Advertisement

ಅಯೋಧ್ಯೆ ರಾಮಮಂದಿರ ನಿರ್ಮಾಣ ಶತಃಸಿದ್ಧ

10:15 AM Dec 02, 2018 | Team Udayavani |

ಸೇಡಂ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರವಾಗಿ ಸರ್ವೋತ್ಛ ನ್ಯಾಯಾಲಯದ ನಿಲುವು ಅಸಮಾಧಾನ ತಂದಿದ್ದು, ರಾಮಮಂದಿರ ನಿರ್ಮಾಣ ಶತಸಿದ್ಧವಾಗಿದೆ ಎಂದು ವಿಶ್ವಹಿಂದೂ ಪರಿಷತ್‌ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವಜಿ ಹೆಗಡೆ ಹೇಳಿದರು.

Advertisement

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ದೀಪಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು. ಹಿಂದೂಗಳ ಭಾವನೆ ಧಿಕ್ಕರಿಸುವ ರೀತಿಯಲ್ಲಿ ವ್ಯವಸ್ಥೆಗಳು
ನಿರ್ಮಾಣವಾಗಿವೆ. ಹಿಂದೂಗಳನ್ನು ಹತ್ತಿಕ್ಕುವ ಷಡ್ಯಂತ್ರ ತೆರೆಮರೆಯಲ್ಲಿ ನಡೆಯುತ್ತಿದೆ. ಧರ್ಮ, ಸಂಸ್ಕಾರ ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಅಸುರ ಶಕ್ತಿಗಳ ಸಂಹಾರಕ್ಕೆ ಸ್ತ್ರೀಶಕ್ತಿ ಒಂದಾಗಬೇಕಾಗಿದೆ ಎಂದರು.

ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರ ಪ್ರವೇಶ ನಿಷೇಧ ವಿಚಾರ ಅಪ್ರಸ್ತುತ. ಏಕೆಂದರೆ ಅಲ್ಲಿ ಮಹಿಳೆಯರಿಗೆ ಪ್ರವೇಶವಿದೆ. ಆದರೆ ವಯಸ್ಸಿನ ಮಿತಿ ಇದೆ. ಉದ್ದೇಶ ಪೂರ್ವಕವಾಗಿ ಕೆಲವರು ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಹಿಂದೂ ಧರ್ಮದ ಆಚರಣೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
 
ಶಿವಶಂಕರೇಶ್ವರ ಮಠದ ಶಿವಶಂಕರ ಸ್ವಾಮೀಜಿ, ಯಾದಗಿರಿ ವಿಶ್ವಕರ್ಮ ಏಕದಂಡಗಿ ಮಠದ ಶ್ರೀನಿವಾಸ ಸ್ವಾಮೀಜಿ, ಸುಲೇಪೇಟ ಏಕದಂಡಗಿ ಮಠದ ದೊಡ್ಡೇಂದ್ರ ಸ್ವಾಮೀಜಿ, ಡಾ| ಭಾಗ್ಯಶ್ರೀ ಪಾಟೀಲ, ಸಿಪಿಐ ಶಂಕರಗೌಡ ಪಾಟೀಲ, ವಿಹಿಂಪ ಅಧ್ಯಕ್ಷ ರಾಘವೇಂದ್ರ ಮುಸ್ತಾಜರ್‌, ಮಾತೃಶಕ್ತಿ ಪ್ರಮುಖೆ ಭಾಗ್ಯಲಕ್ಷ್ಮೀ ನಾಯಿಕೋಡಿ, ಮಾಧವಿ ಐನಾಪುರ ಹಾಜರಿದ್ದರು. 

ವೈದಿಕ ಪಂಡಿತ ಸತ್ಯನಾರಾಯಣ ಮಹಾರಾಜ ದೀಪಲಕ್ಷ್ಮೀ ಪೂಜಾ ಪದ್ಧತಿ ಬೋಧಿ ಸಿದರು. ವಿಭಾಗೀಯ ಕಾರ್ಯದರ್ಶಿ ಶಿವಕುಮಾರ ಬೋಳಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭವಾನಿ ರಾಜಕುಮಾರ ಗೀತೆ ಹಾಡಿದರು. ಪ್ರಕಾಶ ಕುಲಕರ್ಣಿ ಓಂಕಾರ ಪಠಿಸಿದರು. ಸಾಧನಾ ಸಂಗಡಿಗರು ಪ್ರಾರ್ಥಿಸಿದರು. ಸಾಧನಾ ನೀಲಂಗಿ ಸ್ವಾಗತಿಸಿ, ಪರಿಚಯಿಸಿದರು. ಆರತಿ ಕಡಗಂಚಿ ನಿರೂಪಿಸಿದರು, ಅವಿನಾಶ ಮಡಿವಾಳ ವಂದಿಸಿದರು.

ಲವ್‌ ಜಿಹಾದ್‌ಗೆ ಪ್ರತಿ ವರ್ಷ 1.5 ಲಕ್ಷ ಹಿಂದೂ ಯುವತಿಯರು ಬಲಿಯಾಗುತ್ತಿದ್ದಾರೆ. ಹಿಂದೂಗಳ ಶಕ್ತಿಯನ್ನು ನೇರವಾಗಿ ಕುಗ್ಗಿಸಲಾಗದ ಶಕ್ತಿಗಳು, ಬೆನ್ನಿಗೆ ಚೂರಿ ಹಾಕುವ ಕೆಲಸಕ್ಕೆ ಕೈ ಹಾಕಿವೆ. ಯುವತಿಯರು ಈ ಕುರಿತು ಜಾಗೃತರಾಗಿರುವ ಅವಶ್ಯಕತೆ ಇದೆ. ಲವ ಜಿಹಾದ್‌ ಜಾಲದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಎಚ್ಚರಿಕೆವಹಿಸುವ ಅವಶ್ಯಕತೆ ಇದೆ.
 ಕೇಶವಜಿ ಹೆಗಡೆ

Advertisement
Advertisement

Udayavani is now on Telegram. Click here to join our channel and stay updated with the latest news.

Next