ದಕ್ಷಿಣ ಕೊರಿಯಾಕ್ಕೂ, ಭಾರತದ ಅಯೋಧ್ಯೆಗೂ ಅಪರೂಪದ ನಂಟೊಂದು ಬೆಸೆದಿದೆ. ದಕ್ಷಿಣ ಕೊರಿಯನ್ನರಿಗೆ ಅಯೋಧ್ಯೆ ಮಾತೃಭೂಮಿ! ಇದೇ ಕಾರಣದಿಂದ ಪ್ರತೀ ವರ್ಷ ಸಾವಿರಾರು ದಕ್ಷಿಣ ಕೊರಿಯನ್ನರು ಅಯೋಧ್ಯೆಗೆ ಭೇಟಿ ನೀಡುತ್ತಾರೆ. ಅಲ್ಲಿನ ಜನರಿಗೆ ಅಯೋಧ್ಯೆಯು ಅವರ ರಾಣಿಯ ತವರೂರು ಎಂಬ ನಂಬಿಕೆ. ಸುಮಾರು 2 ಸಾವಿರ ವರ್ಷಗಳಿಂದ ಅಲ್ಲಿನ ಜನರು ಇದನ್ನು ಪಾಲಿಸುತ್ತಾ ಬರುತ್ತಿದ್ದಾರೆ.
ಇತಿಹಾಸದ ಪ್ರಕಾರ ಅಯೋಧ್ಯೆಯ ರಾಜ ಕುಮಾರಿಯು ದಕ್ಷಿಣ ಕೊರಿಯಾದ ರಾಜಕುಮಾರನನ್ನು ಮದುವೆ ಯಾಗಿದ್ದಳಂತೆ. ಕ್ರಿ.ಶ. 48ರಲ್ಲಿ ಆಯುತಾ ಎನ್ನುವ ರಾಜವಂಶಕ್ಕೆ ಸೇರಿದ ಸುರಿರತ್ನ ಎನ್ನುವ ರಾಜ ಕುಮಾರಿಯು ದಕ್ಷಿಣ ಕೊರಿಯಾದ ಕಾರಕ್ ಎನ್ನುವ ರಾಜವಂಶಕ್ಕೆ ಮದುವೆಯಾಗಿ ಹೋಗಿದ್ದಳು, ಅನಂತರ ಅವಳು ಅಲ್ಲಿನ ರಾಣಿಯಾಗಿದ್ದಳು ಎಂದು ಹೇಳಲಾಗುತ್ತದೆ. ಆಯುತ ಎಂದರೆ ಕೊರಿಯನ್ ಭಾಷೆಯಲ್ಲಿ ಅಯೋಧ್ಯೆ ಎಂದು ಕರೆಯಲಾಗುತ್ತದೆ. ಹಾಗಾಗಿ ಅಲ್ಲಿನ ಜನರು ಅಯೋಧ್ಯೆಯನ್ನು ತಮ್ಮ ರಾಣಿಯ ತವರೂರು ಮತ್ತು ಆಕೆ ಪ್ರಭು ಶ್ರೀರಾಮ ವಂಶಸ್ಥೆ ಎಂದು ನಂಬಿದ್ದಾರೆ.
ಆಯುತಾ ರಾಜವಂಶಕ್ಕೆ ಸೇರಿದ ಸುರಿರತ್ನ, ರಾಜ ಸೂರ್ಯವರ್ಮನ್ ಮತ್ತು ರಾಣಿ ಮಯೂರ್ಚತನ ಮಗಳು. ಒಮ್ಮೆ ಸುರಿರತ್ನ, ಕನಸಿನಲ್ಲಿ ದೂರ ದೇಶದಿಂದ ಬೆಳಕು ಬಂದಿ ದ್ದನ್ನು ಕಂಡಳಂತೆ. ಬಿದ್ದ ಕನಸನ್ನು ಸಂಕೇತವಾಗಿರಿಸಿಕೊಂಡು ಇದರ ಮೂಲವನ್ನು ಹುಡು ಕುವ ಕಾರ್ಯವನ್ನು ಕೈಗೆತ್ತಿಗೊಳ್ಳುತ್ತಾಳೆ. ತನ್ನ 16ನೇ ವಯಸ್ಸಿನಲ್ಲಿ ಸುರಿರತ್ನ ಸಂಗಡಿ ಗರೊಂದಿಗೆ ಹಡಗಿನ ಮೂಲಕ ಸಮುದ್ರಯಾನವನ್ನು ಮಾಡುತ್ತಾಳೆ. ಸಾಗರದಾದ್ಯಂತ ಪ್ರಯಾಣಿಸುತ್ತಾಳೆ. ಸುಮಾರು ದೂರ ಪ್ರಯಾಣಿಸಿದ ಬಳಿಕ ಅವಳು ದಕ್ಷಿಣ ಕೊರಿಯಾದ ಕರಾವಳಿಗೆ ತಲುಪುತ್ತಾಳಂತೆ. ಇವಳ ಸೌಂದರ್ಯದಿಂದ ಮಾರುಹೋದ ಅಲ್ಲಿನ ರಾಜ ಇವಳನ್ನು ಮದುವೆಯಾಗುವಂತೆ ಕೋರಿದಾಗ, ಅದಕ್ಕೆ ಇವಳು ಸಮ್ಮತಿ ಸೂಚಿಸಿ ರಾಜ ಕಿಮ್ ಸುರೊನನ್ನು ವರಿಸುತ್ತಾಳೆ.
ಅನಂತರ ಅವಳು ಅಲ್ಲಿನ ರಾಣಿ ಹಿಯೋ ಹ್ವಾಂಗ್ ಓಕ್ ಆಗುತ್ತಾಳೆ. ಸುರಿರತ್ನ ಗ್ಯುಮ್‌ಗ್ವಾನ ಗಯಾದ ಮೊದಲ ರಾಣಿಯಾಗಿದ್ದಳು. ಚೀನದ ಕೆಲ ವೊಂದು ಪಠ್ಯಗಳ ಪ್ರಕಾರ ದೇವರು ಅಯೋಧ್ಯೆಯ ರಾಜನಿಗೆ ಅವನ 16 ವರ್ಷದ ಮಗ ಳನ್ನು ದಕ್ಷಿಣ ಕೊರಿಯಾಕ್ಕೆ ಕಳುಹಿಸುವಂತೆ ಹಾಗೂ ಅಲ್ಲಿನ ರಾಜನೊಂದಿಗೆ ವಿವಾಹ ಮಾಡಿ ಕೊಡುವಂತೆ ಆಜ್ಞೆ ಮಾಡಿದ್ದನು ಎಂದು ಹೇಳಲಾಗುತ್ತದೆ. ಅಲ್ಲದೇ ಇವರಿ ಬ್ಬರಿಗೂ 10 ಮಕ್ಕಳಿದ್ದರು ಹಾಗೂ 150 ವರ್ಷಗಳ ಇವರು ಬದುಕಿದ್ದರು ಎಂದು ಪಠ್ಯಗಳಲ್ಲಿ ಉಲ್ಲೇ ಖೀಸಲಾಗಿದೆ. ಕಿಮ್ ಸುರೊ ಅವರ ಸಮಾಧಿಯ ಬಳಿ ಅಯೋಧ್ಯೆಗೆ ಸಂಬಂಧಿಸಿದ ಕಲಾ ಕೃತಿಗಳು ದೊರೆತಿವೆ, ಇದು ರಾಣಿ ಅಯೋಧ್ಯೆಗೆ ಸೇರಿದವಳೆಂಬುದಕ್ಕೆ ಸಾಕ್ಷಿ ಎಂದು ಹೇಳಲಾಗುತ್ತದೆ. ಉತ್ತರ ಪ್ರದೇಶದ ಪ್ರವಾಸೋದ್ಯಮದ ಮಾಹಿತಿಯ ಪ್ರಕಾರ ಪ್ರತೀ ವರ್ಷ 60 ಲಕ್ಷ ಕರಕ್ ವಂಶಕ್ಕೆ ಸೇರಿದ ಜನರು ಅಯೋಧ್ಯೆಯನ್ನು ನಮ್ಮ ಪೂರ್ವಜರ ನೆಲೆಯೆಂದು ನಂಬಿ ಭೇಟಿ ನೀಡುತ್ತಾರೆ.
ಅಯೋಧ್ಯೆ ಹಾಗೂ ದಕ್ಷಿಣ ಕೊರಿಯಾದ ನಡುವಿನ ಈ ವಿಶೇಷ ಸಂಬಂಧದ ನೆನಪಿಗಾಗಿ ಅಯೋಧ್ಯೆಯಲ್ಲಿ 2001ರಲ್ಲಿ ರಾಣಿಯ ಸ್ಮಾರಕವನ್ನು ಉದ್ಘಾಟಿಸಲಾಯಿತು. 2015ರಲ್ಲಿ ಇದರ ನವೀಕರಣ ಯೋಜನೆಯನ್ನು ರೂಪಿಸಿ, 2022ರಲ್ಲಿ ರಾಣಿಯ ಸುಂದರ ಉದ್ಯಾ ನವನವನ್ನು ಸರಯೂ ನದಿಯ ದಡದಲ್ಲಿ ನಿರ್ಮಿಸಲಾಯಿತು. ಈ ಪಾರ್ಕ್‌ನಲ್ಲಿ ರಾಣಿ ಓಕ್ ಹಾಗೂ ರಾಜ ಕಿಮ್‌ನ ಪ್ರತಿಮೆಯನ್ನು ಇರಿಸಲಾಗಿದೆ. 2019ರಲ್ಲಿ ಭಾರತ ಸರಕಾರ ರಾಣಿಯ ಗೌರವಾರ್ಥ 25 ರೂ. ಹಾಗೂ 5 ರೂ.ಗಳ ಅಂಚೆಚೀಟಿಯನ್ನು ಬಿಡುಗಡೆ ಮಾಡಿದೆ.
ವರ್ಷದೊಳಗೆ ರಾಮ ಬರದಿದ್ದರೆ ಪ್ರಾಣ ಬಿಡುತ್ತೇನೆಂದಿದ್ದಳು ಸೀತೆ
ಸೀತೆಯನ್ನು ಅಪಹರಿಸಿ ರಾವಣ ಅಶೋಕ ವನದಲ್ಲಿಡುತ್ತಾನೆ. ಸೀತೆ ಮಾತ್ರ ಇನ್ನೊಂದು ವರ್ಷದೊಳಗಾಗಿ ಶ್ರೀರಾಮ ಬಂದು ನನ್ನನ್ನು ಒಯ್ಯದಿದ್ದರೆ, ಉಪವಾಸ ಮಾಡಿಯೇ ಪ್ರಾಣ ಬಿಡುತ್ತೇನೆ ಎಂದು ಶಪಥ ಮಾಡಿರುತ್ತಾಳೆ. ಆಕೆ ಅದನ್ನು ಕಡ್ಡಾಯವಾಗಿ ಪಾಲಿಸುತ್ತಾಳೆ ಕೂಡ. ವಿಭೀಷಣನ ಪತ್ನಿ ಸರಮೆ ಒತ್ತಾಯ ಮಾಡಿ ತಿನ್ನಿಸುತ್ತಿದ್ದುದ್ದನ್ನು ಬಿಟ್ಟರೆ ಸೀತೆ ತಾನಾಗಿ ಆಹಾರ ಸೇವಿಸಿದ್ದು ಬಹಳ ಕಡಿಮೆ.