Advertisement

ಅಯನದೊಳಗೊಂದು ಸಾಫ್ಟ್ ಸ್ಟೋರಿ

04:05 PM Sep 03, 2017 | Team Udayavani |

ಕನ್ನಡ ಚಿತ್ರರಂಗಕ್ಕೆ ಸಾಫ್ಟ್ವೇರ್‌ ಕ್ಷೇತ್ರದಿಂದ ಸಾಕಷ್ಟು ಮಂದಿ ಬಂದಿದ್ದಾರೆ, ಬರುತ್ತಿದ್ದಾರೆ. ಅದಕ್ಕೆ ಕಾರಣ ಚಿತ್ರರಂಗದ ಆಕರ್ಷಣೆ ಎಂದರೆ ತಪ್ಪಲ್ಲ. ಸಾಫ್ಟ್ವೇರ್‌ ಫೀಲ್ಡ್‌ ನಿಂದ ಬಂದವರು ನಿರ್ದೇಶನ, ನಟನೆ, ಸಂಗೀತ … ಹೀಗೆ ಚಿತ್ರರಂಗದ ಬೇರೆ ಬೇರೆ ವಿಭಾಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಈಗ ಒಂದು ಸಾಫ್ಟ್ವೇರ್‌ ತಂಡ ಸಾಫ್ಟ್ವೇರ್‌ ಕ್ಷೇತ್ರದ ಕುರಿತಾಗಿಯೇ ಸಿನಿಮಾ ಮಾಡಿದೆ. ಈಗ ಆ ಚಿತ್ರ ಬಿಡುಗಡೆಗೂ ರೆಡಿಯಾಗಿದ್ದು, ಸೆಪ್ಟೆಂಬರ್‌ 8ರಂದು ತೆರೆಕಾಣುತ್ತಿದೆ. ಹೀಗೆ ಸಾಫ್ಟ್ವೇರ್‌ ಮಂದಿ ತಮ್ಮ ಕ್ಷೇತ್ರದ ವಿಷಯವನ್ನೇ ಇಟ್ಟುಕೊಂಡು ಮಾಡಿರುವ ಸಿನಿಮಾ “ಅಯನ’.

Advertisement

ಹೌದು, “ಅಯನ’ ಎಂಬ ಚಿತ್ರವನ್ನು ಗಂಗಾಧರ್‌ ಸಾಲಿಮಠ ನಿರ್ದೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ಸ್ನೇಹಿತರೊಂದಿಗೆ ಸೇರಿ ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಅಂದಹಾಗೆ, ಗಂಗಾಧರ್‌ ಸಾಲಿಮಠ ಸಾಫ್ಟ್ವೇರ್‌ ಇಂಜಿನಿಯರ್‌ ಆಗಿದ್ದವರು. ಸದ್ಯ ಆ ಕೆಲಸಕ್ಕೆ ಗುಡ್‌ ಬೈ ಹೇಳಿ 19 ತಿಂಗಳ ಶ್ರಮದೊಂದಿಗೆ “ಅಯನ’ ಎಂಬ ಸಿನಿಮಾ ಮಾಡಿದ್ದಾರೆ. ಸಾಫ್ಟ್ವೇರ್‌ ಕ್ಷೇತ್ರದಿಂದ ಬಂದ ಅವರು ತಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿದ ಸಬೆjಕ್ಟ್ ಕೂಡಾ ಸಾಫ್ಟ್ವೇರ್‌ ಮಂದಿಯದ್ದೇ. ಸಾಫ್ಟ್ವೇರ್‌ ಕ್ಷೇತ್ರದ ಮಂದಿ ತಮ್ಮ ಕನಸಿನ ಬೆನ್ನತ್ತಿ ಹೊಸ ಕಾರ್ಯಕ್ಕೆ ಕೈ ಹಾಕಿದಾಗ ಅವರ ಜೀವನದಲ್ಲಿ ಏನೆಲ್ಲಾ ಆಗುತ್ತದೆ ಎಂಬ ಅಂಶದೊಂದಿಗೆ “ಅಯನ’ ಸಿನಿಮಾ ಮಾಡಿದ್ದಾರೆ. 

ಕೆಲವು ನಿರ್ಧಾರಗಳಿಂದ ಆರ್ಥಿಕ ಹಾಗೂ ಕೌಟುಂಬಿಕವಾಗಿ ಯಾವ ರೀತಿಯ ಸಮಸ್ಯೆಗಳು ಬರುತ್ತವೆ ಎಂಬ ಅಂಶದೊಂದಿಗೆ ಈ ಸಿನಿಮಾ ಮಾಡಿದ್ದಾರಂತೆ. ಮತ್ತೂಂದು ವಿಶೇಷವೆಂದರೆ ಚಿತ್ರದಲ್ಲಿ ನಟಿಸಿರುವ  ಬಹುತೇಕ ಕಲಾವಿದರು ಕೂಡಾ ಹೊಸಬರಾಗಿದ್ದು, ಸಾಫ್ಟ್ ವೇರ್‌ ಹಿನ್ನೆಲೆಯವರೆಂಬುದು ವಿಶೇಷ.

ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ದೀಪಕ್‌ ಕೂಡಾ ಸಾಫ್ಟ್ವೇರ್‌ ಕ್ಷೇತ್ರದಿಂದ ಬಂದವರು. ನಾಯಕಿ ಅಪೂರ್ವ ಸೋಮ ಸೇರಿದಂತೆ ಚಿತ್ರದಲ್ಲಿ ನಾಯಕನ ಸ್ನೇಹಿತರಾಗಿ ನಟಿಸಿದವರೆಲ್ಲರೂ ಇವತ್ತಿಗೂ ಸಾಫ್ಟ್ವೇರ್‌ ಕಂಪೆನಿಯ ಉದ್ಯೋಗಿಗಳು. ವೃತ್ತಿ ಜೊತೆಗೆ ಸಿನಿಮಾ ಪ್ರವೃತ್ತಿಯಿಂದ ಈಗ ಎಲ್ಲರೂ ಒಟ್ಟಾಗಿ ಸಿನಿಮಾ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next