Advertisement

ನಟಿ ಆಯೆಷಾ ಟಕಿಯಾ ಪತಿಗೆ ಬೆದರಿಕೆ ಕರೆ

08:45 AM Jul 30, 2017 | Team Udayavani |

ಮುಂಬಯಿ: ಬಾಲಿವುಡ್‌ ನಟಿ ಆಯೆಷಾ ಟಕಿಯಾ ಪತಿ ಫ‌ರ್ಹಾನ್‌ ಅಜ್ಮಿಗೆ ಸಂಘಟನೆಯೊಂದು ಬೆದರಿಕೆ ಹಾಕಿದೆ. ಹಿಂದೂ ಹುಡುಗಿ ಜತೆ ವಿವಾಹವಾಗಿರುವುದಕ್ಕೆ ಕಳೆದ ತಿಂಗಳ 26ರಂದು ಫೋನ್‌ ಮೂಲಕ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಫ‌ರ್ಹಾನ್‌ ಸಮಾಜವಾದಿ ಪಕ್ಷದ ನಾಯಕ ಅಬು ಅಜ್ಮಿ ಪುತ್ರ. ಫ‌ರ್ಹಾನ್‌ ಲವ್‌ ಜಿಹಾದ್‌ನಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವುದು ಸಂಘಟನೆಯ ಆರೋಪ. ‘ನೀವೆಲ್ಲ ಪ್ರಾಣಿಗಳು. ಲವ್‌ ಜೆಹಾದ್‌ನಲ್ಲಿ ತೊಡಗಿರುವುದನ್ನು ಮರೆತಿದ್ದೀರಾ ನೀವು? ಅದಕ್ಕಾಗಿಯೇ ಹಿಂದೂ ಹುಡುಗಿಯನ್ನು ಮದುವೆಯಾಗಿದ್ದೇ’ ಎಂದು ಕರೆ ಮಾಡಿದಾತ ಪ್ರಶ್ನಿಸಿದ್ದಾನೆ. ರಾಜಸ್ಥಾನ ಹಿಂದೂ ಸೇನಾ ಸಂಘಟನೆಯ ಹೆಸರಿನಲ್ಲಿ ಕರೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next