Advertisement
ರಥ ಎಳೆದ ಯೋಗಿ 14 ವರ್ಷಗಳ ವನವಾಸದ ಅನಂತರ ಪುಷ್ಪಕ ವಿಮಾನದಲ್ಲಿ ಅಯೋಧ್ಯೆಗೆ ಮರಳಿದ ಪ್ರಭು ರಾಮಚಂದ್ರ, ಸೀತಾದೇವಿ ಮತ್ತು ಲಕ್ಷ್ಮಣ ಸ್ವಾಮಿಯನ್ನು ಪ್ರತಿಬಿಂಬಿಸುವ ಕಲಾವಿದರು ಇದ್ದ ರಥ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅದನ್ನು ಎಳೆದರು. ಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಾಯಿತು.
ರಾಮಾಯಣ, ರಾಮಚರಿತಮಾನಸ, ಲಂಕಾ ದಹನ ಹಾಗೂ ವಿವಿಧ ಸಾಮಾಜಿಕ ಸಮಸ್ಯೆಗಳ ಥೀಮ್ ಹೊಂದಿದ್ದ 18 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ಉದಯಾ ಸ್ಕೇರ್‌ನಿಂದ ಆರಂಭಗೊಂಡು ರಾಮ ಕಥಾ ಪಾರ್ಕ್‌ನಲ್ಲಿ ಅದು ಸಂಪನ್ನಗೊಂಡಿತು.