Advertisement
ಮಂಗಳವಾರ ಬೆಳಗ್ಗೆ 6.30 ಗಂಟೆಗೆ ಮಂದಿರ ದರ್ಶನಕ್ಕೆ ಅವಕಾಶ ನೀಡಲಾಗಿದ್ದು 11 ಗಂಟೆಗೆ ದರ್ಶನ ಸ್ಥಗಿತಗೊಳಿಸಲಾಗಿದೆ. ಮತ್ತೆ ಮಧ್ಯಾಹ್ನ 2 ಗಂಟೆಯಿಂದ ದರ್ಶನ ಆರಂಭಿಸಿದ್ದು, ಆ ವೇಳೆಗಾಗಲೇ 2.5 ಲಕ್ಷಕ್ಕೂ ಅಧಿಕ ಮಂದಿ ಬಾಲರಾಮನ ದರ್ಶನ ಪಡೆದಿದ್ದಾರೆ. ಅಲ್ಲದೇ, ದೇಗುಲದ ಹೊರಗೆ ಇನ್ನೂ 2-3 ಲಕ್ಷ ಮಂದಿ ಭಕ್ತಾದಿಗಳು ದರ್ಶನಕ್ಕಾಗಿ ಕಾಯುತ್ತಿದ್ದಾರೆ ಎಂದು ಮಂದಿರ ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ. ಜನ ಸಂದಣಿ ಯನ್ನು ನಿಯಂತ್ರಿಸಲು ಭದ್ರತಾ ವ್ಯವಸ್ತೆಗಳನ್ನು ಮಾಡ ಲಾಗಿದ್ದು, 8,000 ಮಂದಿ ಪೊಲೀಸರನ್ನು ನಿಯೋಜಿ ಸಲಾಗಿದೆ. ಮಂದಿರ ದರ್ಶನ ಪಡೆದ ಭಕ್ತಾದಿಗಳು ಸರಯೂ ಘಾಟ್‌ನಲ್ಲಿ ನಡೆದ ಸಂಧ್ಯಾ ಆರತಿ ಯಲ್ಲೂ ಸಹಸ್ರ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ. ದೇಶದ ಬೇರೆ-ಬೇರೆ ಭಾಗಗಳಿಂದಲೂ ಭಕ್ತಾದಿಗಳು ಬರು ತ್ತಲೇ ಇರುವ ಹಿನ್ನೆಲೆಯಲ್ಲಿ ಇನ್ನೂ ಕೆಲ ದಿನ ಗಳವರೆಗೆ ಜನಸಂದಣಿ ಹೀಗೆ ಇರಲಿದೆ ಎನ್ನಲಾಗಿದೆ.
Related Articles
Advertisement
ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಿದ ಪ್ರಧಾನಿ ಮೋದಿ ಅವರು ಆ ಸಂಭ್ರಮದ ಕೆಲ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋ ಶೇರ್ ಆದ ಕೆಲವೇ ಗಂಟೆಯಲ್ಲೇ ಒಂದು ಕೋಟಿಗೂ ಅಧಿಕ ಮೆಚ್ಚುಗೆ (ಲೈಕ್ಸ್) ಗಳಿಸಿದೆ. ರಾಮಲಲ್ಲಾನಿಗೆ ಪುಷ್ಪ ಅರ್ಪಿಸುತ್ತಿರುವ ಫೋಟೋ ಹಂಚಿಕೊಂಡಿದ್ದ ಮೋದಿ “ಅಯೋಧ್ಯೆಯ ಕೆಲ ದೈವಿಕ ಸನ್ನಿವೇಶಗ ಳಿವು. ಪ್ರತಿಯೊಬ್ಬ ಭಾರತೀಯನೂ ಈ ದಿನವನ್ನು ಸ್ಮರಿಸುತ್ತಾನೆ. ಪ್ರಭು ಶ್ರೀರಾಮ ಸದಾಕಾಲ ನಮ್ಮನ್ನೆಲ್ಲ ಕಾಯಲಿ’ ಎಂದು ಕ್ಯಾಪ್ಶನ್ ನೀಡಿದ್ದರು. ಇನ್ನು ಟ್ವಿಟರ್‌ನಲ್ಲಿಯೂ ಕಾರ್ಯಕ್ರಮದ ವಿಡಿಯೋ ಹಂಚಿಕೊಂಡಿದ್ದು” ಜ.22ರಂದು ಅಯೋಧ್ಯೆಯಲ್ಲಿ ಏನು ಕಂಡೆವೋ ಅದು ಮುಂದಿನ ನಮ್ಮೆಲ್ಲ ವರ್ಷಗಳಲ್ಲೂ ನೆನಪಿನಲ್ಲಿರುತ್ತದೆ’ ಎಂದಿದ್ದರು. ಈ ವಿಡಿಯೋವನ್ನೂ 21 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಬಾಲಕರಾಮನ ದರ್ಶನ ವ್ಯವಸ್ಥೆ ಹೇಗೆ?
ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆ, ಮಧ್ಯಾಹ್ನ 3 ರಿಂದ ರಾತ್ರಿ 10 ಗಂಟೆ ವರೆಗೆ
ಪ್ರಸಕ್ತ ಜನಸಂದಣಿ ಹೆಚ್ಚಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 7ರಿಂದಲೇ ದರ್ಶನಕ್ಕೆ ಅವಕಾಶ
ಪಾಸ್ ಪಡೆಯುವುದು ಹೇಗೆ?
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ವೆಬ್‌ಸೈಟ್‌ನಲ್ಲಿ ಮೊಬೈಲ್ ಸಂಖ್ಯೆ ದಾಖಲಿಸಿ.
ಒಟಿಪಿ ಪಡೆದು ನಂತರ ಅಗತ್ಯ ಮಾಹಿತಿಗಳನ್ನು ಒದಗಿಸಿ ಆರತಿಗಳಿಗೆ ಸ್ಲಾಟ್ ಪಡೆಯಲು ಅವಕಾಶ.
ನಂತರ ದೇಗುಲ ಕೌಂಟರ್‌ನಲ್ಲಿ ಪಾಸ್ ಪಡೆಯಬಹುದು
ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯಂತೆ ಜ.29ರ ವರೆಗೆ ಆರತಿ ಮತ್ತು ದರ್ಶನ ಕೂಪನ್ ನೀಡಿಕೆ ರದ್ದು ಮಾಡಲಾಗಿದೆ.
ಎಷ್ಟು ಬಾರಿ ಆರತಿ?
ಬೆಳಗ್ಗೆ 6.30ಕ್ಕೆ ಶೃಂಗಾರ ಆರತಿ, ಮಧ್ಯಾಹ್ನ 12.30ಕ್ಕೆ ಭೋಗ್ ಆರತಿ, ಸಂಜೆ 7.30ಕ್ಕೆ ಸಂಧ್ಯಾ ಆರತಿ
ಕೇವಲ 30 ಮಂದಿಗೆ ಮಾತ್ರವೇ ಆರತಿಯಲ್ಲಿ ಭಾಗಿಯಾಗುವ ಅವಕಾಶ
ರಾಮಲಲ್ಲಾನಿಗೆ ಸಿಕ್ಕಿತು ಹೊಸ ಹೆಸರು; ಬಾಲಕ ರಾಮ
ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠೆಯಾಗಿರುವ ವಿಗ್ರಹವನ್ನು ಇನ್ನುಮುಂದೆ ಬಾಲಕರಾಮ ಎಂದು ಕರೆಯಲಾಗುತ್ತದೆ. ಈ ಬಗ್ಗೆ ಪ್ರಾಣ ಪ್ರತಿಷ್ಠೆ ನಡೆಸಿದ ಅರ್ಚಕರ ತಂಡದಲ್ಲಿದ್ದ ಅರುಣ್ ದೀಕ್ಷಿತ್ ಹೇಳಿದ್ದಾರೆ. ರಾಮಲಲ್ಲಾ ಎಂಬುದು ಪುಟ್ಟ ಮಗುವಾಗಿದ್ದ ರಾಮನ ಹೆಸರು. ಪ್ರತಿಷ್ಠಾಪನೆಗೊಂಡಿರುವ ವಿಗ್ರಹವು 5 ವರ್ಷದ ರಾಮನದ್ದಾಗಿರುವ ಹಿನ್ನೆಲೆಯಲ್ಲಿ ವಿಗ್ರಹವನ್ನು ಬಾಲಕ ರಾಮನೆಂದು ಕರೆಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಬುರ್ಜ್‌ಖಲೀಫಾದಲ್ಲಿ ಹಾಕಿದ್ದು ಶ್ರೀರಾಮನ ನಕಲಿ ಫೋಟೋ
ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿದ್ದಂತೆ ವಿಶ್ವದಾದ್ಯಂತ ರಾಮಭಕ್ತರು ಸಂಭ್ರಮ ಆಚರಿಸಿರುವ ಫೋಟೋಗಳು ಜಾಲತಾಣದ ತುಂಬೆಲ್ಲಾ ಹರಿದಾಡಿದ್ದವು. ಆ ಪೈಕಿ ದುಬೈನ ಬುರ್ಜ್ ಖಲಿಫಾದಲ್ಲಿಯೂ ರಾಮನ ಚಿತ್ರ ಪ್ರದರ್ಶಿಸಿರುವ ಚಿತ್ರ ಭಾರೀ ವೈರಲ್ ಆಗಿತ್ತು. ಆದರೀಗ ಅದು ಎಡಿಟೆಡ್ ಫೋಟೋ ಎಂದು ತಿಳಿದುಬಂದಿದೆ. ಲೇಸರ್ ಲೈಟ್‌ನಿಂದ ಅಲಂಕೃತಗೊಂಡ ಬುರ್ಜ್ ಮೇಲೆ ರಾಮನ ಚಿತ್ರ ಪ್ರದರ್ಶಿಸಿರುವುದು ಕಂಡು ಬಂದಿತ್ತು. ಆದರೆ, ನಿಜವಾಗಿ ಬುರ್ಜ್ ಬರೀ ಲೇಸರ್ ಲೈಟ್‌ಗಳಿಂದ ಅಲಂಕೃತಗೊಂಡಿತ್ತು ವಿನಃ ಅದರ ಮೇಲೆ ಯಾವುದೇ ಚಿತ್ರವನ್ನೂ ಪ್ರದರ್ಶಿಸಲಾಗಿಲ್ಲ ಎಂದು ಹಲವು ಫ್ಯಾಕ್ಟ್ಚೆಕ್ ವೆಬ್‌ಸೈಟ್‌ಗಳು ಖಚಿತಪಡಿಸಿವೆ
ಫೆ.22ರಂದು ಅಸ್ಸಾಂ ಸಂಪುಟ ಭೇಟಿ
ಮಂದಿರದ ಉದ್ಘಾಟನೆ ಪೂರ್ಣಗೊಂಡಿದ್ದು ಸಾರ್ವಜನಿಕ ದರ್ಶನಕ್ಕೆ ಮುಕ್ತ ಅವಕಾಶವಿರುವ ಹಿನ್ನೆಲೆಯಲ್ಲಿ ಫೆ.22ರಂದು ಅಸ್ಸಾಂ ಸರ್ಕಾರದ ಇಡೀ ಸಚಿವ ಸಂಪುಟವೇ ರಾಮ ಮಂದಿರಕ್ಕೆ ಭೇಟಿ ನೀಡುವುದಾಗಿ ಹೇಳಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.
ಇಸ್ರೇಲ್‌ನಲ್ಲೂ ಮಂದಿರ ಸಂಭ್ರಮ
ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಇಸ್ರೇಲಿನಲ್ಲಿರುವ ಭಾರತೀಯರು ಕೂಡ ಸಂಭ್ರಮ ಆಚರಿಸಿದ್ದಾರೆ. ಇಸ್ರೇಲ್‌ನ ಟೆಲ್ ಅವಿವ್ ನಗರದಲ್ಲಿ ಭಾರತದ ತೆಲಂಗಾಣ ಮೂಲದ ಹಿಂದೂಗಳ ಸಂಘಟನೆಯಾದ ತೆಲಂಗಾಣ ಅಸೋಸಿಯೇಷನ್ ವತಿಯಿಂದ ಕಾರ್ಯಕ್ರಮ ಆಯೋಜಿ ಸಲಾಗಿತ್ತು. ಭಜನೆ, ಪೂಜೆಗಳ ಜತೆಗೆ ಭಾರತೀಯ ಶೈಲಿಯಲ್ಲೇ ಅನ್ನ ದಾಸೋಹ ಏರ್ಪಡಿಸಲಾಗಿತ್ತು.
ರಾಜಸ್ಥಾನ ಶಿಲ್ಪಿ ಕೆತ್ತಿದ ಪ್ರತಿಮೆ ಫೋಟೋ ಬಿಡುಗಡೆ
ಕರ್ನಾಟಕದ ಮೈಸೂರಿನ ಶಿಲ್ಪಿ ಅರುಣ್ ಯೋಗಿ ರಾಜ್ ಅವರು ಕೆತ್ತನೆ ಮಾಡಿ ರುವ ರಾಮ ಲಲ್ಲಾನ ವಿಗ್ರಹ ಪ್ರಾಣ ಪ್ರತಿಷ್ಠೆಯಾದ ಬೆನ್ನಲ್ಲೇ ರಾಜಸ್ಥಾನದ ಶಿಲ್ಪಿ ಸತ್ಯನಾರಾಯಣ ಪಾಂಡೆ ಅವರು ಅಮೃತ ಶಿಲೆಯಲ್ಲಿ ಕೆತ್ತನೆ ಮಾಡಿ ರುವ ಬಾಲ ರಾಮನ ವಿಗ್ರಹದ ಫೋಟೋ ಬಿಡುಗಡೆಯಾಗಿದೆ. ಪಾಣಿಪೀಠದ ಮೇಲೆ, ಕಮಲದಳದ ಮಧ್ಯ ದಲ್ಲಿ ಬಾಲ ರಾಮ ನಿಂತಿ ರು ವಂತೆ ಮಾರ್ಬಲ್ ಕಲ್ಲಿನಲ್ಲಿ ವಿಗ್ರಹ ವನ್ನು ಕೆತ್ತನೆ ಮಾಡ ಲಾಗಿದ್ದು, ವಿಗ್ರಹದ ಹಿಂಬ ದಿ ಯಲ್ಲಿ ಪ್ರಭಾ ವಳಿಯನ್ನೂ ಕೆತ್ತನೆ ಮಾಡ ಲಾಗಿದೆ. ಅದರ ಪೂರ್ತಿ ವಿಷ್ಣುವಿನ ದಶಾ ವತಾರ ಕೆತ್ತನೆ ಗಳನ್ನು ಕೂಲಂಕ ಷವಾಗಿ ಮಾಡಲಾ ಗಿದೆ. ಕಮ ಲದ ಹೂ, ಗದೆ, ಹನುಮಂತ, ಸೂರ್ಯ ನ ಕೆತ್ತನೆ ಗಳನ್ನೂ ಪ್ರಭಾವಳಿ ಒಳಗೊಂಡಿದೆ. ಮಂದಿ ರಕ್ಕಾಗಿ ಒಟ್ಟು ಮೂವರು ಶಿಲ್ಪಿಗಳು ವಿಗ್ರಹ ಗಳನ್ನು ಕೆತ್ತನೆ ಮಾಡಿದ್ದರು. ಆ ಪೈಕಿ ಅರುಣ್ ಯೋಗಿ ಅವರು ಕೆತ್ತನೆ ಮಾಡಿದ್ದ ವಿಗ್ರಹವನ್ನು ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿದೆ. ಉಳಿದ 2 ವಿಗ್ರಹಗಳು ಪ್ರಸಕ್ತ ಟ್ರಸ್ಟ್‌ನ ಬಳಿಯೇ ಇದ್ದು, ಮಂದಿರದ ಬೇರೆ ಭಾಗಗಳಲ್ಲಿ ಅವು ಗಳನ್ನು ಸ್ಥಾಪಿಸಲಾಗುವುದು ಎನ್ನಲಾಗಿದೆ.
ನಮ್ಮ ಜೀವಮಾನದ ನೆನಪು: 14 ಯಜಮಾನರ ಹರ್ಷ
ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಮುಖ್ಯ ಯಜಮಾನ ಪೂಜೆ ನೆರವೇರಿಸಿದ 15 ದಂಪತಿಯು ಮಂದಿರ ಕಾರ್ಯಕ್ರಮದ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ. ಜ.22 ನಮ್ಮ ಜೀವಮಾನದ ನೆನಪಾಗಿರಲಿದೆ. ಈ ಅವಕಾಶ ಸಿಕ್ಕಿದ್ದು ನಮ್ಮ ಅದೃಷ್ಟ ಪ್ರಾಣ ಪ್ರತಿಷ್ಠೆಯಾದಾಗ ನಮಗೆ ಅರಿವಿಲ್ಲದೆಯೇ ಕಂಬನಿ ಜಾರಿದ್ದವು ಎಂದು ಹೇಳಿಕೊಂಡಿದ್ದಾರೆ. ಯಜಮಾನ ಪೂಜೆ ನೆರವೇರಿಸಲು ಎಲ್ಲ ವರ್ಗದಿಂದ (ದಲಿತರು, ಹಿಂದುಳಿದ ವರ್ಗ, ಬುಡಕಟ್ಟು ಸಮುದಾಯ ಸೇರಿದಂತೆ ) ದೇಶದ ವಿವಿಧ ಭಾಗಗಳಿಂದ 15 ದಂಪತಿಯನ್ನು ಆಯ್ಕೆ ಮಾಡಲಾಗಿತ್ತು.