Advertisement

ಅಯೋಧ್ಯೆ ಭೂ ವಿವಾದ ಕೇಸು: ಸುಪ್ರೀಂನಿಂದ ಫೆ.26ರಂದು ವಿಚಾರಣೆ

12:00 PM Feb 20, 2019 | udayavani editorial |

ಹೊಸದಿಲ್ಲಿ : ರಾಜಕೀಯ ಸೂಕ್ಷ್ಮತೆ ಹೊಂದಿರುವ ಅಯೋಧ್ಯೆ ಭೂ ವಿವಾದದ ಕೇಸನ್ನು ಸುಪ್ರೀಂ ಕೋರ್ಟ್‌ ಫೆ.26ರಂದು ವಿಚಾರಣೆಗೆ ಎತ್ತಿಕೊಳ್ಳಲಿದೆ. 

Advertisement

ಕಳೆದ ಜನವರಿ 27ರಂದು ಸುಪ್ರೀಂ ಕೋರ್ಟ್‌, ಜನವರಿ 29ಕ್ಕೆ ನಿಗದಿಯಾಗಿದ್ದ ವಿಚಾರಣೆಯನ್ನು ರದ್ದು ಪಡಿಸಿತ್ತು. ಆ ದಿನ ಜಸ್ಟಿಸ್‌ ಎಸ್‌ ಎ ಬೋಬಡೆ ಅಲಭ್ಯರಿದ್ದುದೇ ಅದಕ್ಕೆ ಕಾರಣವಾಗಿತ್ತು. 

ಸಿಜೆಐ ಜಸ್ಟಿಸ್‌ ರಂಜನ್‌ ಗೊಗೋಯ್‌ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಅಯೋಧ್ಯೆ ಭೂವಿವಾದ ಕೇಸಿನ ವಿಚಾರಣೆ ನಡೆಸಲಿದೆ. ಪೀಠದಲ್ಲಿರುವ ಇತರ ನಾಲ್ವರು ನ್ಯಾಯಮೂರ್ತಿಗಳೆಂದರೆ ಡಿ ವೈ ಚಂದ್ರಚೂಡ್‌, ಅಶೋಕ್‌ ಭೂಷಣ್‌, ಎಸ್‌ ಎ ನಜೀರ್‌ ಮತ್ತು ಎಸ್‌ ಎ ಬೋಬಡೆ. 

Advertisement

Udayavani is now on Telegram. Click here to join our channel and stay updated with the latest news.

Next