Advertisement

ರಾಮ ಮಂದಿರ ನಿರ್ಮಾಣ ಕಾಮಗಾರಿಯ ದೃಶ್ಯಗಳು ಉಪಗ್ರಹದಲ್ಲಿ ದಾಖಲು!

09:27 PM Jun 30, 2021 | Team Udayavani |

ಪಾಟ್ನಾ: ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಭರದಿಂದ ಸಾಗಿದ್ದು ಅದರ ಕಾಮಗಾರಿಯ ದೃಶ್ಯಗಳು ಭೂಮಿಯಿಂದ ನೂರಾರು ಕಿ.ಮೀ. ದೂರದಲ್ಲಿರುವ ಉಪಗ್ರಹದ ಕಣ್ಣಿಗೂ ಬಿದ್ದಿವೆ!

Advertisement

ಉಪಗ್ರಹ ಚಿತ್ರಗಳಲ್ಲಿ ಮಂದಿರ ನಿರ್ಮಾಣ ಜಾಗದಲ್ಲಿ ಕಾಮಗಾರಿ ಆರಂಭವಾದಾಗಿನಿಂದ ಆಗಿರುವ ಬದಲಾವಣೆಗಳನ್ನು ಗಮನಿಸಬಹುದಾಗಿದೆ.

ಮತ್ತೂಂದೆಡೆ, ಕಾಮಗಾರಿಯ ಪ್ರಗತಿಯ ಬಗ್ಗೆ ಟ್ವೀಟ್‌ ಮಾಡಿರುವ ಮಂದಿರ ನಿರ್ಮಾಣದ ಮೇಲುಸ್ತುವಾರಿ ಸಮಿತಿಯಾದ ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌, “1,20,000 ಚದರಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಮಂದಿರದ ಅಡಿಪಾಯಕ್ಕಾಗಿ, ಸುಮಾರು 40ರಿಂದ 45 ಪದರದಷ್ಟು ಕಾಂಕ್ರೀಟ್‌ ಹಾಕಲು ನಿರ್ಧರಿಸಲಾಗಿದೆ. ಈಗಾಗಲೇ, 4 ಪದರಗಳು ಕಾಂಕ್ರೀಟ್‌ ಹಾಕಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ :ಲಸಿಕೆ ಸುರಕ್ಷಿತ, ಸಂತಾನೋತ್ಪತ್ತಿಗೆ ಯಾವುದೇ ಸಮಸ್ಯೆ ಇಲ್ಲ : ಕೇಂದ್ರ ಆರೋಗ್ಯ ಸಚಿವಾಲಯ

Advertisement

Udayavani is now on Telegram. Click here to join our channel and stay updated with the latest news.

Next