Advertisement

ಅಯೋಧ್ಯೆ: ಯಾವುದೇ ಹೇಳಿಕೆ ನೀಡದಂತೆ ಸಚಿವರಿಗೆ ಆದೇಶ

10:02 AM Nov 04, 2019 | Team Udayavani |

ಲಕ್ನೋ: ಅಯೋಧ್ಯೆ ಭೂವಿವಾದದ ತೀರ್ಪಿಗೆ ದಿನಗಣನೆ ಆರಂಭವಾಗಿರುವಂತೆಯೇ, ಪ್ರಕರಣದ ಕುರಿತು ಯಾವುದೇ ಹೇಳಿಕೆ ನೀಡದಂತೆ ತಮ್ಮ ಸಚಿವರಿಗೆ ಉತ್ತರಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್‌ ಸೂಚಿಸಿದ್ದಾರೆ.

Advertisement

ತೀರ್ಪು ಯಾರ ಪರವೇ ಬಂದರೂ, ಯಾವುದೇ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು, ಅಲ್ಲದೆ ಇದು ಬಹಳ ಸೂಕ್ಷ್ಮ ವಿಚಾರವಾದ ಕಾರಣ ಸಂಭ್ರಮಾ ಚರಣೆಯನ್ನೂ ಮಾಡಬಾರದು ಎಂದು ತಮ್ಮ ಸಂಪುಟದ ಸಚಿವರಿಗೆ ಸಿಎಂಯೋಗಿ ಖಡಕ್‌ ಸೂಚನೆ ರವಾನಿಸಿದ್ದಾರೆ.

ವರದಿ ತಿರಸ್ಕರಿಸಿದ್ದ ರಾವ್‌: ಈ ನಡುವೆ, ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್‌ ಅವರಿಗೆ ರಾಜಕೀಯ ಇಚ್ಛಾಶಕ್ತಿ ಇದ್ದಿದ್ದರೆ, ಬಾಬರಿ ಮಸೀದಿಯನ್ನು ಉಳಿಸ ಬಹುದಿತ್ತು ಎಂದು ಆಗ ಕೇಂದ್ರದ ಗೃಹ ಕಾರ್ಯದರ್ಶಿಯಾಗಿದ್ದ ಮಾಧವ್‌ ಗೋಡೊºಳೆ ಹೇಳಿಕೊಂಡಿದ್ದಾರೆ. ಬಾಬರಿ ಮಸೀದಿ ಧ್ವಂಸಕ್ಕೂ ಮುನ್ನ ಗೃಹ ಸಚಿವಾಲಯವು ಒಂದು ಸಮಗ್ರವಾದ ತುರ್ತು ಯೋಜನೆ ರೂಪಿಸಿ, ಅದರ ವರದಿಯನ್ನು ಪ್ರಧಾನಿ ಪಿವಿಎನ್‌ಗೆ ಸಲ್ಲಿಸಿತ್ತು.

ಆದರೆ, ಅದನ್ನು ಅವರು ತಿರಸ್ಕರಿ ಸಿದರು. ಇಲ್ಲದಿದ್ದರೆ ಈ ರಾಮಾಯಣದಲ್ಲಿನ ಮಹಾಭಾರತವನ್ನು ತಡೆಯ ಬಹುದಿತ್ತು ಎಂದು ಗೋಡೊºಳೆ ಅವರು ಬರೆದಿರುವ ಹೊಸ ಕೃತಿಯಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next