ಕುಷ್ಟಗಿ:ಅಯೋಧ್ಯೆ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಕುಷ್ಟಗಿ ಪಟ್ಟಣದ ಹಳೆ ಬಜಾರ್ ಶ್ಯಾಮೀದ್ ಕಟ್ಟೆಯಲ್ಲಿ ಮುಸ್ಲಿಂ ಸಮುದಾಯದವರು ಸೇರಿದಂತೆ ಸಾರ್ವಜನಿಕರು ದೀಪಗಳನ್ನು ಹಚ್ಚಿ ದೀಪೋತ್ಸವ ಆಚರಿಸಿ ಸಂಭ್ರಮಿಸಿದರು.
ಹಳೆ ಬಜಾರದಲ್ಲಿ ಹಲವು ವರ್ಷಗಳಿಂದ ಮುಸ್ಲಿಂ ಸಮುದಾಯ ಸೇರಿದಂತೆ ಸ್ಥಳೀಯರು ಪ್ರತಿ ವರ್ಷ ಗಣೇಶೋತ್ಸವ ಆಚರಿಸುತ್ತಾ ಬಂದಿರುವುದು ಭಾವೈಕ್ಯತೆಗೆ ಹಳೆ ಬಜಾರ ಸಾಕ್ಷಿಯಾಗಿದೆ.
ಮುಂದುವರಿದ ಭಾಗವಾಗಿ ಮುಸ್ಲಿಂ ಸಮುದಾಯವರು ಆರಾಧಿಸುವ ಶ್ಯಾಮೀದ ಸಾಬ್ ಕಟ್ಟೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಬಿಂಬಿಸಲು ಮುಸ್ಲಿಂ ಸಮುದಾಯದ ಯುವಕರು ಶ್ಯಾಮೀದಸಾಬ್ ಕಟ್ಟೆಯಲ್ಲಿ ಹಣತೆಯ ದೀಪ ಹಚ್ಚಿ ಸಂಭ್ರಮಿಸಿದರು.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅಮೀನುದ್ದೀನ್ ಮುಲ್ಲಾ, ಅನ್ವರ್ ಅತ್ತಾರ ನೇತೃತ್ವದಲ್ಲಿ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಶ್ಯಾಮೀದದಾಬ್ ಕಟ್ಟೆಯ ಮೇಲೆ ಹಣತೆಗಳಿಗೆ ದೀಪೋತ್ಸವ ಆಚರಿಸಿರುವುದು ಗಮನಾರ್ಹ ಆಗಿದೆ.