Advertisement

Ayodhya ರಾಮಮಂದಿರ; ದಕ್ಷಿಣೋತ್ತರದ ಅನುಸಂಧಾನ: ಮಂತ್ರಾಲಯ ಶ್ರೀ

12:57 AM Jan 18, 2024 | Team Udayavani |

ಶ್ರೀಸುಬುಧೇಂದ್ರ ತೀರ್ಥರು, ಪೀಠಾಧಿಪತಿಗಳು.. ಶ್ರೀರಾಘವೇಂದ್ರ ಸ್ವಾಮಿ ಮಠ, ಮಂತ್ರಾಲಯ

Advertisement

ಪ್ರಭು ಶ್ರೀರಾಮ ಉತ್ತರದಿಂದ ದಕ್ಷಿಣಕ್ಕೆ ಬಂದು ಮರಳಿ ಉತ್ತರಕ್ಕೆ ತೆರಳಿದರು. ಇಂದು ದಕ್ಷಿಣದಿಂದ ಉತ್ತರಕ್ಕೆ ಬಾಲರಾಮನ ವಿಗ್ರಹ ತೆರಳುತ್ತಿದೆ. ಕರ್ನಾಟಕದ ಕಲಾವಿದ ಸುಂದ ರ ವಾಗಿ ಕೆತ್ತನೆ ಮಾಡಿದ ಮೂರ್ತಿಯನ್ನು ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸುತ್ತಿರುವು ದನ್ನು ಕಂಡಾಗ ದಕ್ಷಿಣೋತ್ತರದ ಅನು ಸಂಧಾ ನದಂತೆ ಕಂಡುಬರುತ್ತದೆ. ಸಮಸ್ತ ಹಿಂದೂಗಳ ಮಹದಾಸೆಯಂತೆ ಅಯೋಧ್ಯೆ ಯಲ್ಲಿ ಭವ್ಯಮಂದಿರ ನಿರ್ಮಾಣ ಪೂರ್ಣ ಗೊಂಡಿದ್ದು, ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿದೆ.

ಅಯೋಧ್ಯೆ ಸರಯು ನದಿ ತೀರದಲ್ಲಿ ಶ್ರೀರಾಮನ ಮಂದಿರ ನಿರ್ಮಿಸಬೇಕು, ಅಲ್ಲಿ ಶ್ರೀರಾಮನ ಪೂಜೆ ಆಗಬೇಕು ಎನ್ನುವುದು ಶತಶತಮಾನಗಳ ಬೇಡಿಕೆಯಾಗಿತ್ತು. ಅದು ಈಗ ನೆರವೇರುತ್ತಿದೆ. ಶ್ರೀರಾಮ ಯಾವುದೇ ಜನಾಂಗಕ್ಕೆ ಸೀಮಿತ ನಾ ದವನಲ್ಲ. ಆದರ್ಶ ಪ್ರಭು, ಆದರ್ಶ ಪುತ್ರ, ಆದರ್ಶ ಪ್ರಜೆ, ಆದರ್ಶ ಪಿತ, ಆದರ್ಶ ಪತಿಯಾಗಿರುವ ಕಾರಣಕ್ಕೆ ಇಡೀ ಮನುಕುಲಕ್ಕೆ ಆದರ್ಶವಾಗಿದ್ದಾನೆ. ಹೀಗಾಗಿ ಸಮಸ್ತ ಭಾರತೀಯರಿಗೆ ಶ್ರೀರಾಮ ಅನುಕರಣನೀಯ. ಪ್ರಭು ಶ್ರೀರಾಮ ಎಲ್ಲ ರೀತಿಯಿಂದಲೂ ಆದರ್ಶವಾಗಿದ್ದಾನೆ. ಶಾಸ್ತ್ರದಲ್ಲಿ ಹೇಳಿದಂತೆ ನೀನು ಹೇಗಿರಬೇಕು ಎಂದು ಉದಾ ಹರಿಸುವಾಗ ಶ್ರೀರಾಮನ ಹೆಸರನ್ನು ಉಲ್ಲೇಖಿಸಲಾಗುತ್ತದೆ.

ರಾಯಚೂರು ಕೂಡ ರಾಮನ ನಾಡಾಗಿದೆ. ಅವಿಭಾಜ್ಯ ರಾಯಚೂರು ಜಿಲ್ಲೆಯಲ್ಲಿದ್ದ ಆನೆಗೊಂದಿ, ಕಿಷ್ಕಿಂಧಾ ಸೇರಿ ಅನೇಕ ತಾಣಗಳು ಪ್ರಭು ಶ್ರೀರಾಮನ ಪಾದ ಧೂಳು ಸ್ಪರ್ಶಿಸಿ ಪಾವನವಾಗಿದೆ. ಅಯೋಧ್ಯೆಗೂ ಈ ನಾಡಿಗೂ ಇರುವ ಸಂಬಂಧವನ್ನು ಈ ಶುಭ ಸಂದರ್ಭದಲ್ಲಿ ಎಲ್ಲರೂ ಸ್ಮರಿಸಬೇಕು.

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರಾಧನೆಗೊಳ್ಳುವ ಶ್ರೀಮೂಲ ರಾಮದೇವರು ಅಯೋಧ್ಯೆ ಯಿಂದ ಬಂದಿದ್ದು ಎನ್ನುವುದು ವಿಶೇಷ. ರಾಮನ ಪೂರ್ವಜರು ಸ್ವತಃ ರಾಮದೇವರು ಪೂಜೆ ಮಾಡಿದ ವಿಗ್ರಹವಾದ್ದರಿಂದ ಮಠಕ್ಕೂ ಅಯೋಧ್ಯೆಗೂ ಅವಿನಾಭಾವ ಸಂಬಂಧ ವಿದೆ. ಶ್ರೀಮಠದ ಹಿಂದಿನ ಅನೇಕ ಯತಿಗಳು ಅಯೋಧ್ಯೆಗೆ ತೆರಳಿ ಪೂಜೆ ಸಲ್ಲಿಸಿ ಬಂದ ಉದಾಹರಣೆಗಳಿವೆ. ನಾವು ಕೂಡ ಈಚೆಗೆ ಅಯೋಧ್ಯೆಗೆ ತೆರಳಿ ಅಲ್ಲಿನ ಸಿದ್ಧತೆಗಳನ್ನು ವೀಕ್ಷಿಸಿದ್ದೆವು. ಅಯೋಧ್ಯೆಯಲ್ಲಿ ಶ್ರೀ ರಾಘ ವೇಂದ್ರ ಸ್ವಾಮಿಗಳ ಶಾಖಾಮಠ ಶೀಘ್ರದಲ್ಲೇ ಸ್ಥಾಪಿಸಲಾಗುವುದು. ಅಲ್ಲಿ ರಾಯರ ಭಕ್ತರಿಗೆ ವಸತಿ, ಪ್ರಸಾದ ವ್ಯವಸ್ಥೆ ಸೇರಿ ಎಲ್ಲ ರೀತಿಯ ಅನುಕೂಲಗಳನ್ನು ಕಲ್ಪಿಸಲು ಒತ್ತು ನೀಡಲಾಗುವುದು.

Advertisement

ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹೋಗಲು ಆಗದವರು ತಾವು ಇರುವಲ್ಲಿಂದಲೇ ಪೂಜೆ-ಪ್ರಾರ್ಥನೆ ಸಲ್ಲಿಸಬೇಕು. ತಮ್ಮ ಊರಿನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಅಧ್ಯಾತ್ಮಿಕ ಶಕ್ತಿಯನ್ನು ರವಾನಿಸುವ ಮೂಲಕ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣೀಭೂತರಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next