2.ಆ್ಯಸಿಡಿಟಿ ಆದಾಗ ಊಟವಾದ ಕೂಡಲೇ ಒಂದು ಗ್ಲಾಸ್ ನೀರಿಗೆ ಬೆಲ್ಲ ಹಾಕಿ ಕುಡಿದರೆ ಹೊಟ್ಟೆಯುರಿ ಕಡಿಮೆಯಾಗುತ್ತದೆ.
3. ಶುಂಠಿ, ಬೆಳ್ಳುಳ್ಳಿ , ಇಂಗು ಇವನ್ನು ಅಡುಗೆಯಲ್ಲಿ ಉಪಯೋಗಿಸುವುದರಿಂದ ಗ್ಯಾಸ್ಟ್ರಿಕ್‌ನಿಂದ ದೂರವಿರಬಹುದು.
4.ಆ್ಯಸಿಡಿಟಿ ಇದ್ದವರು ಕಾಫಿ ಟೀ ಯನ್ನು ಕುಡಿಯುವ ಬದಲು ತಣ್ಣನೆಯ ಹಾಲನ್ನು ದಿನಕ್ಕೆ ಎರಡು ಮೂರು ಬಾರಿ ಕುಡಿದರೆ ಒಳಿತು.
5. ನಮ್ಮ ನಿತ್ಯದ ಆಹಾರದೊಂದಿಗೆ ಬಾಳೆಹಣ್ಣು, ಹಸಿ ಸೌತೆಕಾಯಿ, ಎಳನೀರು, ಕಲ್ಲಂಗಡಿ ಹಣ್ಣಿನ ರಸವನ್ನು ಕುಡಿಯುತ್ತಿದ್ದರೆ ಹೊಟ್ಟೆಯುರಿಯಿಂದ ದೂರವಿರಬಹುದು.
6. ಊಟದ ನಂತರ ನಿತ್ಯ ಒಂದು ಲೋಟ ಬಿಸಿನೀರು ಕುಡಿಯುವ ಅಭ್ಯಾಸ ಒಳ್ಳೆಯದು.
7. ಬಡೇಸೊಪ್ಪು, ಲವಂಗಗಳನ್ನು ಊಟದ ನಂತರ ಜಗಿದರೆ ಜೀರ್ಣಕ್ರಿಯೆಗೆ ಸಹಕಾರಿ.
8. ನಿತ್ಯೋಪಯೋಗಿ ಆಹಾರವಾದ ಪಾಲಿಷ್ ಮಾಡದೇ ಇರುವ ರೆಡ್‌ರೈಸ್ ರುಚಿಕರವೂ ಹೌದು, ಆ್ಯಸಿಟಿಡಿಯ ನಿವಾರಕವೂ ಹೌದು.
9. ಆ್ಯಸಿಡಿಯಿಂದ ಎದೆಯುರಿ ಹೊಟ್ಟೆಯುರಿ ಕಾಣಿಸಿಕೊಂಡಾಗ ಲೋಳೆರಸದ ಜ್ಯೂಸ್‌ನ್ನು ಮಾಡಿ ಕುಡಿದರೂ ಉರಿ ಬೇಗನೆ ಶಮನವಾಗುತ್ತೆ.
Advertisement