Advertisement

ಬಿಎಸ್ ವೈ ಅವರಿಂದ ಯತ್ನಾಳ್ ಶಾಸಕರಾಗಿದ್ದು, ಮಾತನಾಡುವ ಮೊದಲು ಯೋಚಿಸಲಿ: ಅಯನೂರು

04:55 PM May 30, 2020 | keerthan |

ಶಿವಮೊಗ್ಗ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಆಡಿರುವ ಮಾತುಗಳನ್ನು ಒಪ್ಪಲು ಸಾಧ್ಯವಿಲ್ಲ. ಇತ್ತೀಚೆಗೆ ಪ್ರಚಾರಕ್ಕಾಗಿ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರ ಹದ್ದುಮೀರಿದ ಹೇಳಿಕೆಗಳನ್ನು ಯಾರೂ ಒಪ್ಪಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

Advertisement

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರ ಹೇಳಿಕೆಗಳನ್ನು ಪಕ್ಷ ಗಂಭಿರವಾಗಿ ಪರಿಗಣಿಸಬೇಕು.  ಪಕ್ಷ ಯತ್ನಾಳ್ ಅವರನ್ನು ಕ್ಷಮಿಸಬಾರದು. ರಾಜ್ಯಾಧ್ಯಕ್ಷರು ಇಂಥವರಿಗೆಲ್ಲಾ ಶೋಕಾಸ್  ನೋಟೀಸ್ ಜಾರಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು.

ಯಾವುದೇ ಹೇಳಿಕೆ ನೀಡುವ ಸ್ವಾತಂತ್ರ್ಯ ಇದೆ. ಆದರೆ, ಸ್ವಾತಂತ್ರ್ಯಕ್ಕೂ ಒಂದು ಮಿತಿ ಇದೆ. ನಾನೇ ಸೀನಿಯರ್ ಎಂದು ಹೇಳಿಕೊಳ್ಳುವ ಭ್ರಮೆಯಿಂದ ಯತ್ನಾಳ್ ಹೊರಬರಬೇಕು. ನಿಮಗಿಂತ ಹಿರಿಯರು ತುಂಬಾ ಜನ ಇದ್ದಾರೆ ಎಂದರು.

ವಿವಾದಿತ ಹೇಳಿಕೆಗಳ ನೀಡುವ ಮೂಲಕ ನೆಗೆಟಿವ್ ಪ್ರಚಾರ ಪಡೆಯುತ್ತಿದ್ದಾರೆ. ಯಡಿಯೂರಪ್ಪ ಅವರ ವಿರುದ್ಧವಾಗಿ ಹೇಳಿಕೆ ನೀಡುವ ಮುನ್ನ ಒಮ್ಮೆ ಯೋಚಿಸಬೇಕು. ಯಡಿಯೂರಪ್ಪ ಸರ್ವಮಾನ್ಯ ಸಮೂಹ ನಾಯಕರು. ಬಿಎಸ್ ವೈ ಅವರ ಹೆಸರಿಂದ ಶಾಸಕರಾದವರು ತುಂಬಾ ಜನರಿದ್ದಾರೆ. ಅವರಿಂದ ಶಾಸಕರಾದವರಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಕೂಡ ಒಬ್ಬರು‌ ಆಯನೂರು ಮಂಜುನಾಥ್ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next