Advertisement

ಶಿವಮೊಗ್ಗ: ಸಿಡಿಲು ಬಡಿದು ಯುವಕ ಸಾವು

09:21 AM Mar 29, 2021 | keerthan |

ಶಿವಮೊಗ್ಗ: ಅಕಾಲಿಕ ಮಳೆ ವೇಳೆ ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಆಯನೂರಿನಲ್ಲಿ ನಡೆದಿದೆ. ಶಿವಮೊಗ್ಗದ ಅಣ್ಣಾನಗರದ ನಿವಾಸಿ ಆದಿಲ್ (18) ಮೃತ ದುರ್ದೈವಿ.

Advertisement

ಆದಿಲ್ ಅವರ ಮಾವ ಆಯನೂರಿನ ಶಾಕೀರ್ ಅವರ ಶುಂಠಿ ಕಣದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಿಡಿದಿದೆ. ಗಂಭೀರ ಗಾಯಗೊಂಡ ಆದಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇದನ್ನೂ ಓದಿ:ಕುಡಿದು ಕಾರು ಚಲಾಯಿಸಿ ಪಾದಚಾರಿಗೆ ಢಿಕ್ಕಿ ಹೊಡೆದ ಪಿಡಬ್ಲ್ಯೂಡಿ ಎಇಇ: ಪಾದಚಾರಿ ಸಾವು

ಮಳೆಯಿಂದ ಶುಂಠಿ ಹಾಳಾಗಲಿದೆ ಎಂದು ಟಾರ್ಪಲಿನ್ ಮುಚ್ಚಲು ಆದಿಲ್ ತೆರಳಿದ್ದ. ಈ ವೇಳೆ ಘಟನೆ ಸಂಭವಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next