Advertisement
ಪ್ರತಿ ಎರಡು ವರ್ಷಗಳಿಗೆ ಒಮ್ಮೆ ನಡೆಯುವ ದೇಶದ ಅತಿ ದೊಡ್ಡ ಆಟೋ ಪ್ರದರ್ಶನಕ್ಕೆ ರಾಷ್ಟ್ರ ರಾಜಧಾನಿ ಸಾಕ್ಷಿಯಾಗಿತ್ತು. ಫೆಬ್ರವರಿ 7ರಿಂದ 12ರ ವರೆಗೆ ನಡೆದ ಅಟೋ ಎಕ್ಸ್‌ಪೋ ಹಲವು ವಿಶೇಷತೆಗಳಿಗೆ ಕಾರಣವಾಗಿದೆ. ವಾಹನ ಉತ್ಪಾದನಾ ಸಂಸ್ಥೆಗಳಿಗೆ ತಮ್ಮ ಭವಿಷ್ಯದ ವಾಹನ ಮಾದರಿಗಳನ್ನು ಸಾರ್ವಜನಿಕವಾಗಿ ಪ್ರದರ್ಶನಗೊಳಿಸುವ ಪ್ರಮುಖ ವೇದಿಕೆ ಇದು. ವಿವಿಧ ಮಾದರಿಯ ಕಾರುಗಳು, ಬೈಕ್‌ಗಳು, ವಾಣಿಜ್ಯ ವಾಹನಗಳು, ಎಲೆಕ್ಟ್ರಿಕ್ ವಾಹನಗಳು ಮತ್ತು ಪರಿಕಲ್ಪನೆಯ ವಾಹನ ಮಾದರಿಗಳು ಜನರನ್ನು ಆಕರ್ಷಿಸಿದ್ದವು.
Related Articles
ಈ ಬಾರಿಯ ಎಕ್ಸ್‌ಪೋ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಪ್ರದರ್ಶನಕ್ಕೆ ಸಾಕ್ಷಿಯಾಗಿವೆ. ಬೈಕ್ ಮತ್ತು ಸ್ಕೂಟರ್ ಮಾದರಿಗಳು ಹೆಚ್ಚಿನ ಮಟ್ಟದಲ್ಲಿ ಎಲೆಕ್ಟ್ರಿಕ್ ಆವೃತ್ತಿಗಳು ಪ್ರದರ್ಶನ ಕಂಡಿವೆ. ಜತೆಗೆ ಏಪ್ರಿಲಿಯಾ ಮತ್ತು ವೆಸ್ಪಾ 160 ಸಿಸಿ ಸ್ಕೂಟರ್ ಮಾದರಿಗಳು ಸಹ ಜನರನ್ನು ಆಕರ್ಷಿಸಿತ್ತು. ಹಲವು ದ್ವಿಚಕ್ರವಾಹನಗಳಲ್ಲೂ ಎಲೆಕ್ಟ್ರಿಕ್ ಮಾದರಿ ಗಮನ ಸೆಳೆದಿದ್ದವು.
Advertisement
ಕಾನ್ಸೆಫ್ಟ್ ಕಾರುಗಳುವಿನೂತನ ವಿನ್ಯಾಸದ ಪರಿಕಲ್ಪನೆ ವಾಹನಗಳು ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಒಂದು ವಾಹನ ನಿರ್ಮಾಣಕ್ಕೂ ಮುನ್ನ ಪರಿಕಲ್ಪನೆಯ (ಕಾನ್ಸೆಫ್ಟ್) ಆಧಾರದ ಮೇಲೆ ನಿರ್ಮಾಣ ಮಾಡುವುದು ವಾಡಿಕೆ. ಇದರಿಂದ ಭವಿಷ್ಯ ವಾಹನ ಮಾದರಿಗಳನ್ನು ಜಗತ್ತಿಗೆ ಪರಿಚಯಿಸುವುದಕ್ಕೂ ಮುನ್ನ ಗ್ರಾಹಕರ ಕುತೂಹಲ ತಿಳಿಯಲು ಇದು ಪ್ರಮುಖ ವೇದಿಕೆಯಾಗಿತ್ತು. ಇದೀಗ ಟಾಟಾ ಆಲೊóಜ್ ಎಲೆಕ್ಟ್ರಿಕ್, ಮಹೀಂದ್ರಾ ಫನ್ಸ$rರ್ ಸೇರಿದಂತೆ ಹಲವು ಪರಿಕಲ್ಪನೆ ವಾಹನಗಳು ಈ ಬಾರಿಯ ಆಟೋ ಎಕ್ಸ್‌ಪೋದಲ್ಲಿ ಭಾಗವಹಿಸಿದ್ದವು. 30 ಕಂಪೆನಿಗಳು
ಈ ಬಾರಿಯ ಆಟೋ ಎಕೊÕ$³àದಲ್ಲಿ ಭಾರತ ಸೇರಿದಂತೆ ವಿಶ್ವದ ಪ್ರತಿಷ್ಠಿತ 30 ಆಟೋಮೊಬೈಲ್ ಕಂಪನಿಗಳು ಪಾಲ್ಗೊಂಡಿವೆ. 70 ವಾಹನಗಳು ಅನಾವರಣಗೊಂಡಿದೆ. ಗ್ರೀನ್ ಎಕ್ಸ್‌ಪೋ
ಈ ಬಾರಿಯ ಅಟೋ ಎಕ್ಸ್‌ಪೋದಲ್ಲಿ ಇಂಧನ ಕಾರುಗಳಿಗಿಂತ ಎಲೆಕ್ಟ್ರಿಕ್ ಕಾರುಗಳ ಭರಾಟೆ ಜೋರಿತ್ತು. ಜಗತ್ತಿನ ಪ್ರಸಿದ್ಧ ಕಾರು ತಯಾರಕ ಸಂಸ್ಥೆಗಳು ತಮ್ಮ ಮುಂದಿನ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಿದ್ದವು. ಇಲ್ಲಿ ಮುಂದಿನ ದಿನಗಳಲ್ಲಿ ಭಾರತಕ್ಕೆ ಬರಲಿರುವ ಕೆಲವು ಎಲೆಕ್ಟ್ರಿಕ್ ಕಾರುಗಳ ಪರಿಚಯವನ್ನು ಇಲ್ಲಿ ನೀಡಲಾಗಿದೆ. ಟಾಟಾ ಸಫಾರಿ ಸಿಯೆರಾ
ಟಾಟಾ ಸಫಾರಿ ಸಿಯೆರಾ ಕಾರು ಪ್ರದರ್ಶನದಲ್ಲಿ ಜಾಗಪಡೆದಿತ್ತು. ಇದು ಹಳೆಯ ಕಾರನ್ನು ನೆನಪಿಸುವಂತಹ ಡಿಸೈನ್ ಹೊಂದಿತ್ತು, ಮಾತ್ರವಲ್ಲದೇ ವಾಹನದ ವಿನ್ಯಾಸ ಮತ್ತು ಗ್ರೌಂಡ್ ಕ್ಲಿಯರೆನ್ಸ್ ಚೆನ್ನಾಗಿದೆ. ವಿಡಬ್ಲ್ಯು ಐಡಿ ಕ್ರೋಝ್
ಮತ್ತೂಂದು ಎಲೆಕ್ಟ್ರಿಕ್ ಕಾರು ವೋಕ್ಸ್‌ವೇಗನ್ ಸಂಸ್ಥೆಯ ವಿಡಬ್ಲ್ಯು ಐಡಿ ಕ್ರೋಝ್. ಇದರ ಬ್ಯಾಟರಿಯನ್ನು 30 ನಿಮಿಷದಲ್ಲಿ ಸುಮಾರು ಶೇ. 80ರಷ್ಟು ಚಾರ್ಜ್ ಮಾಡಬಹುದಾಗಿದೆ. ಮಾತ್ರವಲ್ಲದೇ ಇದರ ಗರಿಷ್ಠ ವೇಗ 180 ಕಿ.ಮೀ./ಗಂಟೆ. ರೆನಾಲ್ಟ್ ಝೆಡ್‌ಒಇ
ಇದು ಯುರೋಪಿನಲ್ಲಿ ಅತೀ ಹೆಚ್ಚು ಮಾರಾಟವಾಗುವ ಕಾರು. 2012ರ ಜಿನೆವಾ ಮೋಟಾರ್ ಶೋನಲ್ಲಿ ಬಿಡುಗಡೆಯಾದ ಈ ಕಾರು ದಿಲ್ಲಿ ಎಕ್ಸ್‌ಪೋದಲ್ಲಿ ಪ್ರಮುಖ ಆಕರ್ಷಣೆಯಾಗಿತ್ತು. 2012 ಬಿಡುಗಡೆಯಾಗ ಕಾರಾದರೂ ಇಂದು ಇದನ್ನು ಆಧುನಿಕವಾಗಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಅಟೋ ಪಾರ್ಕಿಂಗ್ ಬ್ರೇಕ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಕಿಯಾ ನಿರೋ
ಕಿಯಾ ಸಂಸ್ಥೆಯ ನಿರೋ ಕಾರು ಎಲೆಕ್ಟ್ರಿಕ್ ಕಾರುಗಳತ್ತ ಹೆಚ್ಚು ಗಮನಹರಿಸುತ್ತಿದೆ. ಇದರಲ್ಲಿ ಲಿಕ್ವಿಡ್ ಕೂಲ್ಡ್ 64 ಕಿ.ವ್ಯಾ. ಲಿಥಿಯಂ ಐಯಾನ್ ಪಾಲಿಮಾರ್ ಬ್ಯಾಟರಿ ಹೊಂದಿದೆ. ಜತೆಗೆ ಉತ್ತಮ ಕ್ಯಾಬಿನ್ ಸ್ಟೇಸ್ ಒಳಗೊಂಡಿದೆ. ಒಮ್ಮೆ ಚಾರ್ಜ್ ಮಾಡಿದರೆ 450 ಕಿ.ಮೀ. ಚಲಿಸಬಹುದಾಗಿದೆ. ಹೈಮಾ ಇವಿ 1
ಚೀನದ ಹೈಮಾ ಗ್ರೂಪ್‌ನ ಇವಿ 1 ಮಾದರಿ ವಾಹನ ಎಕ್ಸ್‌ಪೋದಲ್ಲಿ ಹೆಚ್ಚು ಗಮನ ಸೆಳೆದ ವಾಹನಗಳ ಪೈಕಿ ಒಂದು. ಇದು ಎರಡು ಮಾದಿ ವಾಹನಗಳನ್ನು ಪರಿಚಯಿಸಲಿದೆ. ಒಂದು ಒಮ್ಮೆ ಚಾರ್ಜ್ ಮಾಡಿದರೆ 200 ಕಿ.ಮೀ. ಮೈಲೇಜ್ ಹಾಗೂ 300 ಕಿ.ಮೀ. ಮೈಲೇಜ್ ನೀಡಲಿದೆ.