ಹೊಸದಿಲ್ಲಿ: ಅಯೋಧ್ಯೆಯಲ್ಲಿನ ರಾಮ ಮಂದಿರ ವಿವಾದ ಪರಿಹರಿಸಲು ಕೋರ್ಟ್‌ನ ಹೊರಗೆ ಮಾತುಕತೆ ನಡೆಯುವುದು ಸೂಕ್ತ. ಈ ಬಗ್ಗೆ ತಾವು ಮಧ್ಯಸ್ಥಿಕೆ ವಹಿಸುವುದಾಗಿ ರಾಷ್ಟ್ರೀಯ ಅಲ್ಪಸಂಖ್ಯಾಕರ ಆಯೋಗದ ಅಧ್ಯಕ್ಷ ಘಯೊರುಲ್‌ ಹಸನ್‌ ರಿಜ್ವಿ ಹೇಳಿದ್ದಾರೆ. “ಪಿಟಿಐ’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು,  ಹಿಂದೂಗಳ ಧಾರ್ಮಿಕ ವಿಚಾರದ ಬಗ್ಗೆ ಮುಸ್ಲಿಮರು ದೊಡ್ಡ ಮನಸ್ಸು ಮಾಡಬೇಕು ಎಂದಿದ್ದಾರೆ.

Advertisement

ವಿವಾದ ಪರಿಹಾರಕ್ಕೆ ಮುಸ್ಲಿ ಮರು ಒಪ್ಪಿದರೆ ಕಾಶಿ ಮತ್ತು ಮಥುರಾದಲ್ಲಿ ಸಮಸ್ಯೆಗಳೇ ಉಂಟಾಗಲಾರವು. ನ.14ರ ಸಭೆಯಲ್ಲಿ ವಿವಾದ ಪರಿಹಾರಕ್ಕೆ ಅಗತ್ಯಬಿದ್ದರೆ ಮಧ್ಯಸ್ಥಿಕೆ ವಹಿಸುವ ಅಧಿಕಾರವನ್ನು ತಮಗೇ ನೀಡಲಾಗಿದೆ ಎಂದಿದ್ದಾರೆ. 

ಬಿಜೆಪಿಗೆ ಆಸಕ್ತಿಯೇ ಇಲ್ಲ: ಮಂದಿರ ನಿರ್ಮಾಣಕ್ಕೆ ಸಂಬಂ ಧಿಸಿ ಅಧ್ಯಾದೇಶ ಜಾರಿಗೆ ತರಲು ಕೇಂದ್ರ ಸರಕಾರ ವಿಳಂಬ ಮಾಡುತ್ತಿರುವುದು, ಮಂದಿರ ನಿರ್ಮಾಣದಲ್ಲಿ ಪಕ್ಷ ಆಸಕ್ತಿ ಹೊಂದಿಲ್ಲವೆಂಬುದನ್ನು ತೋರಿಸುತ್ತದೆ ಎಂದು ಶಿವಸೇನೆ ಸಂಸದ ಸಂಜಯ ರಾವುತ್‌ ಹೇಳಿದ್ದಾರೆ. 2014ರಲ್ಲಿ ಬಿಜೆಪಿಗೆ ನೆರ ವಾದ ಆರ್‌ಎಸ್‌ಎಸ್‌ ಈ ಕಾರಣಕ್ಕಾಗಿಯಾದರೂ ಮೋದಿ ಸರಕಾರವನ್ನು ಬೀಳಿಸಬೇಕು ಎಂದರು. ಇದೇ ವೇಳೆ, ಹಿಂದೂ – ಮುಸ್ಲಿಮರು ಶೀಘ್ರವೇ ವಿಚಾರ ಇತ್ಯರ್ಥವಾಗಲು ಬಯಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಶಾನವಾಜ್‌ ಹುಸೇನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next