Advertisement

Ayodhya: ಚಿನ್ನ ಲೇಪಿತ ಸಿಂಹಾಸನದ ಮೇಲೆ ಶ್ರೀರಾಮ

12:57 AM Nov 02, 2023 | Pranav MS |

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ ಪ್ರಾಣಪ್ರತಿಷ್ಠೆ ದಿನಾಂಕ ಜ.22ರಂದು ನಿಗದಿಯಾಗಿದೆ. ಅದರ ಬೆನ್ನಲ್ಲಿಯೇ ದೇಗುಲದ ಗರ್ಭಗುಡಿಯಲ್ಲಿ ಶ್ರೀರಾಮನ ವಿಗ್ರಹ ವಿರಾಜಮಾನ ವಾಗುವ ಸಿಂಹಾಸನದ ಕುರಿತು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ವಿವರ ನೀಡಿದೆ.

Advertisement

8 ಅಡಿ ಎತ್ತರದ ಸಿಂಹಾಸನ
ಗರ್ಭಗುಡಿಯಲ್ಲಿ 8 ಅಡಿ ಎತ್ತರದ ಚಿನ್ನ ಲೇಪಿತ ಅಮೃತಶಿಲೆಯ ಸಿಂಹಾಸನ ನಿರ್ಮಾಣಗೊಳ್ಳಲಿದೆ. ಅಮೃತಶಿಲೆಯ ಸಿಂಹಾಸನವನ್ನು ರಾಜಸ್ಥಾನದ ಕಲಾವಿದರು ಸಿದ್ಧಪಡಿಸುತ್ತಿದ್ದು, ಡಿ.15ರ ವೇಳೆಗೆ ಇದು ಅಯೋಧ್ಯೆ ತಲುಪಲಿದೆ.

ಕಾಮಗಾರಿ ಪ್ರಗತಿಯಲ್ಲಿ
ಮೊದಲ ಮಹಡಿಯ ಕಾಮಗಾರಿ ಪ್ರಗತಿಯಲ್ಲಿದ್ದು; ಸದ್ಯ 17 ಕಂಬಗಳ ಅಳವಡಿಕೆಡಿ.15- ನೆಲ ಮಹಡಿಯ ಕೆಲಸ ಪೂರ್ಣವಾಗುವ ನಿರೀಕ್ಷೆ; ಚಾವಣಿ ಕಾಮಗಾರಿಯೂ ಪೂರ್ಣ ನಿರೀಕ್ಷೆ.

ಪರಿಕ್ರಮ ಮಾರ್ಗ ಸಿದ್ಧ
ದೇಗುಲದ ಪರಿಕ್ರಮ ಮಾರ್ಗದ ನೆಲಹಾಸಿನ ಕಾಮಗಾರಿ ಪೂರ್ಣಗೊಂಡಿದೆ. ಗೃಹ ಮಂಟಪದ ನೆಲಕ್ಕೆ ಅಮೃತಶಿಲೆ ಹಾಸುವ ಕಾರ್ಯ ಪ್ರಗತಿಯಲ್ಲಿದೆ. ಮಂದಿರದ ಮುಖ್ಯ ದ್ವಾರದ ಹೊರ ಗೋಡೆಯ ಕಾಮಗಾರಿ ಅಂತಿಮ ಹಂತದಲ್ಲಿದೆ. ಮಾಸಾಂತ್ಯಕ್ಕೆ ಪೂರ್ಣಗೊಳ್ಳಲಿದೆ.

ರಾಶಿ ರಾಶಿ ಬಂಗಾರ
ಭಕ್ತರು ದೇಗುಲಕ್ಕೆ ದೊಡ್ಡ ಪ್ರಮಾಣದ ಚಿನ್ನ ಮತ್ತು ಬೆಳ್ಳಿಯನ್ನು ದಾನವಾಗಿ ನೀಡಿದ್ದಾರೆ. ಅದನ್ನು ಶೇಖರಿಸುವುದೇ ಸವಾಲಾಗಿದೆ. ಪ್ರತಿಷ್ಠಿತ ಕಂಪನಿಯಿಂದ ಅದನ್ನು ಕರಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಟ್ರಸ್ಟ್‌ ಪದಾಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next