Advertisement

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿ ವಿಧಾನ ಪರಿಷತ್ತು ಸದಸ್ಯ Ayanur Manjunath

07:47 PM Apr 19, 2023 | Team Udayavani |

ಹುಬ್ಬಳ್ಳಿ: ವಿಧಾನ ಪರಿಷತ್ತು ಬಿಜೆಪಿ ಸದಸ್ಯ ಆಯನೂರು ಮಂಜುನಾಥ ಅವರು ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದರು.

Advertisement

ವಿಧಾನಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿಯವರ ಗೃಹ ಕಚೇರಿಗೆ ಬುಧವಾರ ಸಂಜೆ 5:30 ಗಂಟೆ ಸುಮಾರಿಗೆ ಆಗಮಿಸಿದ ಅವರು, ಸಭಾಪತಿ ಎದುರಲ್ಲಿ ಕೈ ಬರಹದೊಂದಿಗೆ ರಾಜೀನಾಮೆ ಪತ್ರ ಬರೆದು ಸಲ್ಲಿಸಿದರು.

ರಾಜೀನಾಮೆ ಪತ್ರ ಸ್ವೀಕರಿಸಿದ ಸಭಾಪತಿಯವರು, ರಾಜೀನಾಮೆ ಅಂಗೀಕರಿಸಿದ್ದಾಗಿ ತಿಳಿಸಿದರು.

ಒಂದು ವರ್ಷದಲ್ಲಿ ಒಟ್ಟು ಆರು ಜನ ಪರಿಷತ್ತು ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ. ವಿಧಾನಸಭೆ ಚುನಾವಣೆ ಪ್ರಕ್ರಿಯೆ ಆರಂಭವಾದ ನಂತರ ಐವರು ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ ಎಂದರು.

ಇದನ್ನೂ ಓದಿ: Congress ಹೈಕಮಾಂಡ್ ಆದೇಶವೇ ಅಂತಿಮ: ಸ್ಪರ್ಧೆ ಮಾಡೋಲ್ಲ- ಉಮಾಶ್ರೀ ಸ್ಪಷ್ಟನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next