Advertisement

ಅಯೋಧ್ಯೆ ವಿವಾದ: 2019ರ ಜನವರಿಗೆ ವಿಚಾರಣೆ ಮುಂದೂಡಿದ ಸುಪ್ರೀಂ

12:30 PM Oct 29, 2018 | Team Udayavani |

ಹೊಸದಿಲ್ಲಿ : ಅಯೋಧ್ಯೆಯ ರಾಮ ಜನ್ಮ ಭೂಮಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಇಂದು ಸೋಮವಾರ 2019ರ ಜನವರಿ ವರೆಗೆ ಮುಂದೂಡಿದೆ.

Advertisement

ಜಸ್ಟಿಸ್‌ ರಂಜನ್‌ ಗೊಗೋಯ್‌ ನೇತೃತ್ವದ ಸುಪ್ರೀಂ ಪೀಠ “ವಿವಾದಿತ ಅಯೋಧ್ಯೆ ಭೂ ಮಾಲಕತ್ವವನ್ನು ಇತ್ಯರ್ಥಪಡಿಸುವ ವಿಚಾರಣೆಯನ್ನು ಹೊಸ ಪೀಠ ಅಥವಾ ಈಗಿನ ಪೀಠ ಆರಂಭಿಸಲಿದೆ’ ಎಂದು ಹೇಳಿತು.

ಅಯೋಧ್ಯೆ ರಾಮ ಜನ್ಮಭೂಮಿ ವಿಷಯಕ್ಕೆ ಸಂಬಂಧಿಸಿದ ಇಂದಿನ ಸುಪ್ರೀಂ ಕೋರ್ಟ್‌ ಕಲಾಪ ಕೇವಲ ಎರಡೇ ನಿಮಿಷಗಳಲ್ಲಿ ಮುಗಿದು ಹೋದದ್ದು ವಿಶೇಷ. 2019ರ ಜನವರಿಯಲ್ಲಿ ಅಯೋಧ್ಯೆ ಭೂ ವಿವಾದದ ವಿಚಾರಣೆಯನ್ನು ದಿನವಹಿ ನೆಲೆಯಲ್ಲಿ ನಡೆಸಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಸುಪ್ರೀಂ ಪೀಠ ನಿರಾಕರಿಸಿತು.

“ನಾವು ದೇವರಲ್ಲಿ ನಂಬಿಕೆ ಹೊಂದಿದ್ದೇವೆ; ನಾವು ಪ್ರಧಾನಿ ಮೋದಿ ಅವರನ್ನು ನಂಬುತ್ತೇವೆ. ರಾಮ ಮಂದಿರ ನಿರ್ಮಾಣ ಕಾರ್ಯ ಬೇಗನೆ ಆರಂಭವಾಗಬೇಕೆಂದು ನಾವು ಬಯಸುತ್ತೇವೆ; ನಾವು ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರನ್ನು ಕರೆಯುವುದಿಲ್ಲ; ದೇವರೇ ನಮ್ಮ ಸಮಸ್ಯೆಯನ್ನು ಬಗೆಹರಿಸುತ್ತಾನೆ ಎಂಬ ನಂಬಿಕೆ ನಮ್ಮಲ್ಲಿದೆ’ ಎಂಧು ರಾಮ ಜನ್ಮಭೂಮಿ ನ್ಯಾಸ್‌ ಅಧ್ಯಕ್ಷ ಮಹಾಂತ್‌ ನೃತ್ಯ ಗೋಪಾಲ್‌ ದಾಸ್‌ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next