Advertisement
ಅಯೋಧ್ಯೆಯ ಉದ್ದೇಶಿತ ರಾಮ ಮಂದಿರಕ್ಕೆ ಭೂಮಿ ಖರೀದಿಯಲ್ಲಿನ ಭ್ರಷ್ಟಾಚಾರದ ಬಗ್ಗೆ ಸಿಬಿಐ ತನಿಖೆಯನ್ನು ಬೆಂಬಲಿಸಿದ ರಾಜ್ ಭರ್, ಬಿಜೆಪಿ ಹಾಗೂ ಆರ್ ಎಸ್ ಎಸ್ ರಾಮ ಮಂದಿರವನ್ನು ವ್ಯಾಪಾರ ಮಾಧ್ಯಮವನ್ನಾಗಿ ಮಾಡಿಕೊಂಡಿವೆ ಎಂದು ಹೇಳಿದ್ದಾರೆ.
Related Articles
Advertisement
ಕೋಟ್ಯಾಂತರ ರಾಮ ಭಕ್ತರ ನಂಬಿಕೆಯ ಹೆಸರಿನಲ್ಲಿ ಹಗರಣ ನಡೆಸಲಾಗುತ್ತಿದೆ. ಬಿಜೆಪಿ ಮುಖಂಡರು ಈ ಬಗ್ಗೆ ಮಾತನಾಡುತ್ತಿಲ್ಲ. ಜನರನ್ನು ನಂಬಿಸಿ ದೇವರ ಹೆಸರಿನಲ್ಲಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ.
ಶ್ರೀರಾಮ್ ಜನಮಭೂಮಿ ತೀರ್ಥ್ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಅಯೋಧ್ಯೆಯ ಬ್ಯಾಗ್ ಬೈಸೈ ಗ್ರಾಮದಲ್ಲಿ 2 ಕೋಟಿ ರೂ.ಗಳ ಮೌಲ್ಯದ 1.208 ಹೆಕ್ಟೇರ್ ಭೂಮಿಯನ್ನು ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಅವರ ಸಹಾಯದಿಂದ 18.5 ಕೋಟಿ ರೂ. ಗೆ ಖರಿದಿಸಿದ್ದಾರೆಂದು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಆರೋಪ ಮಾಡಿದ ಒಂದು ದಿನದ ನಂತರ ರಾಜ್‌ಭರ್ ಈ ಹೇಳಿಕೆ ನೀಡಿದ್ದಾರೆ.
ಇನ್ನು, ಇದನ್ನು ಮನಿ ಲಾಂಡರಿಂಗ್ ಪ್ರಕರಣ ಎಂದು ಆರೋಪಿಸಿ, ಸಮಾಜವಾದಿ ಪಕ್ಷದ ನಾಯಕ ಪವನ್ ಪಾಂಡೆ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡ ಸಂಜಯ್ ಸಿಂಗ್ ಅವರು ಈ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಯಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು. ಆದರೇ, ಶ್ರೀರಾಮ್ ಜನಮಭೂಮಿ ತೀರ್ಥ್ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಆರೋಪಗಳನ್ನು ನಿರಾಕರಿಸಿದ್ದರು.
ಇದನ್ನೂ ಓದಿ : ಗುಜರಾತ್ ನ ಬರುವ ವಿಧಾನ ಸಭಾ ಚುನಾವಣೆಗೆ ಎಲ್ಲಾ ಕ್ಷೇತ್ರಗಳಿಂದ ಎಎಪಿ ಸ್ಪರ್ಧೆ : ಕೇಜ್ರಿವಾಲ್