Advertisement
ಶ್ರೀರಾಮ ಜನ್ಮಸ್ಥಳವು 70 ಎಕರೆಗಳಷ್ಟು ವಿಶಾಲವಾಗಿದೆ. ಇಲ್ಲಿನ ವಿವಿಧ ಭಾಗಗಳು ಪೌರಾಣಿಕವಾಗಿ ಅತ್ಯಂತ ಮಹತ್ವವನ್ನು ಹೊಂದಿವೆ. ಮುಖ್ಯ ದೇಗುಲವು ನೃತ್ಯ, ರಂಗ, ಸಭಾ, ಪ್ರಾರ್ಥನಾ ಮತ್ತು ಕೀರ್ತನಾ ಎಂಬ 5 ಮಂಟಪಗಳನ್ನು ಒಳಗೊಂಡಿದೆ. ಉಳಿದಂತೆ ಯಾಗಶಾಲೆಯಾಗಿರುವ ಶ್ರೀರಾಮ ಕುಂಡ, ಅನುಷ್ಠಾನ ಮಂಟಪವಾಗಿರುವ ಕರ್ಮ ಕ್ಷೇತ್ರ, ವೀರ ಮಾರುತಿಯ ವಿಶಾಲ ಪ್ರತಿಮೆಯುಳ್ಳ ಹನುಮಾನ್ ಗಢಿ, ಶ್ರೀ ರಾಮ ಜನ್ಮಭೂಮಿಯ ಪುರಾತತ್ವ ಮತ್ತು ಐತಿಹಾಸಿಕ ವಸ್ತುಗಳು ಮತ್ತು ದಾಖಲೆಗಳ ಸಂಗ್ರಹಾಲಯವಾಗಿರುವ ಶ್ರೀರಾಮಲಲ್ಲಾ ಪುರಾಕಾಲಿಕ್ ದರ್ಶನ ಮಂಡಲ, ಸತ್ಸಂಗ್‌ಭವನ್ ಸಭಾಗೃಹವಾಗಿರುವ ಶ್ರೀ ಕಮ್ಮ ಕೀರ್ತಿ, ವೇದ, ಪುರಾಣ, ರಾಮಾ ಯಣ ಮತ್ತು ಸಂಸ್ಕೃತ ಅಧ್ಯಯನ ಹಾಗೂ ಸಂಶೋಧನ ಕೇಂದ್ರವಾಗಿರುವ ಗುರು ವಶಿಷ್ಠ ಪೀಠಿಕಾ, ಭಕ್ತರು ಧ್ಯಾನನಿರತರಾಗಲು ವಿಶೇಷ ಶಾಂತಿ ವಲಯ ಭಕ್ತಿ ತಿಲಾ, ರಾಮಲೀಲಾ ಕೇಂದ್ರ/ ಓಪನ್ ಥಿಯೇಟರ್ ಆಗಿರುವ ತುಳಸಿ, ಬಹೂಪಯೋಗಿ ಸಮುದಾಯ ಕೇಂದ್ರ ರಾಮ ದರ್ಬಾರ್, ಪ್ರದರ್ಶನ ಕೇಂದ್ರ ಮಾತಾ ಕೌಶಲ್ಯ ವಾತ್ಸಲ್ಯ ಮಂಡಲ್, ಟಿವಿ/ಸಿನೆಮಾ/ಎವಿ ಆಧರಿತ ಶೋ ಥಿಯೇಟರ್ ಆಗಿರುವ ರಾಮಾಂಗಣ, ಗ್ರಂಥಾಲಯ/ಓದುವ ಕೊಠಡಿಯಾಗಿರುವ ರಾಮಾಯಣ, ದಾಖಲೆ, ಸಂಶೋಧನಾ ಕೇಂದ್ರವಾಗಿರುವ ಮಹರ್ಷಿ ವಾಲ್ಮೀಕಿ, ಪರವೂರ ಭಕ್ತರಿಗಾಗಿ ಬೋರ್ಡಿಂಗ್ ಪ್ರದೇಶವಾಗಿರುವ ರಾಮಾಶ್ರಯಂ, ಆದರ್ಶ ಗೋ ಶಾಲೆ ಶ್ರೀ ದಶರಥ್, ಲಿಲ್ಲಿ ಕೆರೆ ಮತ್ತು ಸಂಗೀತ ಕಾರಂಜಿಯನ್ನು ಹೊಂದಿರುವಲಕ್ಷ್ಮಣ್ ವಾಟಿಕಾ, ಮಕ್ಕಳು ಮತ್ತು ಯುವಜನತೆಯ ಚಟುವಟಿಕೆ ಪ್ರದೇಶವಾಗಿರುವ ಲವ-ಕುಶ ನಿಕುಂಜ್, ವಿಶೇಷ ಗಣ್ಯರ ವಸತಿ ಪ್ರದೇಶವಾಗಿರುವ ಮರ್ಯಾದಾ ಕುಂಜ್, ಬೋಗ್/ಪ್ರಸಾದ ವಿತರಣ ಕೇಂದ್ರವಾಗಿರುವ ಭಾರತ್-ಪ್ರಸಾದ್ ಮಂದಿರ್, ಬೃಹತ್ ಭೋಜನಶಾಲೆ, ಆಹಾರ ಸಾಮಗ್ರಿಗಳ ದಾಸ್ತಾನು ಕೊಠಡಿ, ಭಕ್ತರಿಗೆ ಕೈತೊಳೆಯುವ ವ್ಯವಸ್ಥೆಯನ್ನು ಒಳಗೊಂಡ ಬೃಹತ್ ಮಾತಾ ಸೀತಾ ರಸೋಯಿ ಅನ್ನಕ್ಷೇತ್ರ ಮತ್ತು ಸಿಂಹದ್ವಾರದ ಮುಂಭಾಗದಲ್ಲಿ ದೇಶದಲ್ಲಿಯೇ ಅತೀ ಎತ್ತರದ ಧ್ವಜಸ್ತಂಭವಿದೆ.
ಆಡಳಿತ ವಿಧಾನವನ್ನು ನೆನಪಿಗೆ ತರಬಹುದು.
Related Articles
ಇಡೀ ಭಾರತದಲ್ಲಿ ಎಲ್ಲರ ಪ್ರೀತ್ಯಾದರಕ್ಕೆ ಪಾತ್ರನಾಗಿರುವ ಹನುಮಂತನ ದೇಗುಲಕ್ಕೆ ಜಾಗ ಸಿದ್ಧಮಾಡಲಾಗಿದೆ.
Advertisement
ಸೀತಾ ಕೂಪ, ಮಹರ್ಷಿಗಳಿಗೆ ಜಾಗ: ದೇಗುಲದ ಆವರಣದಲ್ಲೇ ಸೀತಾ ಕೂಪ ಅಂದರೆ ಸೀತೆಯ ಬಾವಿಯೂ ಇದೆ. ದೇಗುಲದ ನೈಋತ್ಯ ಭಾಗದಲ್ಲಿ ಶಿವನ ಒಂದು ಹಳೆಯ ದೇವಸ್ಥಾನವಿದೆ. ಅದನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ.
ಸಮುಚ್ಚಯದಲ್ಲಿ ಏನೇನಿದೆ?ಒಳಚರಂಡಿ ಸಂಸ್ಕರಣ ಘಟಕ, ನೀರು ಸಂಸ್ಕರಣ ಘಟಕ, ಅಗ್ನಿ ಸುರಕ್ಷತೆಗಾಗಿ ನೀರು ಪೂರೈಕೆ ವ್ಯವಸ್ಥೆ ಮತ್ತು ಪ್ರತ್ಯೇಕ ವಿದ್ಯುತ್ ಕೇಂದ್ರ ಇರಲಿದೆ.
*70 ಎಕರೆ ಸ್ಥಳದ ಶೇ. 70 ಭಾಗದಲ್ಲಿ ಹಸುರು ಉಳಿಸಲು ತೀರ್ಮಾನ
* ಬ್ಯಾಂಕ್,ಎಟಿಎಂ, ತುರ್ತು ವೈದ್ಯಕೀಯ ಸೌಲಭ್ಯಗಳು
*25,000 ಯಾತ್ರಿಗಳ ಸಾಮರ್ಥ್ಯ ಇರುವ ಸೇವಾ ಕೇಂದ್ರ. ಯಾತ್ರಿಗಳಿಗೆ ವೈದ್ಯಕೀಯ, ಲಾಕರ್ ಸೌಲಭ್ಯ
*ಶೌಚಾಲಯ, ಸ್ನಾನದ ಕೊಠಡಿ,ನಲ್ಲಿ ನೀರಿನ ವ್ಯವಸ್ಥೆ ಹೊಂದಿರುವ ಬ್ಲಾಕ್‌ಗಳು.
* ಹಿರಿಯರಿಗಾಗಿ ದೇಗುಲದ ಮೆಟ್ಟಿಲು ಏರಲು, ಇಳಿಯಲು,ಲಿಫ್ಟ್ ವ್ಯವಸ್ಥೆ ಜಟಾಯು, ಅಹಲ್ಯೆ, ಶಬರಿಗೂ ಮಂದಿರ
ಶ್ರೀರಾಮನ ಜೀವನದೊಂದಿಗೆ ಬೆಸೆದುಕೊಂಡಿರುವ ಹೆಸರುಗಳು ನೂರಾರು. ಪ್ರತೀ ಪಾತ್ರವೂ ಇಂದು ಭಾರತೀಯರ ಅತ್ಯಾದರಕ್ಕೆ ಪಾತ್ರವಾಗಿದೆ. ರಾವಣನಿಂದ ಸೀತೆಯನ್ನು ಕಾಪಾಡಲು ಪ್ರಾಣಬಿಟ್ಟ ಜಟಾಯು ಪಕ್ಷಿಯ ದೇವಾಲಯೂ ಆವರಣ ದಲ್ಲಿರಲಿದೆ. ರಾಮಾಯಣ ವನ್ನು ರಚಿಸಿ ಸರ್ವಕಾಲಕ್ಕೂ ಸಲ್ಲುವ ಮಹಾಕವಿಯಾಗಿ ರುವ ವಾಲ್ಮೀಕಿಯೂ ಇನ್ನು ಪೂಜಿಸಲ್ಪಡಲಿದ್ದಾರೆ. ರಘುವಂಶದ ಕುಲಗುರು, ಸಪ್ತರ್ಷಿಗಳಲ್ಲೊಬ್ಬರಾದ ವಸಿಷ್ಠರು, ಬ್ರಹ್ಮರ್ಷಿ, ರಾಮನಿಗೆ ಶಸ್ತ್ರವಿದ್ಯೆಯನ್ನು ಕಲಿಸಿದ ವಿಶ್ವಾಮಿತ್ರ, ಆದಿತ್ಯಹೃದಯವನ್ನು ಉಪದೇಶಿಸಿದ ಅಗಸ್ತ್ಯ, ವನವಾಸದ ಆರಂಭದಲ್ಲಿ ಉಪಚಾರ ಮಾಡಿದ ನಿಷಾದ ರಾಜ, ರಾಮನ ಬರುವಿಗಾಗಿಯೇ ಕಾದುಕುಳಿತ್ತಿದ್ದ ಮಹಾಮಾತೆ ಶಬರಿ, ಶ್ರೀರಾಮನ ಪಾದಸ್ಪರ್ಶದಿಂದ ಹೊಸಜೀವನ ಪಡೆದ ಅಹಲ್ಯೆಗಾಗಿಯೂ ಮಂದಿರದ ಸುತ್ತ ಜಾಗಗಳನ್ನು ಮೀಸ ಲಿಡಲಾಗಿದೆ. ಇವರನ್ನೂ ಭಕ್ತರು ಕಂಡು ಪುನೀತರಾಗಬಹುದು. ಅಯೋಧ್ಯಾಧಾಮ ರೈಲು ನಿಲ್ದಾಣ
ಅಯೋಧ್ಯಾ ಜಂಕ್ಷನ್ ರೈಲು ನಿಲ್ದಾಣವನ್ನು ಸಂಪೂರ್ಣವಾಗಿ ಪುನರ್ ನವೀಕರಿಸಿ, ಅಯೋಧ್ಯಾಧಾಮ ರೈಲು ನಿಲ್ದಾಣ ಎಂದು ಪುನರ್ ನಾಮಕರಣ ಮಾಡಲಾಗಿದೆ. ಹೊಸ ನಿಲ್ದಾಣವನ್ನು 2 ವರ್ಷಗಳ ಅವಧಿ ಯಲ್ಲಿ ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ
240 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಸಲಾಗಿದೆ. ಮೇಲ್ಭಾಗದಲ್ಲಿ ದೇಗುಲ ಮಾದರಿಯಲ್ಲಿ ಗೋಪುರ ನಿರ್ಮಿಸಲಾಗಿದೆ. ಮುಂಭಾಗದಲ್ಲಿ ಶ್ರೀರಾಮನ ಕಿರೀಟದ ಆಕಾರದ ವಿನ್ಯಾಸ ಮಾಡಲಾಗಿದೆ. 53 ಎಕರೆ ಪ್ರದೇಶದಲ್ಲಿ ಹೊಸ ನಿಲ್ದಾಣ ನಿರ್ಮಾಣವಾಗಿದೆ. ಈ ನಿಲ್ದಾಣ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.
ಹಂತದಲ್ಲಿ ಕಾಮಗಾರಿಗಳು ನಡೆಯಲಿವೆ. ಮೊದಲ ಹಂತದಲ್ಲಿ 1,450 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಸಲಾದೆ. 2,200 ಮೀ. ಉದ್ದದ ರನ್ ವೇ ಹೊಂದಿದೆ. ಟರ್ಮಿನಲ್ ಕಟ್ಟಡವು 65 ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.
ಸಾದತ್‌ಗಂಜ್‌ನಿಂದ ನಯಾ ಘಾಟ್‌ವರೆಗಿನ ನವೀಕೃತ ರಸ್ತೆಗೆ ರಾಮ ಪಥ, ಅಯೋಧ್ಯೆಯ ಮುಖ್ಯರಸ್ತೆಯಿಂದ ಹನುಮಾನ್ ಗಡಿ ಮೂಲಕ ಶ್ರೀರಾಮ ಜನ್ಮಭೂಮಿಗೆ ಸಂಪರ್ಕ ಕಲ್ಪಿಸುವ ನವೀಕೃತ ರಸ್ತೆಗೆ ಭಕ್ತಿ ಪಥ ಹಾಗೂ ರಾಷ್ಟ್ರೀಯ ಹೆದ್ದಾರಿ-27ರಿಂದ ನಯಾ ಘಾಟ್‌ನ ಹಳೇ ಸೇತುವೆವ ರೆಗಿನ ರಸ್ತೆಗೆ ಧರ್ಮ ಪಥವೆಂದು ನಾಮ ಕರಣ ಮಾಡಲಾಗಿದ್ದು ಇವೆಲ್ಲವನ್ನೂ ಈಗಾಗಲೇ ಉದ್ಘಾಟಿಸಲಾಗಿದೆ.
ಮುಕ್ತವಾಗಿವೆ.