Advertisement
ಉದ್ದೇಶಿತ ವಿಗ್ರಹ ಒಟ್ಟು ಐದು ಅಡಿ ಇರಲಿದೆ. ಮಂಗಳವಾರ ತಡರಾತ್ರಿಯ ವರೆಗೆ ಅಯೋಧ್ಯೆಯಲ್ಲಿ ನಡೆದಿದ್ದ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪದಾಧಿ ಕಾರಿ ಗಳ ಸಭೆಯಲ್ಲಿ ವಿಗ್ರಹದ ವಿಶೇಷಗಳು ಮತ್ತು ಇತರ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ತೀರ್ಮಾನಿಸಲಾಗಿತ್ತು.
Related Articles
ಸ್ವಾಮೀಜಿಗಳು, ಶಿಲ್ಪಿಗಳು, ಹಿಂದೂ ಸಮುದಾಯದ ಗ್ರಂಥಗಳು ಮತ್ತು ಟ್ರಸ್ಟ್‌ನ ಸದಸ್ಯರ ಜತೆಗೆ ಮಾತುಕತೆ ನಡೆಸಿ ಉದ್ದೇಶಿತ ವಿಗ್ರಹ ಕೃಷ್ಣ ವರ್ಣದಲ್ಲಿಯೇ ಇರಬೇಕು ಎಂದು ತೀರ್ಮಾನಿಸಿ, ಅಂತಿಮ ನಿರ್ಧಾರಕ್ಕೆ ಬರಲಾಯಿತು ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯ ದರ್ಶಿ ಚಂಪತ್ ರಾಯ್ ಸ್ಪಷ್ಟನೆ ನೀಡಿ ದ್ದಾರೆ. ಅಯೋಧ್ಯೆಯಲ್ಲಿ ಶೀಘ್ರವೇ ಮಂದಿರ ನಿರ್ಮಾಣವಾಗಿ ರಾಮ ಲಲ್ಲಾನ ಪ್ರತಿ ಷ್ಠಾಪನೆ ಆಗಬೇಕು ಎನ್ನುವುದು ಕೋಟ್ಯಂತರ ಹಿಂದೂಗಳ ಬಯಕೆ. ಅದು ಶೀಘ್ರವೇ ಈಡೇರಲಿದೆ ಎಂದು ರಾಯ್ ವಿವರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು 2020ರ ಆ. 2ರಂದು ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದರು. 2019ರ ನ. 9ರಂದು ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿ 2.77 ಎಕರೆ ಜಮೀನು ಹಿಂದೂಗಳಿಗೆ ಸೇರಿದ್ದು, ಮಸೀದಿ ನಿರ್ಮಾಣಕ್ಕಾಗಿ ಐದು ಎಕರೆ ಜಮೀನು ನೀಡಬೇಕು ಎಂದು ತೀರ್ಪು ನೀಡಿತ್ತು.
Advertisement
ಕಾರ್ಕಳದ್ದೇ ಶಿಲೆ?ಕಾರ್ಕಳ: ರಾಮ ಲಲ್ಲಾ ಪ್ರತಿಮೆ ಕೆತ್ತೆನೆಗಾಗಿ ಕಾರ್ಕಳದ ನೆಲ್ಲಿಕಾರಿನ ಶಿಲೆಯನ್ನು ಬಳಕೆ ಮಾಡುವ ಸಾಧ್ಯತೆ ಇದೆ. ಈ ಸಂಬಂಧ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ಮೈಸೂರಿನ ಹೆಗ್ಗಡೆ ದೇವನ ಕೋಟೆ ಮತ್ತು ಕಾರ್ಕಳದ ಈದು ಗ್ರಾಮ ಸಹಿತ ವಿವಿಧ ಕಡೆಗಳಿಂದ ಐದು ಶಿಲೆಗಳನ್ನು ಈಗಾಗಲೇ ಅಯೋಧ್ಯೆಗೆ ಕೊಂಡೊಯ್ಯಲಾಗಿದ್ದು, ಹೆಗ್ಗಡ ದೇವನ ಕೋಟೆ ಮತ್ತು ಕಾರ್ಕಳದ ಕೃಷ್ಣ ಶಿಲೆಗಳು ಅಂತಿಮ ಹಂತದ ಪರಿಶೀಲನೆಯಲ್ಲಿ ಆಯ್ಕೆಯಾಗಿತ್ತು. ಕಾರ್ಕಳದ ಕೃಷ್ಣ ಶಿಲೆ ಈದು ಗ್ರಾಮದ ತುಂಗಾ ಪೂಜಾರಿಯವರ ಜಮೀನಿನಿಂದ ಆರಿಸಿದ್ದು. ಇದೇ ಶಿಲೆ ಆಯ್ಕೆಯಾದರೆ ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರನ್ನು ಆರಾಧಿಸುವ ಮನೆತನದ ನೆಲದಲ್ಲಿ ಶಬರಿಯಂತೆ ಮಲಗಿದ್ದ ಶಿಲೆ ಶ್ರೀರಾಮನ ವಿಗ್ರಹವಾಗಲಿದೆ ಎನ್ನುವುದು ವಿಶೇಷ. ನೇಪಾಲದ ಸಾಲಿಗ್ರಾಮ ಶಿಲೆ ಸಹಿತ ಹಲವು ಕಡೆಗಳಿಂದ ಶ್ರೀ ರಾಮ ವಿಗ್ರಹ ನಿರ್ಮಾಣಕ್ಕಾಗಿ ಶಿಲೆಗಳನ್ನು ಅಯೋಧ್ಯೆಗೆ ತರಲಾಗಿತ್ತು.