Advertisement

Ayodhye: ಮನೆಮನೆಗೆ ಅಯೋದ್ಯೆ ತೀರ್ಥಕ್ಷೇತ್ರದ ಮಂತ್ರಾಕ್ಷತೆ ತಲುಪಿಸಲು ಕ್ರಮ

12:39 PM Dec 03, 2023 | Team Udayavani |

ಹುಣಸೂರು: ಅಯೋದ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಯ ಅಖಂಡ ಧಾರ್ಮಿಕ ಕಾರ್ಯಕ್ರಮ ಹಿನ್ನೆಲೆ ಜ.22 ರಂದು ನಗರ ಸೇರಿದಂತೆ ಪ್ರತಿ ಹಳ್ಳಿಗಳ ರಾಮಮಂದಿರ, ದೇವಾಲಯಗಳಲ್ಲಿ ಎಲ್.ಇ.ಡಿ.ಪರದೆಗಳ ಮೂಲಕ ಉದ್ಘಾಟನಾ ಕಾರ್ಯಕ್ರಮವನ್ನು ನಾಡಿನ ಸರ್ವರೂ ಕಣ್ತುಂಬಿಕೊಳ್ಳಲು ಕಾರ್ಯಕರ್ತರು ಕ್ರಮವಹಿಸಬೇಕೆಂದು ವಿಎಚ್‌ಪಿ ಪ್ರಾಂತ ಸಹಕಾರ್ಯದರ್ಶಿ ಸುರೇಶ್ ಸೂಚಿಸಿದರು.

Advertisement

ನಗರದ ಬ್ರಾಹ್ಮಣ ಬಡಾವಣೆಯ ಶ್ರೀ ರಾಘವೇಂದ್ರ ಸಮುದಾಯ ಭವನದಲ್ಲಿ ಗಾವಡಗೆರೆಯ ಶ್ರೀ ನಟರಾಜಸ್ವಾಮಿಜಿಗಳ ಸಾನಿಧ್ಯದಲ್ಲಿ ನಡೆದ  ಅಯೋದ್ಯೆ ಶ್ರೀರಾಮತೀರ್ಥ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಮಂತ್ರಾಕ್ಷತೆ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಜನವರಿ 22ರ ಮದ್ಯಾಹ್ನ ಅಯೋಧ್ಯೆಯಲ್ಲಿ ನಡೆಯುವ ಅಖಂಡ ಧಾರ್ಮಿಕ ಕಾರ್ಯಕ್ರಮ ಇದಾಗಿದ್ದು, ಅಲ್ಲಿ ಸಾಧುಸಂತರು ಸೇರಿದಂತೆ ಐದು ಲಕ್ಷ ಮಂದಿ ಮಾತ್ರ ಅವಕಾಶವಿದ್ದು, ಉಳಿದಂತೆ ದೇಶದಾದ್ಯಂತ ಈ ಪುಣ್ಯದ ಕಾರ್ಯಕ್ರಮ ವೀಕ್ಷಿಸಲು ಎಲ್ಲ ದೇವಾಲಯಗಳಲ್ಲಿ ಎಲ್‌ಇಡಿ ಪರದೆಯನ್ನು ಅಳವಡಿಸಲು ತೀರ್ಮಾನಿಸಲಾಗಿದೆ ಎಂದರು.

ಅಲ್ಲದೆ ಅಂದು ಸಂಜೆ ಪ್ರತಿಯೊಬ್ಬರೂ ತಮ್ಮ ಮನೆ ಎದುರು ಐದು ಹಣತೆ ಹಚ್ಚುವ ಮೂಲಕ ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ ಸಂಭ್ರಮವನ್ನು ಆಚರಿಸಬೇಕೆಂದರು.

Advertisement

Udayavani is now on Telegram. Click here to join our channel and stay updated with the latest news.

Next