Advertisement

ಅಯೋಧ್ಯೆ ವಿಚಾರಣೆ ಸುಪ್ರೀಂ ಮೇಲೆ ಕಣ್ಣು

10:08 AM Aug 03, 2019 | mahesh |

ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಲು ಪ್ರಯತ್ನಿಸಿರುವ ಸಂಧಾನ ಸಮಿತಿಯು ಗುರುವಾರ ಸ್ಥಿತಿಗತಿ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.

Advertisement

ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾದ ವರದಿಯನ್ನು ಸ್ವೀಕರಿಸಿರುವ ಸುಪ್ರೀಂ ಕೋರ್ಟ್‌, ಸಂಧಾನದ ಪ್ರತಿಫ‌ಲವೇನು ಎಂಬುದನ್ನು ಪರಿಶೀಲಿಸಿ, ಮುಂದಿನ ನಿರ್ಧಾರವನ್ನು ಕೈಗೊಳ್ಳಲಿದೆ. ಪ್ರಕರಣ ಸಂಬಂಧ ಸಂಧಾನವನ್ನೇ ಮುಂದುವರಿಸುವುದೋ ಅಥವಾ ವಿಚಾರಣೆ ಆರಂಭಿಸುವುದೋ ಎಂಬು ದರ ಕುರಿತ ನಿರ್ಧಾರವನ್ನು ಶುಕ್ರವಾರವೇ ಸುಪ್ರೀಂ ಕೋರ್ಟ್‌ ಪ್ರಕಟಿಸುವ ಸಾಧ್ಯತೆಯಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಸಂವಿಧಾನ ಪೀಠವು ಜುಲೈ 18ರಂದೇ ಈ ಕುರಿತು ಆದೇಶ ನೀಡಿ, ಸಂಧಾನ ಪ್ರಕ್ರಿಯೆಯ ಫ‌ಲಿತಾಂಶವೇನು ಎಂಬುದನ್ನು ಆಗಸ್ಟ್‌ 1ರೊಳಗಾಗಿ ಸಲ್ಲಿಸುವಂತೆ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ.ಖಲೀಫ‌ುಲ್ಲಾ ನೇತೃತ್ವದ ಸಮಿತಿಗೆ ಸೂಚಿಸಿತ್ತು. ಅದರಂತೆ, ಸಂಧಾನ ಸಮಿತಿಯು ಈವರೆಗೆ ನಡೆಸಿದ ಸಂಧಾನ ಪ್ರಕ್ರಿಯೆಯ ಸಂಪೂರ್ಣ ಪ್ರಗತಿ ವರದಿಯನ್ನು ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಿತು.

ಒಂದು ವೇಳೆ, ಸಂಧಾನ ಪ್ರಕ್ರಿಯೆ ಮೂಲಕ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದೆನಿಸಿದರೆ, ದಿನಂಪ್ರತಿ ವಿಚಾರಣೆ ನಡೆಸುವ ಮೂಲಕ ನ್ಯಾಯಾಲಯದಲ್ಲೇ ಪ್ರಕರಣ ಇತ್ಯರ್ಥಪಡಿಸುವುದಾಗಿ ಈ ಹಿಂದೆಯೇ ಸುಪ್ರೀಂ ಕೋರ್ಟ್‌ ಹೇಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next