Advertisement

ಜಯಲಲಿತಾ ನಿಧನ ಪ್ರಕರಣ: ಶಶಿಕಲಾ, ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ತನಿಖೆಗೆ ಆಯೋಗ ಸಲಹೆ

01:23 PM Oct 18, 2022 | Team Udayavani |

ಚೆನ್ನೈ:ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಸಾವಿನ ಕುರಿತು ತನಿಖೆ ನಡೆಸಿದ್ದ ನಿವೃತ್ತ ನ್ಯಾ.ಎ.ಅರ್ಮುಗಾಸ್ವಾಮಿ ನೇತೃತ್ವದ ಆಯೋಗ ಸಲ್ಲಿಸಿದ್ದ ವರದಿಯನ್ನು ತಮಿಳುನಾಡು ಸರ್ಕಾರ ಮಂಗಳವಾರ (ಅಕ್ಟೋಬರ್ 18) ವಿಧಾನಸಭೆಯಲ್ಲಿ ಮಂಡಿಸಿದೆ.

Advertisement

ಇದನ್ನೂ ಓದಿ:Video; 1500 ರೂ. ವಾಪಸ್‌ ನೀಡದಕ್ಕೆ ಹಗ್ಗದಿಂದ ಬೈಕ್‌ ಗೆ ಕೈ ಕಟ್ಟಿ ಎಳೆದೊಯ್ದ ದುರುಳರು…

ವರದಿಯ ಪ್ರಕಾರ, ಜಯಲಲಿತಾ ಅವರ ಸಾವನ್ನು ಅಪರಾಧ ಎಂದು ಪರಿಗಣಿಸಿ ತನಿಖೆಗೆ ಆದೇಶಿಸಬಹುದಾಗಿದೆ ಎಂದು ಆಯೋಗ ವರದಿಯಲ್ಲಿ ತಿಳಿಸಿದ್ದು, ನಿಕಟವರ್ತಿ ಶಶಿಕಲಾ ಮತ್ತು ಜಯಲಲಿತಾ ಉತ್ತಮ ಸಂಬಂಧ ಹೊಂದಿಲ್ಲ ಎಂದು ಹೇಳಿದೆ.

ಜಯಲಲಿತಾ ಅವರ ಸಾವಿನ ಕುರಿತು ಆಯೋಗ ಸುದೀರ್ಘ ವರದಿಯನ್ನು ನೀಡಿದ್ದು, ಈ ಪ್ರಕರಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿ ಮತ್ತು ವಿ.ಕೆ.ಶಶಿಕಲಾ ವಿರುದ್ಧ ಗಂಭೀರವಾದ ಆರೋಪದ ಬಗ್ಗೆ ಟಿಪ್ಪಣಿ ನೀಡಿರುವುದಾಗಿ ವರದಿ ವಿವರಿಸಿದೆ.

ಎಐಎಡಿಎಂಕೆ ಸರ್ಕಾರ ಆಡಳಿತ ನಡೆಸುತ್ತಿದ್ದ ವೇಳೆ 2017ರಲ್ಲಿ ಜಯಲಲಿತಾ ನಿಧನದ ಬಗ್ಗೆ ತನಿಖೆ ನಡೆಸಲು ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಎ.ಅರ್ಮುಗಾಸ್ವಾಮಿ ನೇತೃತ್ವದ ಆಯೋಗವನ್ನು ರಚಿಸಿತ್ತು. ಅಪೋಲೋ ಆಸ್ಪತ್ರೆಯಲ್ಲಿ ಜಯಲಲಿತಾಗೆ ನೀಡಿದ ಚಿಕಿತ್ಸೆ ಮತ್ತು ಜಯಲಲಿತಾ ಅನಾರೋಗ್ಯದ ಕುರಿತ ಸಂಚಿನ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿತ್ತು.

Advertisement

2021ರಲ್ಲಿ ಡಿಎಂಕೆ ಅಧಿಕಾರದ ಗದ್ದುಗೆ ಏರುವ ಸಂದರ್ಭದಲ್ಲಿ ಮಾಜಿ ಸಿಎಂ ಜಯಲಲಿತಾ ಅವರ ನಿಧನದ ಬಗ್ಗೆ ತನಿಖೆ ನಡೆಸುವುದಾಗಿ ಭರವಸೆ ನೀಡಿತ್ತು. ಈ ಬಗ್ಗೆ ವಿಸ್ತೃತ ತನಿಖೆ ನಡೆಸಿದ್ದ ನ್ಯಾ.ಎ.ಅರ್ಮುಗಾಸ್ವಾಮಿ ಆಗಸ್ಟ್ ನಲ್ಲಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತ್ತು.

ಇಂದು ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ವರದಿಯನ್ನು ಮಂಡಿಸಿದೆ. ಜಯಲಲಿತಾ ನಿಧನದ ಸಮಯದಲ್ಲಿ ಉನ್ನತ ಅಧಿಕಾರಿಯಾಗಿದ್ದ ಮುಖ್ಯ ಕಾರ್ಯದರ್ಶಿ ಡಾ.ರಾಮ ಮೋಹನ್ ರಾವ್ ಸಂಚಿನ ಭಾಗದ ದೋಷಿತರಾಗಿದ್ದಾರೆ ಎಂದು ವರದಿ ಹೇಳಿದೆ. ಅದೇ ರೀತಿ ಈ ಪ್ರಕರಣದಲ್ಲಿ ಆರೋಗ್ಯ ಸಚಿವ ವಿಜಯ್ ಭಾಸ್ಕರ್ ಕುರಿತಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದ್ದು, ಜಯಲಲಿತಾ ಆರೋಗ್ಯ ಸ್ಥಿತಿ ಬಗ್ಗೆ ಅಪೋಲೋ ಆಸ್ಪತ್ರೆಯ ಅಧ್ಯಕ್ಷ ಡಾ.ಪ್ರತಾಪ್ ರೆಡ್ಡಿ ಸುಳ್ಳು ಪ್ರಕಟಣೆ ನೀಡಿರುವುದಾಗಿ ತಿಳಿಸಿದೆ.

ಆಪ್ತೆ ವಿ.ಕೆ.ಶಶಿಕಲಾ ದಶಕಗಳ ಕಾಲ ಜಯಲಲಿತಾ ಜೊತೆ ಪೋಯೆಸ್ ಗಾರ್ಡನ್ ನಿವಾಸದಲ್ಲಿ ವಾಸವಾಗಿದ್ದರು. ಜಯಲಲಿತಾ ನಿಧನದ ನಂತರ ಅಕ್ರಮ ಆಸ್ತಿ ಪ್ರಕರಣದಲ್ಲಿನ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 2017ರಲ್ಲಿ ವಿಕೆ ಶಶಿಕಲಾ ಬಂಧನಕ್ಕೊಳಗಾಗಿದ್ದರು. ಈ ಕೇಸ್ ನಲ್ಲಿ ಜಯಲಲಿತಾ ಪ್ರಮುಖ ಆರೋಪಿಯಾಗಿದ್ದರು. ನಾಲ್ಕು ವರ್ಷಗಳ ಜೈಲುಶಿಕ್ಷೆಯ ನಂತರ ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next